Advertisement
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಯಡಿಯೂರಪ್ಪನವರ ಕುರಿತು ದಿನೇಶ್ ಗುಂಡೂರಾವ್ ಬಳಸಿರುವಂತಹ ಪದಗಳು ಅತ್ಯಂತ ಖಂಡನೀಯ. ದಿನೇಶ್ ಗುಂಡೂರಾವ್‌ಗೆ ಯಡಿಯೂರಪ್ಪ ಬಗ್ಗೆ ಮಾತನಾಡುವ ನೈತಿಕ ಹಕ್ಕೇ ಇಲ್ಲ.
Related Articles
Advertisement
ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ರೆಸ್‌ಗೆ ಇಲ್ಲದಂತಾಗುತ್ತದೆ ಎಂದು ಹೇಳಿದರು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಯಚಂದ್ರ, ಚಿಕ್ಕರಾಯಪ್ಪ ಅವರಂತಹ ಅಧಿಕಾರಿಗಳ ಬಳಿಯೇ ಕೋಟ್ಯಂತರ ಅಕ್ರಮ ಆಸ್ತಿ ದೊರೆತಿದೆ. ಸಚಿವ ರಮೇಶ್ ಜಾರಕಿಹೊಳಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಟಾಳಕರ್ ಮನೆಯಲ್ಲಿ 165 ಕೋಟಿ, ಶಾಸಕ ಎಂ.ಟಿ.ಬಿ. ನಾಗರಾಜ್ ಮನೆಯಲ್ಲಿ 120 ಕೋಟಿಗೂ ಅಧಿಕ ಅಕ್ರಮ ಆಸ್ತಿ ದೊರೆತಿದೆ.
ಆ ಬಗ್ಗೆ ದಿನೇಶ್ ಗುಂಡೂರಾವ್ ಮಾತನಾಡುವುದಿಲ್ಲ. ನಾಲ್ಕು ವರ್ಷದಿಂದ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಬರದಲ್ಲಿರುವ ಜನರಿಗೆ ಸ್ಪಂದಿಸುತ್ತಿಲ್ಲ. ಇದೊಂದು ಭ್ರಷ್ಟಾಚಾರ ಕರ್ಮಕಾಂಡ ಸರ್ಕಾರ ಎಂದು ಜರಿದರು. ವಿಧಾನ ಪರಿಷತ್ ಸದಸ್ಯ ಕೆ. ಗೋವಿಂದರಾಜ್ ಮನೆಯಲ್ಲಿ ಡೈರಿ ಸಿಕ್ಕಿರುವುದು, ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಹೋಗಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.
ಯಡಿಯೂರಪ್ಪ ನವರ ವಿರುದ್ಧದ ಸಿಡಿ ಠುಸ್ ಪಟಾಕಿ ಆಗಿದೆ. ಕಾಂಗ್ರೆಸ್ ಮುಖಂಡರು ಯಡಿಯೂರಪ್ಪನವರ ಆರೋಪವನ್ನು ಸವಾಲಾಗಿ ಸೀÌಕರಿಸಬೇಕು. ಡೈರಿಯ ಬಗ್ಗೆ ಸಮಗ್ರ ತನಿಖೆಗೆ ಒಳಪಡಿಸಿ, ತಪ್ಪಿತಸ್ಥರು ಯಾರಿಯೇ ಆಗಲಿ, ಸತ್ಯಾಸತ್ಯತೆ ಹೊರ ಬರುವಂತಾಗಲಿ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಒತ್ತಾಯಿಸಿದರು. ಪಕ್ಷದ ಜಿಲ್ಲಾ ಅಧ್ಯಕ್ಷ ಯಶವಂತರಾವ್ ಜಾಧವ್, ಸಿ. ರಮೇಶ್‌ನಾಯ್ಕ, ರಾಜನಹಳ್ಳಿ ಶಿವಕುಮಾರ್, ಎನ್. ರಾಜಶೇಖರ್, ಕೂಲಂಬಿ ಬಸವರಾಜ್, ಟಿಂಕರ್ ಮಂಜಣ್ಣ ಇತರರು ಸುದ್ದಿಗೋಷ್ಠಿಯಲ್ಲಿದ್ದರು.