Advertisement
ದಿನೇಶ್ ಕೇವಲ 23 ಎಸೆತಗಳಿಂದ ಅಜೇಯ 44 ರನ್ ಸಿಡಿಸಿದ್ದರಿಂದ ಆರ್‌ಸಿಬಿ ಅಮೋಘ ಗೆಲುವು ಸಾಧಿಸುವಂತಾಯಿತು. ಒಂದು ಹಂತದಲ್ಲಿ ಬ್ಯಾಟಿಂಗ್ ಕುಸಿತ ಕಂಡಿದ್ದ ಆರ್‌ಸಿಬಿ ತಂಡವನ್ನು ದಿನೇಶ್ ತನ್ನ ಅಮೋಘ ಆಟದಿಂದ ಮೇಲಕ್ಕೆತ್ತಿದ್ದರು. ಅವರಿಗೆ ಶಾಬಾಜ್ ಅಹ್ಮದ್ ಉತ್ತಮ ಬೆಂಬಲ ನೀಡಿದ್ದರು.
Related Articles
Advertisement
ಇದನ್ನೂ ಓದಿ:ಐಪಿಎಲ್ : ಏಕಪಕ್ಷೀಯವಾಗಿ ಗೆದ್ದ ಕೋಲ್ಕತ್ತ ನೈಟ್ ರೈಡರ್ಸ್
ರಾಜಸ್ಥಾನ್-ಬೆಂಗಳೂರು– ಬೌಂಡರಿ ಹೊಡೆಯದೇ ಜೋಸ್ ಬಟ್ಲರ್ 70 ರನ್ ಗಳಿಸಿರುವುದು ಐಪಿಎಲ್ ಇನ್ನಿಂಗ್ಸ್‌ವೊಂದರ ಗರಿಷ್ಠ ಮೊತ್ತವಾಗಿದೆ. 2017ರಲ್ಲಿ ಪಂಜಾಬ್ ವಿರುದ್ಧ ನಿತೀಶ್ ರಾಣಾ ಅಜೇಯ 62 ರನ್ ಗಳಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.
– ಬಟ್ಲರ್ ಐಪಿಎಲ್‌ನಲ್ಲಿ 100 ಸಿಕ್ಸರ್ ಬಾರಿಸಿದ ಇಂಗ್ಲೆಂಡಿನ ಮೊದಲ ಆಟಗಾರರಾಗಿದ್ದಾರೆ.
– ಐಪಿಎಲ್‌ನಲ್ಲಿ ಅತೀ ವೇಗವಾಗಿ 100 ಸಿಕ್ಸರ್ ಬಾರಿಸಿದವರಲ್ಲಿ ಬಟ್ಲರ್ ನಾಲ್ಕನೇ ಆಟಗಾರರಾಗಿದ್ದಾರೆ. ಬಟ್ಲರ್ 67 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕ್ರಿಸ್ ಗೇಲ್, ಆ್ಯಂಡ್ರೆ ರಸೆಲ್ ಮತ್ತು ರಿಷಬ್ ಪಂತ್ ಇನ್ನುಳಿದ ಮೂವರು ಆಟಗಾರರಾಗಿದ್ದು ಅವರೆಲ್ಲ ಬಟ್ಲರ್ ಅವರಿಗಿಂತ ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದರು.
– ಟಿ20 ಕ್ರಿಕೆಟ್‌ನಲ್ಲಿ ಸಂಜು ಸ್ಯಾಮ್ಸನ್ ಅವರನ್ನು ವನಿಂದು ಹಸರಂಗ ಅವರು ನಾಲ್ಕನೇ ಬಾರಿ ಕೆಡಹಿದ್ದಾರೆ.
– ಐಪಿಎಲ್ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಒಂದಂಕಿ ಮೊತ್ತದಲ್ಲಿ ರನೌಟ್ ಔಟಾಗಿರುವುದು ಇದು ಎರಡನೇ ಸಲವಾಗಿದೆ. ಈ ಮೊದಲು 2012ರಲ್ಲಿ ಮುಂಬೈ ವಿರುದ್ಧ ಅವರು ಒಂದಂಕಿ ಮೊತ್ತಕ್ಕೆ ರನೌಟ್ ಔಟಾಗಿದ್ದರು.
– ಬಟ್ಲರ್ ಕಳೆದ ನಾಲ್ಕು ಐಪಿಎಲ್ ಇನ್ನಿಂಗ್ಸ್‌ಗಳಿಂದ 329 ರನ್ ಗಳಿಸಿದ್ದಾರೆ. ಸತತ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತವನ್ನು ವಿರಾಟ್ ಕೊಹ್ಲಿ (351), ಶಿಖರ್ ಧವನ್ (333) ಮಾತ್ರ ಹೊಡೆದಿದ್ದರು.
– ಐಪಿಎಲ್ 2022ರಲ್ಲಿ ಬಟ್ಲರ್ 205 ರನ್ ಗಳಿಸಿದ್ದಾರೆ. ಈ ಋತುವಿನ ಗರಿಷ್ಠ ರನ್ ಸಾಧನೆಯಲ್ಲಿ ಇಶನ್ ಕಿಶನ್ ಮೊತ್ತವನ್ನು ಹಿಂದಿಕ್ಕಿರುವ ಬಟ್ಲರ್ ಆರೆಂಜ್ ಕ್ಯಾಪ್ ಹೊಂದಿದ್ದಾರೆ.
– ಶಾಬಾಜ್ ಮತ್ತು ದಿನೇಶ್ ಕಾರ್ತಿಕ್ ಅವರ 67 ರನ್ ಜತೆಯಾಟ ಐಪಿಎಲ್‌ನಲ್ಲಿ ಆರ್‌ಸಿಬಿ ಆರನೇ ವಿಕೆಟಿಗೆ ಪೇರಿಸಿದ ಎರಡನೇ ಗರಿಷ್ಠ ಮೊತ್ತವಾಗಿದೆ. 2013ರಲ್ಲಿ ಗೇಲ್ ಮತ್ತು ಅರುಣ್ ಕಾರ್ತಿಕ್ ಅಜೇಯ 76 ರನ್ ಪೇರಿಸಿದ್ದು ಈ ಹಿಂದಿನ ಗರಿಷ್ಠ ಮೊತ್ತವಾಗಿತ್ತು.