ಹೊಸದಿಲ್ಲಿ: ಟ್ರಯಲ್‌ಬ್ಲೇಜಿಂಗ್ ಜಿಮ್ನಾಸ್ಟ್ ದೀಪಾ ಕರ್ಮಾಕರ್(Dipa Karmakar) ಸೋಮವಾರ(ಅ7) ನಿವೃತ್ತಿ ಘೋಷಿಸಿದ್ದಾರೆ.
ತ್ರಿಪುರ ರಾಜ್ಯದ ಅಗರ್ತಲಾದವರಾದ 31 ರ ಹರೆಯದ ದೀಪಾ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಆಗಿದ್ದರು. ಹಲವಾರು ಭರವಸೆ ಮೂಡಿಸಿದ್ದ ಕ್ರೀಡಾಳು ತನ್ನ ವೃತ್ತಿಜೀವನವನ್ನು ಕೊನೆಗೊಳಿಸಿದ್ದಾರೆ. ಪ್ರೊಡುನೋವಾ ವಾಲ್ಟ್ ಅನ್ನು ಕರಗತ ಮಾಡಿಕೊಂಡ ವಿಶ್ವದ ಐವರು ಮಹಿಳೆಯರಲ್ಲಿ ದೀಪಾ ಒಬ್ಬರಾಗಿದ್ದಾರೆ.
“ಹೆಚ್ಚು ಚಿಂತನೆ ಮತ್ತು ಪ್ರತಿಬಿಂಬದ ನಂತರ, ನಾನು ಸ್ಪರ್ಧಾತ್ಮಕ ಜಿಮ್ನಾಸ್ಟಿಕ್ಸ್‌ನಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ಸುಲಭದ ನಿರ್ಧಾರವಲ್ಲ, ಆದರೆ ಇದು ಸರಿಯಾದ ಸಮಯ ಎಂದು ಭಾವಿಸುತ್ತದೆ” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ನಾನು ನೆನಪಿಡುವವರೆಗೂ ಜಿಮ್ನಾಸ್ಟಿಕ್ಸ್ ನನ್ನ ಜೀವನದ ಕೇಂದ್ರವಾಗಿದೆ, ನಾನು ಪ್ರತಿ ಕ್ಷಣಕ್ಕೂ ಕೃತಜ್ಞಳಾಗಿದ್ದೇನೆ ಏಳು, ಬೀಳುಗಳ ನಡುವೆ ಇರುವ ಎಲ್ಲವೂ.” ಎಂದು ಪೋಸ್ಟ್ ಮಾಡಿದ್ದಾರೆ.
ಕರ್ಮಾಕರ್ ಅವರು ರಿಯೊ 2016 ಗೆ ಅರ್ಹತೆ ಪಡೆದಾಗ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಮಹಿಳಾ ಜಿಮ್ನಾಸ್ಟ್ ಎನಿಸಿಕೊಂಡರು. 1064 ಟೋಕಿಯೊ ಒಲಿಂಪಿಕ್ಸ್‌ನ ನಂತರ ಒಟ್ಟಾರೆ ಜಿಮ್ನಾಸ್ಟಿಕ್ಸ್‌ನಲ್ಲಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಮಾತ್ರವಲ್ಲದೆ ನಾಲ್ಕನೇ ಸ್ಥಾನ ಗಳಿಸಿದರು. ಕೇವಲ 0.15 ಅಂಕಗಳ ಅಂತರರದಿಂದ ಕಂಚಿನ ಪದಕವನ್ನು ಕಳೆದುಕೊಂಡ ಬಳಿಕ ಅವರ ಮೇಲೆ ಭಾರೀ ಅನುಕಂಪ ವ್ಯಕ್ತವಾಗಿತ್ತು.
2021 ರ ಅಕ್ಟೋಬರ್ ನಲ್ಲಿ ಡೋಪ್ ಪರೀಕ್ಷೆಯಲ್ಲಿ ವಿಫಲರಾದ ನಂತರ ಅವರನ್ನು 21 ತಿಂಗಳ ಕಾಲ ಅಮಾನತುಗೊಳಿಸಲಾಗಿತ್ತು. ಕಳೆದ ವರ್ಷ ಮರಳಿದರು ತಾಷ್ಕೆಂಟ್ ನಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದಿದ್ದರು.
“ನಾನು ನಿವೃತ್ತಿಯಾಗುತ್ತಿದ್ದರೂ, ಜಿಮಾಸ್ಟಿಕ್ಸ್‌ನೊಂದಿಗಿನ ನನ್ನ ಸಂಪರ್ಕವು ಉಳಿಯುತ್ತದೆ. ನಾನು ಕ್ರೀಡೆಗೆ ಹಿಂತಿರುಗಲು ಬಯಸುತ್ತೇನೆ – ಅದು ಮಾರ್ಗದರ್ಶಕಿ, ತರಬೇತುದಾರ ಅಥವಾ ಯುವತಿಯರನ್ನು ಬೆಂಬಲಿಸುವ ಮೂಲಕ, ”ಎಂದು ಹೇಳಿದ್ದಾರೆ.