Advertisement

T20 World Cup ಕಾಮೆಂಟರಿ ಪ್ಯಾನೆಲ್ ಸೇರಿದ ಡಿ.ಕೆ; ಇಲ್ಲಿದೆ ವೀಕ್ಷಕ ವಿವರಣೆಗಾರರ ಪಟ್ಟಿ

04:43 PM May 24, 2024 | Team Udayavani |

ದುಬೈ: ಇನ್ನು ಕೆಲವೇ ದಿನಗಳಲ್ಲಿ ಐಸಿಸಿ ಟಿ20 ವಿಶ್ವಕಪ್ 2024 ಆರಂಭವಾಗಲಿದೆ. ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ನಲ್ಲಿ ನಡೆಯಲಿರುವ ಚುಟುಕು ಕ್ರಿಕೆಟ್ ವಿಶ್ವಕಪ್ ನಲ್ಲಿ 16 ತಂಡಗಳು ಸೆಣಸಾಡಲಿದೆ. 28 ದಿನಗಳ ಕಾಲ ನಡೆಯಲಿರುವ ಟಿ20 ವಿಶ್ವಕಪ್ ಆಯೋಜನೆಗೆ ಐಸಿಸಿ ಸಕಲ ತಯಾರಿ ನಡೆಸುತ್ತಿದೆ.

Advertisement

ಇದೀಗ ವಿಶ್ವಕಪ್ ಕೂಟದ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಭಾರತ ಸೇರಿ ಹಲವು ದೇಶಗಳ ತಾರಾ ಕಾಮೆಂಟೇಟರ್ ಗಳನ್ನು ಟಿ20 ವಿಶ್ವಕಪ್ ಕೂಟಕ್ಕೆ ಹೆಸರಿಸಲಾಗಿದೆ.

ರವಿಶಾಸ್ತ್ರಿ, ನಾಸರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಹರ್ಷಾ ಭೋಗ್ಲೆ ಮತ್ತು ಇಯಾನ್ ಬಿಷಪ್ ಅವರಂತಹ ದಿಗ್ಗಜರು ಕಾಮೆಂಟರಿ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಮಾಜಿ ಟಿ20 ಚಾಂಪಿಯನ್ ಗಳಾದ ದಿನೇಶ್ ಕಾರ್ತಿಕ್, ಎಬೊನಿ ರೈನ್‌ಫೋರ್ಡ್-ಬ್ರೆನ್, ಸ್ಯಾಮುಯೆಲ್ ಬದ್ರಿ, ಕಾರ್ಲೊಸ್ ಬ್ರಾತ್ ವೇಟ್, ಸ್ಟೀವ್ ಸ್ಮಿತ್, ಆ್ಯರೋನ್ ಫಿಂಚ್, ಲಿಸಾ ಸ್ತಾಲೆಕರ್ ಈ ಬಾರಿಯ ಕಾಮೆಂಟರಿ ಪ್ಯಾನೆಲ್ ನಲ್ಲಿ ಇರಲಿದ್ದಾರೆ.

ಮಾಜಿ 50 ಓವರ್‌ಗಳ ವಿಶ್ವಕಪ್ ವಿಜೇತರಾದ ರಿಕಿ ಪಾಂಟಿಂಗ್, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಮ್ ಕೂಡ ಮುಂಬರುವ ಪಂದ್ಯಾವಳಿಗೆ ತಮ್ಮ ಪರಿಣಿತ ವಿಶ್ಲೇಷಣೆಯನ್ನು ನೀಡಲಿದ್ದಾರೆ.

Advertisement

ಜಾಮ್ಬಾಯ್ ಎಂದು ಪ್ರಸಿದ್ಧರಾಗಿರುವ ಅಮೇರಿಕನ್ ನಿರೂಪಕ ಜೇಮ್ಸ್ ಒ’ಬ್ರೇನ್ ಅವರು ವಿಶ್ವಕಪ್‌ ಗೆ ಪದಾರ್ಪಣೆ ಮಾಡಲಿದ್ದಾರೆ.

ಉಳಿದಂತೆ ಡೇಲ್ ಸ್ಟೇಯ್ನ್, ಗ್ರೇಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೌಲ್, ಶಾನ್ ಪೊಲಾಕ್, ಕೇಟಿ ಮಾರ್ಟಿನ್, ಎಂಪುಮೆಲೆಲೊ ಎಂಬಾಂಗ್ವಾ, ನಟಾಲಿ ಜರ್ಮನೋಸ್, ಡ್ಯಾನಿ ಮಾರಿಸನ್, ಅಲಿಸನ್ ಮಿಚೆಲ್, ಅಲನ್ ವಿಲ್ಕಿನ್ಸ್, ಬ್ರಿಯಾನ್ ಮುರ್ಗಟ್ರಾಯ್ಡ್, ಮೈಕ್ ಹೇಸ್‌ಮನ್, ಇಯಾನ್ ವಾರ್ಡ್, ಅಥರ್ ಅಲಿ ಖಾನ್, ರಸೆಲ್ ಅರ್ನಾಲ್ಡ್, ನಿಯಾಲ್ ಒ’ಬ್ರಿಯಾನ್, ಕಾಸ್ ನೈಡೋ ಮತ್ತು ಡ್ಯಾರೆನ್ ಗಂಗಾ ಅವರು ಟಿ20 ವಿಶ್ವಕಪ್ ನಲ್ಲಿ ಕಾಮೆಂಟರಿ ಮಾಡಲಿದ್ದಾರೆ.

ಜೂನ್ 1ರಿಂದ ಟಿ20 ವಿಶ್ವಕಪ್ ಆರಂಭವಾಗಲಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕೂಟದ ನೇರಪ್ರಸಾರ ಇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next