Advertisement

Journey: ಸೆಟ್ಟೇರಿದ ಸ್ನೇಹಿತರ ನಡುವಿನ ಸಿನಿಮಾ

05:20 PM Nov 28, 2023 | Team Udayavani |

ಐದು ಜನ ಸ್ನೇಹಿತರ ಸುತ್ತ ನಡೆಯುವ “ಜರ್ನಿ’ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಚಿತ್ರವನ್ನು ಅಗ್ನಿ ನಿರ್ದೇಶನ ಮಾಡುತ್ತಿದ್ದಾರೆ.

Advertisement

ನಿರ್ದೇಶಕ ಅಗ್ನಿ ಮಾತನಾಡಿ, “5 ಜನ ಸ್ನೇಹಿತರ ನಡುವೆ ನಡೆಯುವ ಕಥೆ. ಕಾಲೇಜ್‌ ನಂತರ ದಿನಗಳನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಹಾಸನ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ನಿರ್ದೇಶಕನಾಗಿ ನನಗೆ ಇದು ಮೊದಲ ಸಿನಿಮಾ. ನಿರೂಪಕನಿಂದ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುತ್ತಿದ್ದೇನೆ’ ಎಂದರು.

ದಿನಿ ಈ ಸಿನಿಮಾದ ನಾಯಕ. “ಅಗ್ನಿ ಅವರು ಹೇಳಿದ ಕಥೆ ಇಷ್ಟವಾಯಿತು. ಸಿನಿಮಾ ಶುರುವಾದಾಗಿನಿಂದ ಅಂತ್ಯದವರೆಗೂ ಮನರಂಜನೆ ಸಿಗುತ್ತದೆ. ಕ್ಲೈಮ್ಯಾಕ್ಸ್‌ನಲ್ಲಿ ಪ್ರತಿಯೊಬ್ಬರಿಗೂ ಕಣ್ಣೀರು ಬರುತ್ತದೆ. ಅದಕ್ಕೂ ಮುನ್ನ ಪ್ರತಿಯೊಬ್ಬರ ಮುಖದಲ್ಲಿ ನಗು ಇರುತ್ತದೆ. ಕತೆ ಅದ್ಭುತವಾಗಿ ಮೂಡಿಬಂದಿದೆ; ಎಂದರು.

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪೃಥ್ವಿ ಸ್ಫೂರ್ತಿ ಚೇತನ್‌ ದುರ್ಗ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕರಾಗಿರುವ ಅಗ್ನಿ, ಹರಿಪ್ರಸಾದ್‌ ನಾಯಕ್‌ ಜೊತೆಗೂಡಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಅರುಣ್‌ ಕುಮಾರ್‌ ಬಿಟಿ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಶಶಾಂಕ್‌ ಶೇಷಗಿರಿ ಸಂಗೀತ ಜರ್ನಿ ಚಿತ್ರಕ್ಕಿದೆ. ಡಿಸೆಂಬರ್‌ ಮೊದಲ ವಾರದಂದು ಜರ್ನಿ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next