Advertisement

ಭಜರಂಗ್‌, ವಿನೇಶ್‌ಗೆ ನೇರಪ್ರವೇಶ: ಇಂದು ತೀರ್ಪು

11:14 PM Jul 21, 2023 | Team Udayavani |

ಹೊಸದಿಲ್ಲಿ: ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳಲು ಭಜರಂಗ್‌ ಪೂನಿಯ, ವಿನೇಶ್‌ ಪೋಗಟ್‌ ಅವರಿಗೆ ನೇರಪ್ರವೇಶ ನೀಡಿರುವುದನ್ನು ವಿರೋಧಿಸಿ ಸಲ್ಲಿಕೆಯಾಗಿರುವ ಅರ್ಜಿಗಳಿಗೆ ಸಂಬಂಧಪಟ್ಟಂತೆ ಶನಿವಾರ ತೀರ್ಪು ಹೊರಬೀಳಲಿದೆ. ಈ ಇಬ್ಬರಿಗೆ ವಿನಾಯಿತಿ ಯಾಕೆ, ಎಲ್ಲರಂತೆ ಅವರೂ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿ ಎಂದು ಹಲವರು ದಿಲ್ಲಿ ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಮುಖ್ಯವಾಗಿ ಅಂತಿಮ್‌ ಪಂಘಲ್‌, ಸುರ್ಜೀತ್‌ ಕಲ್ಕಲ್‌ ನೇರಪ್ರವೇಶವನ್ನು ಪ್ರತಿಭಟಿಸಿದ್ದಾರೆ.

Advertisement

ಸಾಕ್ಷಿ ಮಲಿಕ್‌ರಿಂದಲೂ ವಿರೋಧ
ಭಜರಂಗ್‌ ಮತ್ತು ವಿನೇಶ್‌ ಅವರಿಗೆ ಏಷ್ಯನ್‌ ಗೇಮ್ಸ್‌ಗೆ ನೇರಪ್ರವೇಶ ನೀಡಿರುವ ಕ್ರಮವನ್ನು ಒಲಿಂಪಿಕ್ಸ್‌ ಕಂಚು ವಿಜೇತೆ ಸಾಕ್ಷಿ ಮಲಿಕ್‌ ಕೂಡ ಟೀಕಿಸಿದ್ದಾರೆ. ಇದು ಅಗತ್ಯವಿರಲಿಲ್ಲ, ನನಗೂ ಕೂಡ ಇಂತಹ ಅವಕಾಶ ಬಂದಿತ್ತು, ಆದರೆ ನಾನೇ ನಿರಾಕರಿಸಿ ಅರ್ಹತಾ ಸುತ್ತಿನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದೆ ಎಂದಿದ್ದಾರೆ. ಬೃಜ್‌ ಭೂಷಣ್‌ ವಿರುದ್ಧ ಪ್ರತಿಭಟನೆಯಲ್ಲಿ ಸಾಕ್ಷಿ, ವಿನೇಶ್‌, ಭಜರಂಗ್‌ ಒಗ್ಗೂಡಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next