Advertisement

Delhi-Leh ಗೆ ನೇರ ಬಸ್‌- ಜೂ.15ರಿಂದ ಆರಂಭ

09:19 PM Jun 08, 2023 | Team Udayavani |

ಹಿಮಚ್ಛಾದಿತ ಲೇಹ್‌ ಸೌಂದರ್ಯವನ್ನು ಸವಿಯುವುದು ಪ್ರವಾಸಿಗರಿಗೆ ಇನ್ನು ಸುಲಭ. ಈ ಹಿಂದೆ ಕಿರಿದಾದ ರಸ್ತೆಗಳಲ್ಲಿ ಸಾಗುತ್ತಿದ್ದ ಪ್ರವಾಸಿಗರು, ಇನ್ನು ಮುಂದೆ ಯಾವುದೇ ಭಯವಿಲ್ಲದೇ ಬಸ್‌ನಲ್ಲಿ ಸುರಕ್ಷಿತವಾಗಿ ಪ್ರಕೃತಿಯ ಸೌಂದರ್ಯ ಸವಿಯುತ್ತಾ ದೆಹಲಿಯಿಂದ ಕೇಂದ್ರಾಡಳಿತ ಪ್ರದೇಶವಾದ ಲಡಾಖ್‌ನ ಲೇಹ್‌ ತಲುಪಬಹುದು.

Advertisement

ಜೂ.15ರಂದು ಬಸ್‌ ಸೇವೆ ಆರಂಭ
ಹಿಮಾಚಲ ರಸ್ತೆ ಸಾರಿಗೆ ನಿಗಮ(ಎಚ್‌ಆರ್‌ಟಿಸಿ)ವು ದೆಹಲಿಯಿಂದ ಲೇಹ್‌ಗೆ ಜೂ.15ರಿಂದ ಬಸ್‌ ಸೇವೆ ಆರಂಭಿಸಲಿದೆ. ಈ ಹಿಂದೆ ಪ್ರವಾಸಿಗರು ದೆಹಲಿ ತಲುಪಿ, ಅಲ್ಲಿಂದ ವಿಮಾನದ ಮೂಲಕ ಅಥವಾ ಟ್ಯಾಕ್ಸಿ ಅಥವಾ ಕಾರಿನ ಮೂಲಕ ಕಿರಿದಾದ ರಸ್ತೆಯಲ್ಲಿ ಲೇಹ್‌ ತಲುಪಬೇಕಿತ್ತು. ಕೆಲವರು ಬುಲೆಟ್‌ ರೀತಿಯ ಬೈಕ್‌ಗಳಲ್ಲೂ ಹೋಗುತ್ತಿದ್ದರು. ಈಗ ಮೊಟ್ಟ ಮೊದಲ ಬಾರಿಗೆ ದೆಹಲಿಯಿಂದ ಲೇಹ್‌ಗೆ ನೇರ ಬಸ್‌ ಸೇವೆ ಆರಂಭಿಸಲಾಗುತ್ತಿದೆ. ಇದಕ್ಕಾಗಿ ರಸ್ತೆಯನ್ನು ವಿಸ್ತರಿಸಲಾಗಿದೆ.

ಮನಮೋಹಕ ಪ್ರಕೃತಿ ಸವಿಯುವ ಅವಕಾಶ
ಈ ಬಸ್‌ ಮಾರ್ಗವು ಮನಾಲಿ-ಲೇಹ್‌ ಹೆದ್ದಾರಿ ಮೂಲಕ ಸಾಗಲಿದೆ. ಈ ಮಾರ್ಗದಲ್ಲಿ ಪ್ರಕೃತಿ ಮನಮೋಹಕವಾಗಿದ್ದು, ನೋಡುಗರಿಗೆ ರಸಾನುಭವ ಉಣಿಸಲಿದೆ. ಹಿಮಾಲಯ ಪರ್ವತ ಶ್ರೇಣಿಗಳ ಮೂಲಕ ಹಾದುಹಾಗುವ ಈ ಮಾರ್ಗವು, ಬರಲಚಾ ಪಾಸ್‌, ನಕೀಲ ಪಾಸ್‌, ತಗ್ಲಾಂಗ್‌ ಲಾ ಪಾಸ್‌ ಸೇರಿದಂತೆ ಅನೇಕ ಮಾರ್ಗಗಳ ಮೂಲಕ ಸಾಗಲಿದೆ. ತಗ್ಲಾಂಗ್‌ ಲಾ ಪಾಸ್‌ ಸಮುದ್ರ ಮಟ್ಟದಿಂದ 17,582 ಅಡಿ ಎತ್ತರದಲ್ಲಿದೆ.

ಪ್ರಯಾಣದ ಸಮಯ
ಪ್ರತಿ ದಿನ ಮಧ್ಯಾಹ್ನ 3.30ಕ್ಕೆ ದೆಹಲಿ ಅಂತಾರಾಜ್ಯ ಬಸ್‌ ನಿಲ್ದಾಣದಿಂದ ಹೊರಡುವ ಬಸ್‌, ಮಾರ್ಗಮಧ್ಯೆ ಕಿಲಾಂಗ್‌ನಲ್ಲಿ ಹಾಲ್ಟ್ ಆಗಲಿದ್ದು, ಮಾರನೇ ದಿನ ಸಂಜೆ 6 ಗಂಟೆಗೆ ಲೇಹ್‌ ತಲುಪಲಿದೆ. ಸುಖಾಸನಗಳು, ಹವಾನಿಯಂತ್ರಿತ ವ್ಯವಸ್ಥೆ ಮತ್ತು ಶೌಚಾಲಯ ವ್ಯವಸ್ಥೆಯೂ ಬಸ್‌ನಲ್ಲಿರಲಿವೆ.
……………….

ಬಸ್‌ ಟಿಕೆಟ್‌ ದರವೆಷ್ಟು?– 1,500 ರೂ.
ದೆಹಲಿಯಿಂದ ಲೇಹ್‌ಗೆ ಇರುವ ದೂರ– 1,072 ಕಿ.ಮೀ.
ತಗ್ಲಾಂಗ್‌ ಲಾ ಪಾಸ್‌ ಎಷ್ಟು ಎತ್ತರದಲ್ಲಿದೆ?- 17,582 ಅಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next