Advertisement

Congress ಗ್ಯಾರಂಟಿಯನ್ನು ಟೀಕಿಸುವ ಬಿಜೆಪಿಗೆ ಸವಾಲು ಹಾಕಿದ ದಿನೇಶ್‌ ಹೆಗ್ಡೆ

04:16 PM May 07, 2023 | Team Udayavani |

ಕುಂದಾಪುರ: ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ಪರವಾಗಿ ಮತಯಾಚನೆಗೆ ಕಾಂಗ್ರೆಸ್‌ ಮುಖಂಡರು, ಕಾರ್ಯಕರ್ತರಿಂದ ಶನಿವಾರ ಸಂಜೆ ಕೋಟ ಬ್ಲಾಕ್‌ ಕಾಂಗ್ರೆಸ್‌ ಕಚೇರಿಯಿಂದ ಸಾಲಿಗ್ರಾಮ ಬಸ್‌ ನಿಲ್ದಾಣವರೆಗೆ ಬೃಹತ್‌ ಪಾದಯಾತ್ರೆ ನಡೆಯಿತು.

Advertisement

ಕೋಟ ಬ್ಲಾಕ್‌ ಅಧ್ಯಕ್ಷ ಶಂಕರ ಎ.ಕುಂದರ್‌ ನೇತೃತ್ವದಲ್ಲಿ ಹೊರಟ ಕಾಲ್ನಡಿಗೆ ಜಾಥಾ, ಸಾಲಿಗ್ರಾಮದ ರೋಡ್‌ ಶೋನಲ್ಲಿ ಅಭ್ಯರ್ಥಿ ದಿನೇಶ್‌ ಹೆಗ್ಡೆ, ಕುಂದಾಪುರ ಬ್ಲಾಕ್‌ ಅಧ್ಯಕ್ಷ ಹರಿಪ್ರಸಾದ್‌ ಶೆಟ್ಟಿ ಕಾನ್ಮಕ್ಕಿ , ಸಾಲಿಗ್ರಾಮ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಶ್ರೀನಿವಾಸ ಅಮೀನ್‌ ಸಹಿತ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಬಹಿರಂಗ ಸಭೆ
ಕೋಟ ಗ್ರಾ.ಪಂ.ನ ಮಣೂರು, ಕೋಟತಟ್ಟು ಗ್ರಾ.ಪಂ.ನ ಪಡುಕರೆ, ಕೋಡಿ ಗ್ರಾ.ಪಂ.ನ ಕನ್ಯಾಣದಲ್ಲಿ ಮೇ 5ರಂದು ಸಂಜೆ ಸಮಾವೇಶ ನಡೆಯಿತು.

ಮಣೂರಿನಲ್ಲಿ ಅಭ್ಯರ್ಥಿ ಮೊಳಹಳ್ಳಿ ದಿನೇಶ್‌ ಹೆಗ್ಡೆ , ಇದೀಗ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ಬಗ್ಗೆ ಬಿಜೆಪಿಗೆ ಆರಂಭಗೊಂಡಿದೆ ಹೆದರಿಕೆಯಾಗಿದೆ. ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನಾವು ಕೊಟ್ಟ ಗ್ಯಾರಂಟಿಯನ್ನು ಮೊದಲ ಕ್ಯಾಬಿನೆಟ್‌ ಸಭೆಯಲ್ಲೇ ಅಂಗೀಕಾರಗೊಳ್ಳಲಿದೆ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಬಳಿಕ ಗ್ಯಾರಂಟಿಯನ್ನು ಜಾರಿ ಮಾಡದೇ ಇದ್ದರೆ ನಾವು ಮುಂದಿನ ಚುನಾವಣೆಗಳಲ್ಲಿ ಮತ ಯಾಚಿಸುವುದಿಲ್ಲ. ಗ್ಯಾರಂಟಿಯನ್ನು ಜಾರಿ ಮಾಡಿದರೆ ಬಿಜೆಪಿ ಕೂಡಾ ಇಂತಹ ನಿರ್ಧಾರ ಕೈಗೊಳ್ಳುತ್ತದೆಯೇ ಎಂದು ಸವಾಲು ಹಾಕಿದರು.

ಕಾಂಗ್ರೆಸ್‌ ಪಕ್ಷ ಎಲ್ಲ ಧರ್ಮ, ಜಾತಿಯನ್ನು ಸಮಾನ ರೀತಿಯಲ್ಲಿ ಕಾಣುತ್ತಿದ್ದು, ಬಿಜೆಪಿ ಪಕ್ಷ ಸೋಲುವ ಭೀತಿಯಿಂದ ಅಪಪ್ರಚಾರ ಮಾಡುತ್ತಿದೆ. ಸಂವಿಧಾನದ ವಿಧಿಗಳನ್ನು ವಿರೋಧಿಸುವ ಸಂಘಟನೆಯ ವಿರುದ್ಧ ಕಾನೂನು ಕ್ರಮ ಎಂದಿದೆಯೇ ಹೊರತು ಬಜರಂಗದಳ ನಿಷೇಧಿಸುವ ಪ್ರಸ್ತಾವ ಕಾಂಗ್ರೆಸ್‌ ಮುಂದಿಲ್ಲ ಎಂದರು.

Advertisement

ಸುಳ್ಯದ ಲಕ್ಷ್ಮೀಶ ಗಬಲಡ್ಕ , ಬಿಜೆಪಿ ಪೊಳ್ಳು ಭರವಸೆ ನೀಡಿ ಜನಸಾಮಾನ್ಯರ ಬದುಕಿಗೆ ಸಂಚಕಾರ ತಂದಿರಿಸುತ್ತಿದೆ.ಹಿಂದುತ್ವದ ಹೆಸರಿನಲ್ಲಿ ಹಿಂದೂಗಳ ದಿಕ್ಕು ತಪ್ಪಿಸುತ್ತಿದೆ. ರಾಜ್ಯದ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲೆ ಮುಳುಗಿದೆ. ಇಂತಹ ಪಕ್ಷಕ್ಕೆ ಮರಳಿ ಅಧಿಕಾರ ನೀಡಿದರೆ ಇಡೀ ರಾಜ್ಯವನ್ನೆ ಕೊಳ್ಳೆಹೊಡೆಯುವ ಕೆಲಸವಾಗಲಿದೆ. ಅದಕ್ಕಾಗಿ ಮೊಳಹಳ್ಳಿ ದಿನೇಶ್‌ ಹೆಗ್ಡೆ ಅವರನ್ನು ಆಯ್ಕೆಗೊಳಿಸಿ ಎಂದರು.
ಕೋಟ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಶಂಕರ್‌ ಕುಂದರ್‌, ಮುಖಂಡರಾದ ಜಿ. ತಿಮ್ಮ ಪೂಜಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಳಬೈಲು ಮಾತನಾಡಿದರು.

ಕೋಟ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ ಆಚಾರ್‌, ಕೋಟ ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವ ಪೂಜಾರಿ, ಇಂಟೆಕ್‌ ಅಧ್ಯಕ್ಷ ದೇವೇಂದ್ರ ಗಾಣಿಗ, ರಾಜ್ಯ ಯುವ ಕಾಂಗ್ರೆಸ್‌ ಕಾರ್ಯದರ್ಶಿ ಅಜಿತ್‌ ಶೆಟ್ಟಿ , ರವೀಂದ್ರ ಐತಾಳ್‌, ದೇವೆಂದ್ರ ಗಾಣಿಗ, ಚಂದ್ರ ಆಚಾರ್‌, ಸುರೇಶ್‌ ಚೆಚ್ಚಕೆರೆ, ಕೋಟತಟ್ಟು ಗ್ರಾಮ ಪಂಚಾಯತ್‌ ಸದಸ್ಯರಾದ ರಾಬರ್ಟ್‌ ನಾಯಕ್‌, ಸಾಹಿರಾಬಾನು ಉಪಸ್ಥಿತರಿದ್ದರು. ಉಪನ್ಯಾಸಕ ಅಕ್ಷಯ ಶೆಟ್ಟಿ ಮೊಳಹಳ್ಳಿ ನಿರೂಪಿಸಿ, ಗಣೇಶ್‌ ನೆಲ್ಲಿಬೆಟ್ಟು ವಂದಿಸಿದರು.

ಸ್ವಾಭಿಮಾನಕ್ಕಾಗಿ, ಸಿದ್ದಾಂತಕ್ಕಾಗಿ ಎಂತಹ ತ್ಯಾಗಕ್ಕೂ ಸಿದ್ಧರಾದ, ರೈತರ ಪರವಾದ ಧ್ವನಿಯಾಗಿ ಸಭಾಪತಿ ಸ್ಥಾನ ತ್ಯಜಿಸಿದ ಮೌಲ್ಯಾಧಾರಿತ ರಾಜಕಾರಣಿ ಪ್ರತಾಪ್‌ಚಂದ್ರ ಶೆಟ್ಟಿ ಅವರ ಗರಡಿಯಲ್ಲಿ ಬೆಳೆದ ಯುವ ನಾಯಕ ಮೊಳಹಳ್ಳಿ ದಿನೇಶ್‌ ಹೆಗ್ಡೆ ಅಭ್ಯರ್ಥಿ ಎನ್ನುವುದು ಕುಂದಾಪುರ ಕಾಂಗ್ರೆಸ್‌ ಕಾರ್ಯಕರ್ತರ ಹೆಮ್ಮೆ.
ಕೆ. ವಿಕಾಸ ಹೆಗ್ಡೆ, ಡಿಸಿಸಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next