Advertisement

ವಿದೇಶದಲ್ಲಿ ಪಿಎಚ್‌.ಡಿ ಪಡೆದರೆ ನೇರ ನೇಮಕ: ಯುಜಿಸಿ ಹೊಸ ನಿಯಮ

07:21 AM Nov 29, 2018 | |

ಹೊಸದಿಲ್ಲಿ: ವಿದೇಶಗಳ ಟಾಪ್‌ 500 ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌ಡಿ ಪದವಿ ಪಡೆದವರನ್ನು ಭಾರತದ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ವಿದ್ಯಾ ಸಂಸ್ಥೆಗಳಲ್ಲಿ ಬೋಧಕ ಸಿಬಂದಿ ಹುದ್ದೆಗಳಿಗೆ ನೇರವಾಗಿ ನೇಮಕ ಮಾಡಬಹುದೆಂಬ ಹೊಸ ನಿಯಮವನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಾರಿಗೊಳಿಸಿದೆ. ಇದರ ಜತೆಗೆ, ವಿದೇಶಗಳಲ್ಲಿ ಪಿಎಚ್‌ಡಿ ಪಡೆದಿದ್ದರೂ ಅವರು ತಮ್ಮ ಸ್ನಾತಕೋತ್ತರ ವ್ಯಾಸಂಗಗಳಲ್ಲಿ ಶೇ. 55ರಷ್ಟು ಅಂಕಗಳನ್ನು ಗಳಿಸಿರಲೇಬೇಕೆಂಬ ನಿಯಮವನ್ನು ರದ್ದುಗೊಳಿಸಲಾಗಿದೆ. 

Advertisement

ಕ್ವಾಕ್ವೆರೆಲ್ಲಿ ಸೈಮಂಡ್ಸ್‌, ಟೈಮ್ಸ್‌ ಹೈಯರ್‌ ಎಜುಕೇಷನ್‌, ಶಾಂಘೈನ ಜಿಯಾಯೊ ಟಾಂಗ್‌ ವಿಶ್ವವಿದ್ಯಾಲಗಳು ತಮ್ಮ ಸಮೀಕ್ಷಾ ವರದಿಗಳಲ್ಲಿ ಉಲ್ಲೇಖೀಸುವಂಥ ಟಾಪ್‌ 500 ವಿಶ್ವವಿದ್ಯಾಲಯಗಳಲ್ಲಿ ಪಿಎಚ್‌.ಡಿ ಪಡೆದವರಿಗಷ್ಟೇ ಈ ನಿಯಮ ಅನ್ವಯ ವಾಗಲಿದೆ. ಈ ಹೊಸ ಆದೇಶ, ವಿಜ್ಞಾನ, ಕಲೆ, ವಾಣಿಜ್ಯ, ಮಾನವೀಯ ಶಾಸ್ತ್ರ, ಶಿಕ್ಷಣ, ಕಾನೂನು, ಸಾಮಾ ಜಿಕ ವಿಜ್ಞಾನ, ಲೈಬ್ರರಿ ಸೈನ್ಸ್‌, ದೈಹಿಕ ಶಿಕ್ಷಣ ಹಾಗೂ ಪತ್ರಿಕೋದ್ಯಮ ವಿಭಾಗಗಳಿಗೆ ಅನ್ವಯವಾಗುತ್ತದೆ ಎಂದು ಯುಜಿಸಿ ಹೇಳಿದೆ. ಈ ವಿವಿಗಳಲ್ಲಿ ಪಿಎಚ್‌.ಡಿ. ಮಾಡಿದವರು ನೇರವಾಗಿ ಭಾರತದ ವಿವಿಗಳಲ್ಲಿ ಸಹಾಯಕ ಪ್ರೊಫೆಸರ್‌ಗಳಾಗಿ ನೇಮಕಗೊಳ್ಳುತ್ತಾರೆ. ಅವರು ಲಿಖಿತ ಪರೀಕ್ಷೆಯಿಂದ ವಿನಾಯಿತಿ ಪಡೆಯುತ್ತಾರೆ ಎಂದು ಯುಜಿಸಿ ತಿಳಿಸಿದೆ,

Advertisement

Udayavani is now on Telegram. Click here to join our channel and stay updated with the latest news.

Next