Advertisement

ಅಭಿಮಾನಿಗಳೊಂದಿಗೆ ದಿನೇಶ್ ಕಾರ್ತಿಕ್ ಸ್ಟಾರ್ ಟಾಕ್ ಕಾರ್ಯಕ್ರಮ

07:00 PM Jan 27, 2024 | Team Udayavani |

ಬೆಂಗಳೂರು: ಜಗತ್ತಿನ ಅತ್ಯುನ್ನತ ಅಥ್ಲೆಟ್ ಗಳಿಂದ ಸ್ಫೂರ್ತಿ ಪಡೆದ ಕ್ರೀಡಾ ಉಡುಪುಗಳ ಬ್ರಾಂಡ್ – ಪರಿಮ್ಯಾಚ್ ಸ್ಪೋರ್ಟ್ಸ್ ಬೆಂಗಳೂರಿನ ಮಂತ್ರಿ ಸ್ಟೋರ್ ಮಾಲ್‌ ನಲ್ಲಿ ಭಾನುವಾರ ಖ್ಯಾತ ಕ್ರಿಕೆಟಿಗೆ ದಿನೇಶ್ ಕಾರ್ತಿಕ ಅವರೊಂದಿಗೆ ಅಭಿಮಾನಿಗಳ ಪ್ರತ್ಯೇಕ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿತ್ತು.

Advertisement

ಪರಿಮ್ಯಾಚ್ ಸ್ಪೋರ್ಟ್ಸ್ ಅಧಿಕೃತ ರಾಯಭಾರಿಯಾಗಿರುವ ದಿನೇಶ್ ಕಾರ್ತಿಕ್ ಈ ಕಾರ್ಯಕ್ರಮದ ಸಂದರ್ಭದಲ್ಲಿ ಮುಂಬರಲಿರುವ ಕ್ರಿಕೆಟ್ ಋತುವಿಗೆ ತಮ್ಮ ವೈಯಕ್ತಿಕ ಗುರಿಗಳ ಕುರಿತು ಒಳನೋಟಗಳನ್ನು ಹಂಚಿಕೊಂಡರು. ಅಲ್ಲದೇ ಪ್ರದರ್ಶನದ ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸುವುದಕ್ಕಾಗಿ ಅತ್ಲೀಟ್‌ ಗಳು ಬಳಸಿಕೊಳ್ಳುವ ಕಾರ್ಯತಂತ್ರಗಳನ್ನು ಕುರಿತು ತಿಳಿಸಿದರು.

ಪರಿಮ್ಯಾಚ್ ಸ್ಪೋರ್ಟ್ಸ್ನೊಂದಿಗೆ ಅವರ ಪಾಲುದಾರಿಕೆ ಕುರಿತ ಚರ್ಚೆಯಲ್ಲಿ ಕಾರ್ತಿಕ್ ಅವರ ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಬ್ರಾಂಡ್‌ನ ಅಚಲ ಬೆಂಬಲ ಕುರಿತು ಅವರು ಒತ್ತಿ ಹೇಳಿದರು.

“ಡೇರ್ ಟು ಬಿ ಎ ಚಾಂಪಿಯನ್” ಎಂಬ ಹೊಸ ಬ್ರಾಂಡ್ ಅಭಿಯಾನಕ್ಕೆ ಸಮರ್ಪಿತವಾದ ಇತ್ತೀಚಿನ ಪರಿಮ್ಯಾಚ್ ಕ್ರೀಡಾ ಬ್ರಾಂಡ್ ವಿಡಿಯೋಗಾಗಿ ಚಿತ್ರೀಕರಣದ ಸಂದರ್ಭದಲ್ಲಿನ ತಮ್ಮ ಅನುಭವವನ್ನು ಕೂಡ ಅವರು ಹಂಚಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next