ರಾಮನಗರ: ರಮೇಶ್ ಜಾರಕಿಹೊಳಿ ರಾಸಲೀಲೆ ಸೀಡಿ ಬಗ್ಗೆ ಬೆಂಗಳೂರು ಕಬ್ಬನ್ ಪಾರ್ಕ್ ಪೊಲೀಸರಿಗೆ ನೀಡಿದ್ದ ದೂರನ್ನು ವಾಪಸ್ ಪಡೆದಿರುವ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ, ತಮ್ಮ ಮೇಲಿನ ಆರೋಪಗಳು ಸಾಬೀತಾದರೆ ಸಾರ್ವಜನಿಕವಾಗಿ ಶಿಕ್ಷಗೆ ಗುರಿಯಾಗುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯ ಕನಕಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮ ವಕೀಲರು ಸಲಹೆ, ಸೂಚನೆಗಳಂತೆ ತಾವು ದೂರು ವಾಪಸ್ ಪಡೆದುಕೊಂಡಿ ದ್ದು, ದೂರು ವಾಪಸ್ ಪಡೆ ಯಲು ತಾವು ತಮ್ಮಕಾರ ಣ ಗ ಳನ್ನು ಪೊಲೀಸರಿಗೆ ತಿಳಿಸಿದ್ದೇನೆ. ದೂರು ವಾಪಸ್ ಪಡೆಯಲು ತಮಗೆ ಯಾರಿಂದಲೂ ಒತ್ತಡ ಬಂದಿಲ್ಲ, ವಿಚಾ ರ ಣೆಗೆ ಕರೆ ದರೆ ಹೋಗು ವು ದಾಗಿ ಸ್ಪಷ್ಟ ಪ ಡಿ ಸಿ ದರು.
ದೂರು ನೀಡಿದಾಕ್ಷಣಕ್ಕೆ ತಮ್ಮನ್ನೇ ತಪ್ಪಿತಸ್ಥನ ಸಾಲಿನಲ್ಲಿ ನಿಲ್ಲಿಸಲಾಗುತ್ತಿದೆ. 5 ಕೋಟಿ ರೂ. ಡೀಲ್ ಆರೋಪ ಮಾಡ ಲಾ ಗಿದೆ. ಕೆಲವು ಮಾಧ್ಯ ಮ ಗಳು ತಮ್ಮ ವಿರುದ್ಧ ಷಡ್ಯಂತ್ರ ಹೆಣೆ ದಿವೆ. ತಮ್ಮ ಮೇಲಿನ ಆರೋಪ ಸಾಬೀತು ಪಡಿ ಸಿ ದರೆ, ಸಾರ್ವಜನಿಕವಾಗಿ ಶಿಕ್ಷೆಗೆ ಗುರಿಯಾಗಲು ಸಿದ್ಧ ವಿ ರು ವು ದಾಗಿ ತಿಳಿ ಸಿ ದರು.
ಕಾನೂನು ಹೋರಾಟ: ಕೆಲ ವರು ತೆವಲಿಗೆ ಮಾತನಾಡುತ್ತಿದ್ದಾರೆ. ಆದರೆ, ವಾಸ್ತವಾಂಶವೇ ಬೇರೆಯಾಗಿದೆ. ತಮ್ಮ ವಿರುದ್ಧದ ಆರೋ ಪ ಗ ಳಿಂದ ಮುಕ್ತ ನಾ ಗಲು ತಾವು ಕಾನೂನು ಹೋರಾಟ ನಡೆ ಸ ಬೇ ಕಾ ಗಿದೆ.ಹೀಗಾಗಿ ಸದರಿ ಪ್ರಕರಣದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದರು. ದೂರಿನಿಂದ ತಾವು ಹಿಂದೆ ಸರಿದಾಕ್ಷಣಕ್ಕೆ ಪ್ರಕರಣ ಮುಚ್ಚಿ ಹೋಗುವುದಿಲ್ಲ.
ಸುಮೊಟೊ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸುವುದು ತನಿಖಾಕಾರಿಗಳ ವಿವೇಚನೆಗೆ ಬಿಟ್ಟಿದ್ದು ಎಂದರು. ಷಡ್ಯಂತ್ರ ಮಾಡಿದವರನ್ನು ಜೈಲಿಗೆ ಕಳುಹಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಗಮನ ಸೆಳೆದಾಗ ತಾವು ಸಹ ಕಾನೂನಾತ್ಮಕವಾಗಿ ಹೋರಾಟ ಮಾಡುವುದಾಗಿ ತಿಳಿಸಿ ದರು.