Advertisement

Direct turn; ನಾನು ಸರ್ವಪಕ್ಷದ ವಿಪಕ್ಷ ನಾಯಕ: ಯತ್ನಾಳ್

07:27 PM Dec 24, 2023 | Team Udayavani |

ವಿಜಯಪುರ: ನಾನು ಜನಮಾನಸದಿಂದ ಬಂದಿರುವ ವಿಲನ್, ಹೀರೋ ಅಲ್ಲ. ನಾನೂ ಆಲ್ವೇಸ್ ವಿಲನ್, ಸರ್ವಪಕ್ಷಗಳ ವಿಪಕ್ಷ ನಾಯಕ ನಾನೇ. ಚಿತ್ರರಂಗದಲ್ಲಿ ವಿಲನ್ ಆದವರೇ ನಂತರ ಅಂಬರೀಶ್ ಅವರಂತೆ ಹೀರೋ ಆಗಿದ್ದಾರೆ. ನಾನೂ ಒಂದು ದಿನ ಹೀರೋ ಆಗುವ ಅವಕಾಶ ಸಿಗಬಹುದು ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.

Advertisement

ಭಾನುವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿ, ವಿಲನ್ ಪಾತ್ರ ಇದ್ದರೆ ಮಾತ್ರವೇ ಹೀರೋ ಪಾತ್ರಕ್ಕೆ ಮಹತ್ವ ಬರುತ್ತದೆ. ಹೀಗಾಗಿ ಜನಮಾನಸದಿಂದ ಬಂದಿರುವ ಶಾಶ್ವತ ವಿಪಕ್ಷ ನಾಯಕ ನಾನು. ಎಂದು ಸ್ವಪಕ್ಷೀಯರ ವಿರುದ್ಧದ ತಮ್ಮ ಟೀಕೆಗಳನ್ನು ಸಮರ್ಥಿಸಿಕೊಂಡರು.

ರಾಜ್ಯ ಬಿಜೆಪಿ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ಅಧ್ಯಕ್ಷ ವಿಜಯೇಂದ್ರ ತಮಗೆ ಬೇಕಾದವರನ್ನು ನೇಮಿಸಿದ್ದಾರೆ. ಬಿಜೆಪಿ ಪಕ್ಷದಲ್ಲೇ ಇದ್ದುಒಂದು ರಾಜ್ಯದಲ್ಲಿ ಕೆಜೆಪಿ ಭಾಗ ಎರಡು ರಚಿಸಿದ್ದಾರೆ ಎಂದು ವಾಗ್ದಾಳಿ ಮುಂದುವರೆಸಿದರು.

ಪಕ್ಷದ ಹೈಕಮಾಂಡ್ ಕಳ್ಳರ ಕೈಗೇ ಚಾವಿ ಕೊಟ್ಟಿದೆ. ರಾಜಕೀಯದಲ್ಲಿ ಲಫಂಗರು, ಕಳ್ಳರ ಸಂಖ್ಯೆಯೇ ಇದೀಗ ಹೆಚ್ಚುತ್ತಿದೆ. ಸಭ್ಯ ರಾಜಕೀಯ ಮಾಡುವವರಿಗೆ ಅವಕಾಶ ಇಲ್ಲವಾಗಿದ್ದು, ರಾಜಕೀಯದಲ್ಲಿ ಮೌಲ್ಯಾಧಾರಿತ ರಾಜಕೀಯ ಮರೆಯಾಗಿದೆ ಎಂದರು.

ಒಂದೊಮ್ಮೆ 2024 ರ ಲೋಕಸಭೇ ಚುನಾವಣೆಯಲ್ಲಿ ರಾಜ್ಯದಲ್ಲಿ ಎಲ್ಲಾ 28 ಸ್ಥಾನಗಳನ್ನು ಬಿಜೆಪಿ ಗೆಲ್ಲದಿದ್ದಲ್ಲಿ ವಿಜಯೇಂದ್ರನಿಗೆ ಕೊಟ್ಟಿರುವ ಚಾವಿಯನ್ನು ಕಸಿದುಕೊಳ್ಳಲಿದೆ. ಒಂದೇ ಒಂದು ಸ್ಥಾನದಲ್ಲಿ ಬಿಜೆಪಿ ಸೋತರೂ ಹೈಕಮಾಂಡ್ ವಿಜಯೇಂದ್ರ ಸ್ಥಾನ ತೆರವು ಮಾಡಲಿದೆ ಎಂದರು.

Advertisement

ಲೋಕಸಭೆ ಚುನಾವಣೆ ಬಳಿಕವೂ ಪಕ್ಷದ ವರಿಷ್ಠರು ಬಿಜೆಪಿ ರಾಜ್ಯ ಘಟಕಕ್ಕೆ ಮೇಜರ್ ಸರ್ಜರಿ ಮಾಡದಿದ್ದಲ್ಲಿ ನಾನು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಪಕ್ಷದ ವರಿಷ್ಠರಿಗೆ ವಿಜಯೇಂದ್ರ ವಿರುದ್ಧ ತಮ್ಮ ಪ್ರತಿರೋಧ ಮುಂದುವರೆಯಲಿದೆ ಎಂದು ನೇರವಾಗಿ ಸಂದೇಶ ರವಾನಿಸಿದರು.

2028 ರ ವಿಧಾನಸಭೇ ಚುನಾವಣೆ ಬಳಿಕ ನಾನು ರಾಜಕೀಯ ನಿವೃತ್ತಿ ನಿರ್ಧಾರ ಮಾಡಲಿದ್ದೇನೆ. ಹೀಗಾಗಿ ಯುಟರ್ನ್ ಹೊಡೆದ ಯತ್ನಾಳ ಎನ್ನದೇ, ಡೈರೆಕ್ಟ್ ಟರ್ನ್ ಹೊಡೆದ ಯತ್ನಾಳ ಎನ್ನಿ ಎಂದು ಮಾಧ್ಯಮ ಪ್ರತಿನಿಧಿಗಳನ್ನು ಛೇಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next