ತುಮಕೂರು: ಲಾಕ್‌ಡೌನ್ ಹಿನ್ನೆಲೆ ದಿನಗೂಲಿ ಕಾರ್ಮಿಕರು, ಆಶಾ ಕಾರ್ಯಕರ್ತರು, ಪೌರಕಾರ್ಮಿಕರು, ಚಿಂದಿ ಆಯುವವರು, ಭಿಕ್ಷುಕರಿಗೆ ಊಟದಸಮಸ್ಯೆ ಎದುರಾಗಬಾರದು ಎಂಬ ನಿಟ್ಟಿನಲ್ಲಿ ಜಿಲ್ಲಾಗೆಳೆಯರ ಬಳಗದ ವತಿಯಿಂದ ನಿತ್ಯವೂ ಊಟದವ್ಯವಸ್ಥೆ ಕಲ್ಪಿಸಿದೆ. ಲಾಕ್‌ಡೌನ್ ಮುಗಿಯುವವರೆಗೂಈ ಸೇವೆ ನಡೆಯಲಿದೆ ಎಂದು ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷ ಎನ್.ಗೋವಿಂದರಾಜ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಆಹಾರದ ಪ್ಯಾಕೇಟ್ ವಿತರಿಸಿ ಮಾತನಾಡಿದ ಅವರು, ನಗರದ 35 ವಾರ್ಡ್‌ಗಳಲ್ಲೂ ಕಳೆದ ಒಂದು ವಾರದಿಂದ ನಿರಂತರವಾಗಿಆಹಾರ ಮತ್ತು ಕುಡಿಯುವ ನೀರನ್ನು ವಿತರಿಸುತ್ತಿದ್ದೇವೆ.ನಗರದ ಡಿ.ಎಂ. ಪಾಳ್ಯದಲ್ಲಿ ಗೆಳೆಯರ ಬಳಗದ ಸ್ವಯಂಸೇವಕರು ಆಹಾರ ಸಿದ್ಧಪಡಿಸಿ, ಸಿದ್ಧಪಡಿಸಿದ ಆಹಾರದಪ್ಯಾಕೇಟ್, ಕುಡಿಯುವ ನೀರು, ತಟ್ಟೆ ಒಳಗೊಂಡಆಹಾರದ ಕಿಟ್ ಬ್ಯಾಗ್‌ಗೆ ತುಂಬಿ ನಗರದ 35 ವಾಡ್ìಗಳಲ್ಲೂ ಇರುವ ದಿನಗೂಲಿ ಕಾರ್ಮಿಕರು,ಪೌರಕಾರ್ಮಿಕರು, ಭಿಕ್ಷುಕರು ಇತರೆ ಸಂಕಷ್ಟದಲ್ಲಿರುವವರಿಗೆ ಅವರಿರುವ ಸ್ಥಳಕ್ಕೆ ತೆರಳಿ ವಿತರಿಸುತ್ತಿದ್ದಾರೆ ಎಂದರು.
ಸುಸಜ್ಜಿತ ಆ್ಯಂಬುಲೆನ್ಸ್ ವ್ಯವಸ್ಥೆ: ನಗರದ ಎಲ್ಲ ವಾಡ್ìಗಳಿಗೂ ಟ್ಯಾಂಕರ್ ಮೂಲಕ ಉಚಿತ ಕುಡಿಯುವನೀರಿನ ಸರಬರಾಜು ಮಾಡುತ್ತಿದ್ದು, ನಿರಂತರವಾಗಿನಡೆದುಕೊಂಡು ಬರುತ್ತಿದೆ. ಇದರ ಜೊತೆಗೆಕೋವಿಡ್‌ನಿಂದ ಆಕ್ಸಿಜನ್ ಬೆಡ್ ಕೊರತೆಯಿಂದ ಅನೇಕರುಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಕಾಲಕ್ಕೆ ಆ್ಯಂಬುಲೆನ್ಸ್‌ಸಿಗದೆ ಪರದಾಡುವಂತಹ ಪರಿಸ್ಥಿತಿಯೂ ಇದೆ.ಇಂತಹ ಸಮಯದಲ್ಲಿ ಯಾರೂ ತೊಂದರೆಗೊಳಗಾಗಬಾರದು ಎಂದು ಎರಡು ಸುಸಜ್ಜಿತ ಆ್ಯಂಬುಲೆನ್ಸ್‌ವ್ಯವಸ್ಥೆ ಮಾಡಲಾಗಿದ್ದು, ನಗರದ 35 ವಾರ್ಡ್‌ನನಾಗರಿಕರು ಈ ಆ್ಯಂಬುಲೆನ್ಸ್ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿನಿತ್ಯ 800ರಿಂದ 900 ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದು, ಇದುವರೆಗೆ 6,500ಕ್ಕೂ ಹೆಚ್ಚುಊಟದ ಕಿಟ್‌ಗಳನ್ನು ವಿತರಿಸಲಾಗಿದೆ. ನಮ್ಮ ಗೆಳೆಯರ ಬಳಗದ ಅಭಿಮಾನಿಗಳು ಸ್ವಯಂಪ್ರೇರಿತರಾಗಿಬಂದು ಕೆಲಸ ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸೇವೆ ಬೇರೆಯವರಿಗ ೆ ಮಾದರಿಯಾಗಲಿ ಎಂಬುದುನನ ° ಆಶಯ ಎಂದು ಹೇಳಿದರು.
ಸದುಪಯೋಗ ಆಗಲಿ:ಲಾಕ್‌ಡೌನ್‌ಮುಗಿಯುವವರೆಗೂ ನಿರಂತರಾಗಿ ಅನ್ನ ಕೊಡುವ ಕಾಯಕವನ್ನುಮಾಡಲಾಗುತ್ತದೆ. ಜೂ.7ರ ನಂತರವೂ ಲಾಕ್‌ಡೌನ್‌ಮುಂದುವರಿದರೆ ಲಾಕ್‌ಡೌನ್ ಎಲ್ಲಿಯ ತನಕವಿರುತ್ತದೋ ಅಲ್ಲಿಯವರೆಗೂ ಪ್ರತಿನಿತ್ಯ ಆಹಾರದ ಕಿಟ್‌ವಿತರಿಸಲಾಗುವುದು. ಉಚಿತ ಆ್ಯಂಬುಲೆನ್ಸ್ ಸೇವೆಗಾಗಿ8088046395, 9148134684, 9972245174ಇವರನ್ನು ಸಂಪರ್ಕಿಸಬಹುದು. ಉಚಿತ ಊಟದವ್ಯವಸ್ಥೆಗಾಗಿ 8884555355,7337894871 ಕುಡಿಯುವ ನೀರಿನ ವ್ಯವಸ್ಥೆಗಾಗಿ 9483130338 ಹಾಗೂಸಂಯೋಜಕ ಟಿ.ವೈ. ಹೇಮಂತ್‌ಕುಮಾರ್ ಮೊ.8884555355 ಇವರನ್ನು ಸಂಪರ್ಕಿಸಿ ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಹೇಮಂತ್‌ಕುಮಾರ್, ಮಾಜಿ ನಗರಸಭಾ ಉಪಾಧ್ಯಕ್ಷ ಶ್ರೀನಿವಾಸ್ ಪ್ರಸಾದ್, ಮಾಜಿ ನಗರಸಭಾ ಅಧ್ಯಕ್ಷಜಯರಾಮ್, ಟಿ.ಎಚ್. ಯೋಗಾನಂದ್, ಕಿಶೋರ್,ಮೋಹನ್, ನಿರಂಜನ್, ದೇವರಾಜ, ಶಿವಣ್ಣ, ಸತೀಶ್,ಕಿರಣ್, ಅಬೂಬಕರ್, ಸುಧಾಕರ್, ಮಲ್ಲೇಶ್,ರಮೇಶ್, ಲೋಕೇಶ್ ಸೇರಿದಂತೆ ಗೆಳೆಯರ ಬಳಗದಅಭಿಮಾನಿಗಳು ಇದ್ದರು