Advertisement
ಇದಕ್ಕೂ ಸ್ವಾರಸ್ಯಕರ ಸಂಗತಿಯೆಂದರೆ, 91 ಏಕದಿನ ಪಂದ್ಯಗಳ ಅನುಭವಿಯಾಗಿರುವ ಕಾರ್ತಿಕ್ 2007ರ ವಿಶ್ವಕಪ್ ವೇಳೆ ಭಾರತ ತಂಡದಲ್ಲಿದ್ದರು ಎಂಬುದು. ಆದರೆ ಇದು ಅನೇಕರಿಗೆ ನೆನಪಿಲ್ಲ. ಏಕೆಂದರೆ 2011 ಮತ್ತು 2015ರಲ್ಲಿ ಅವರಿಗೆ “ವರ್ಲ್ಡ್ಕಪ್ ಬಸ್’ ಮಿಸ್ ಆಗಿತ್ತು. ಈಗ 12 ವರ್ಷಗಳ ಬಳಿಕ ಕಾರ್ತಿಕ್‌ಗೆ ವಿಶ್ವಕಪ್ ಬಾಗಿಲು ತೆರೆದದ್ದೊಂದು ಅಚ್ಚರಿ!
ತಂಡದ ಅತೀ ಹಿರಿಯ ಹಾಗೂ ಅತ್ಯಂತ ಅನುಭವಿ ಆಟಗಾ ರನಾಗಿರುವ ಮಹೇಂದ್ರ ಸಿಂಗ್ ಧೋನಿ ಪಾಲಿಗೆ ಇದು 4ನೇ ವಿಶ್ವಕಪ್. ಹಾಗೆಯೇ ಕೊನೆಯ ದೂ ಆಗಬಹುದು. ಮೊದಲ ಸಲ ವಿಶ್ವಕಪ್‌ನಲ್ಲಿ ಭಾರತವನ್ನು ಮುನ್ನ ಡೆಸಲಿರುವ ವಿರಾಟ್ ಕೊಹ್ಲಿಗೆ ಇದು 3ನೇ ವಿಶ್ವಕಪ್ ಆಗಿದೆ. ಉಳಿದಂತೆ ರೋಹಿತ್ ಶರ್ಮ, ಶಿಖರ್ ಧವನ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ 2015ರ ವಿಶ್ವಕಪ್‌ನಲ್ಲೂ ಆಡಿದ್ದರು. ಉಳಿದ 7 ಆಟಗಾರರು ಮೊದಲ ಸಲ ವಿಶ್ವಕಪ್ ಆಡುವ ಅವಕಾಶ ಪಡೆದಿದ್ದಾರೆ. ಭಾರತದ 2011ರ ವಿಶ್ವಕಪ್ ಜಯಭೇರಿಗೆ ಸಾಕ್ಷಿಯಾಗಿದ್ದ ಇಬ್ಬರಷ್ಟೇ ಈಗಿನ ತಂಡದಲ್ಲಿದ್ದಾರೆ. ಇವರೆಂದರೆ ಧೋನಿ ಮತ್ತು ಕೊಹ್ಲಿ.
Related Articles
2015ರ ವಿಶ್ವಕಪ್ ತಂಡದಲ್ಲಿ ಆಡಿದ 8 ಮಂದಿ ಈ ಬಾರಿ ಹೊರಗುಳಿದಿದ್ದಾರೆ. ಇವರೆಂದರೆ ಆರ್. ಅಶ್ವಿನ್, ಸ್ಟುವರ್ಟ್ ಬಿನ್ನಿ, ಅಂಬಾಟಿ ರಾಯುಡು, ಅಜಿಂಕ್ಯ ರಹಾನೆ, ಅಕ್ಷರ್ ಪಟೇಲ್, ಸುರೇಶ್ ರೈನಾ, ಮೋಹಿತ್ ಶರ್ಮ ಮತ್ತು ಉಮೇಶ್ ಯಾದವ್.
Advertisement