Advertisement

ವಿದ್ಯಾರ್ಥಿಗಳ ಜತೆ ನೇರ ಫೋನ್‌-ಇನ್‌

02:06 PM Apr 17, 2020 | Suhan S |

ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನ, ಕೋರ್‌ ವಿಜ್ಞಾನ ಚಟುವಟಿಕಾ ಕೇಂದ್ರ ಹುಬ್ಬಳ್ಳಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಕುರಿತು ಗುರುವಾರ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆವರೆಗೆನೇರ ಫೋನ್‌-ಇನ್‌ ಕಾರ್ಯಕ್ರಮ ನಡೆಸಿತು.

Advertisement

ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆ ಸಂಪನ್ಮೂಲ ವ್ಯಕ್ತಿಗಳಾದ ದೀಪಾ ಹಳಪನವರ ಅವರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಪರೀಕ್ಷೆಯ ಅಂತಿಮ ಹಂತದ ಸಿದ್ಧತೆ, ಕೊನೆಯ ಹಂತದ ಪಠ್ಯ ವಿಷಯದ ಮತ್ತು ಪರೀಕ್ಷೆಗೆ ಸಂಬಂಧಿಸಿದಂತೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು, ಮಕ್ಕಳು ಪರೀಕ್ಷೆಯಲ್ಲಿ ಹಾಜರಾಗುತ್ತಿದ್ದಂತೆ ಕೈ ಕಾಲು ನಡುಗುವುದು, ಓದಿರುವ ಎಲ್ಲಾ ವಿಷಯಗಳು ನೆನಪು ಹೋಗುವುದು, ಹೆದರಿಕೆಯಿಲ್ಲದೆ ಯಾವ ರೀತಿ ಪರೀಕ್ಷೆ ಎದುರಿಸಬೇಕು, ಉತ್ತರಗಳು ನೆನಪು ಹೋದಾಗ ಏನು ಮಾಡಬೇಕು ಮುಂತಾದ ವಿಷಯಗಳ ಕುರಿತು ಮಕ್ಕಳೊಂದಿಗೆ ಚರ್ಚಿಸಿದರು.

ಮಕ್ಕಳ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ ಮಕ್ಕಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು. ಕೊಪ್ಪಳದ ವಿದ್ಯಾರ್ಥಿ ಕೀರ್ತಿ, ನೇಕಾರನಗರ ವಿದ್ಯಾರ್ಥಿ ರಶ್ಮಿ ಬಡಿಗೇರ, ಅರಳಿಕಟ್ಟಿ ಗೌರಮ್ಮ ಧೂಪದ, ಹೆಬಸೂರನ ಪ್ರೀತಿ ಬೋಹಿತೆ ಮುಂತಾದವರು ಪ್ರಶ್ನೆಗಳನ್ನು ಕೇಳಿ ಅದಕ್ಕೆ ಉತ್ತರ ಪಡೆದರು. ಗೀತಾ ಪಾಟೀಲ, ಹಾಗೂ ಹುಬ್ಬಳ್ಳಿ, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ, ಬೀದರ ಜಿಲ್ಲೆಯ ವಿಜ್ಞಾನ ಕೇಂದ್ರದ ಮುಖ್ಯಸ್ಥರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next