Advertisement
ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಿಂದ ಎಲ್ಲಾ ಪೊಲೀಸ್ ಆಯುಕ್ತರಿಗೆ, ಜಿಲ್ಲಾ ಪೊಲೀಸ್ ವರಿಷ್ಠರಿಗೆ ಮತ್ತು ವಲಯಗಳ ಪೊಲೀಸ್ ಮಹಾ ನಿರೀಕ್ಷಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ದೂರದರ್ಶನ, ಆಕಾಶವಾಣಿ ಕೇಂದ್ರಗಳು, ಕೇಂದ್ರಸರ್ಕಾರಕ್ಕೆ ಸಂಬಂಧಿಸಿದ ಆಯಕಟ್ಟಿನ ಕಟ್ಟಡಗಳು, ಪ್ರದೇಶಗಳಿಗೆ ಹೆಚ್ಚಿನ ರಕ್ಷಣೆ ಒದಗಿಸಲೂ ಹೇಳಲಾಗಿದೆ.
ಸಾರ್ವಜನಿಕ ಬಸ್ ನಿಲ್ದಾಣ, ಸಾರಿಗೆ ಬಸ್‌ಗಳಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಭದ್ರತಾ ಮತ್ತು ಜಾಗೃತಾ ವಿಭಾಗ ತಿಳಿಸಿದೆ.
Related Articles
ಬಸ್ ನಿಲ್ದಾಣಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು/ ಅವರು ತರುವ ಬ್ಯಾಗ್‌ಗಳ
ಬಗ್ಗೆ ಮಾಹಿತಿ ನೀಡುವಂತೆ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಮನವಿ.
Advertisement
ಪೊಲೀಸ್, ಆಸ್ಪತ್ರೆ, ಅಗ್ನಿ ಶಾಮಕ ಠಾಣೆ, ಸಂಸ್ಥೆಯ ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆಯನ್ನು ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರಕಟಿಸಲಾಗುವುದು.
ಸಂಸ್ಥೆಯ ಎಲ್ಲ ವರ್ಗದ ಸಿಬ್ಬಂದಿಗೆ ಭಯೋತ್ಪಾದಕರ ಕೃತ್ಯದ ಬಗ್ಗೆ ಎಚ್ಚರ ವಹಿಸುವಂತೆ ತಿಳಿವಳಿಕೆ.
ತುರ್ತು ಪರಿಸ್ಥಿತಿಯಲ್ಲಿ ಗಾಯಾಳುಗಳನ್ನು ಸಾಗಿಸುವ ಬಗ್ಗೆ ಹಾಗೂ ಅಗ್ನಿ ಶಾಮಕ ಉಪಕರಣಗಳ ಉಪಯೋಗಿಸುವ ಬಗ್ಗೆ ಭದ್ರತಾ, ನಿಲ್ದಾಣದ ಸಿಬ್ಬಂದಿಗೆ ಅಣುಕು ಪ್ರದರ್ಶನ ನೀಡಲಾಗುವುದು.
ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ನಿಲ್ದಾಣದಲ್ಲಿ ನಿರುಪಯುಕ್ತ ವಸ್ತುಗಳು, ವಿಶ್ರಾಂತಿ ಗೃಹಗಳು, ಶೌಚಾಲಯ ಸೇರಿ ಎಲ್ಲೆಡೆ ತಪಾಸಣೆ
ಬಸ್ ನಿಲ್ದಾಣಗಳಿಗೆ ಪ್ರತಿ ನಿತ್ಯ ಸ್ಥಳೀಯ ಪೊಲೀಸರು ಮೂರು ಬಾರಿ ಗಸ್ತು ತಿರುಗುವ ವ್ಯವಸ್ಥೆ.
ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಹಾಗೂ ಡಿವಿಆರ್‌ಗಳ ಕಾರ್ಯಕ್ಷಮತೆ ಬಗ್ಗೆ ಖಾತರಿಪಡಿಸಿಕೊಳ್ಳುವುದು.ಪ್ರಯಾಣಿಕರಿಗೆ ತಿಳಿವಳಿಕೆ
ಬಸ್ ನಿಲ್ದಾಣಗಳಲ್ಲಿ ಅನುಮಾನಾಸ್ಪದವಾಗಿ ಓಡಾಡುವ ವ್ಯಕ್ತಿಗಳು/ ಅವರು ತರುವ ಬ್ಯಾಗ್ಗಳಬಗ್ಗೆ ಮಾಹಿತಿ ನೀಡುವಂತೆ ಧ್ವನಿವರ್ಧಕಗಳ ಮೂಲಕ ಸಾರ್ವಜನಿಕರಿಗೆ ಮನವಿ. ಪೊಲೀಸ್, ಆಸ್ಪತ್ರೆ, ಅಗ್ನಿ ಶಾಮಕ ಠಾಣೆ, ಸಂಸ್ಥೆಯಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆಯನ್ನು ಬಸ್ ನಿಲ್ದಾಣ ಮುಂಭಾಗದಲ್ಲಿ ಪ್ರಕಟಿಸಲಾಗುವುದು. ಸಂಸ್ಥೆಯ ಎಲ್ಲ ವರ್ಗದ ಸಿಬ್ಬಂದಿಗೆ ಭಯೋತ್ಪಾದಕರ ಕೃತ್ಯದ ಬಗ್ಗೆ ಎಚ್ಚರ ವಹಿಸುವಂತೆ ತಿಳಿವಳಿಕೆ. ತುರ್ತು ಪರಿಸ್ಥಿತಿಯಲ್ಲಿ ಗಾಯಾಳುಗಳನ್ನು ಸಾಗಿಸುವ ಬಗ್ಗೆ ಹಾಗೂ ಅಗ್ನಿ ಶಾಮಕ ಉಪಕರಣಗಳ ಉಪಯೋಗಿಸುವ ಬಗ್ಗೆ ಭದ್ರತಾ, ನಿಲ್ದಾಣದ ಸಿಬ್ಬಂದಿಗೆ ಅಣುಕು ಪ್ರದರ್ಶನ ನೀಡಲಾಗುವುದು. ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದಿಂದ ನಿಲ್ದಾಣದಲ್ಲಿ ನಿರುಪಯುಕ್ತ ವಸ್ತುಗಳು, ವಿಶ್ರಾಂತಿ ಗೃಹಗಳು, ಶೌಚಾಲಯ ಸೇರಿ ಎಲ್ಲೆಡೆ ತಪಾಸಣೆ ಬಸ್ ನಿಲ್ದಾಣಗಳಿಗೆ ಪ್ರತಿ ನಿತ್ಯ ಸ್ಥಳೀಯ ಪೊಲೀಸರು ಮೂರು ಬಾರಿ ಗಸ್ತು ತಿರುಗುವ ವ್ಯವಸ್ಥೆ. ಬಸ್ ನಿಲ್ದಾಣಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳು ಹಾಗೂ ಡಿವಿಆರ್‌ಗಳ ಕಾರ್ಯಕ್ಷಮತೆ ಬಗ್ಗೆ ಖಾತರಿಪಡಿಸಿಕೊಳ್ಳುವುದು.