ಬೆಂಗಳೂರು: ಮುಖ್ಯಮಂತ್ರಿ
ಯಡಿಯೂರಪ್ಪ ಅವರದು “ಕಿಚನ್ ಕ್ಯಾಬಿನೆಟ್’ ಅಗಿದ್ದು, ಅವರಿಗೆ ಸೂಪರ್ ಸಿಎಂಗಳಿದ್ದಾರೆ. ಅವರು ಯಾವ ರೀತಿ ಸಲಹೆ ಕೊಡುತ್ತಿದ್ದಾರೆಯೋ ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ
ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯ ವೈಖರಿ ಸರಿಯಿಲ್ಲ.
ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಶೇ 10% ಕೆಲಸ ಕೂಡ ಈಗ ಆಗುತ್ತಿಲ್ಲ. ಬರೀ ಕಮಿಷನ್ ಹೊಡೆಯುವುದೇ ಕೆಲಸವಾಗಿದೆ ಎಂದು ಆರೋಪಿಸಿದರು.
ಯಡಿಯೂರಪ್ಪ ಅವರು ವಿಪಕ್ಷದಲ್ಲಿ ಇದ್ದಾಗ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಈಗ ಅವರು ಅಧಿಕಾರದಲ್ಲಿದ್ದು ಬಜೆಟ್ ಮಂಡನೆ ಮಾಡಿದ್ದಾರೆ. ಆದರೆ ರಾಜ್ಯದ ಬೊಕ್ಕಸದಲ್ಲಿ ಹಣವೇ ಇಲ್ಲ. ಎಲ್ಲಿಂದ ಹಣ ತರುತ್ತಾರೆ ಎಂದು ಪ್ರಶ್ನಿಸಿದರು.
ಕೇಂದ್ರ ಹಣಕಾಸು ಸಚಿವೆ
ನಿರ್ಮಲಾ ಸೀತಾರಾಮನ್ ಅವರಿಗೆ ಆರ್ಥಿಕ ಜ್ಞಾನ ಇಲ್ಲ.
ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ
ಅಮಿತ್ ಶಾ ಹೇಳಿದಂತೆ ಸಹಿ ಹಾಕುತ್ತಾರೆ. ಯೆಸ್ ಬ್ಯಾಂಕ್ ದಿವಾಳಿಗೆ ಕಾಂಗ್ರೆಸ್, ಯುಪಿಎ ಸರಕಾರ ಕಾರಣವಲ್ಲ. ಯುಪಿಎ ಸರಕಾರ ಎಷ್ಟು ಸಾಲ ಕೊಟ್ಟಿತ್ತು. ಬಿಜೆಪಿ ಸರಕಾರ ಬಂದ ಮೇಲೆ ಎಷ್ಟು ಸಾಲ ಕೊಟ್ಟಿ¨ªಾರೆ ಎಂಬ ಮಾಹಿತಿಯನ್ನು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಸ್ಪಷ್ಟಪಡಿಸಿ¨ªಾರೆ. ಕಳೆದ ಆರು ವರ್ಷಗಳಿಂದ ಮೋದಿ ಸರಕಾರ ಏನು ಮಾಡುತ್ತಿತ್ತು. ದೇಶದಲ್ಲಿ ಆರ್ಥಿಕ ಹಿಂಜರಿತಕ್ಕೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವೇ ಕಾರಣ ಎಂದು ಆರೋಪಿಸಿದರು.
ಕೆಪಿಸಿಸಿ ಅಧ್ಯಕ್ಷರ ನೇಮಕಕೆ ಆಗ್ರಹ
ಕೆಪಿಸಿಸಿ ಅಧ್ಯಕ್ಷರ ನೇಮಕ ವಿಳಂಬದ ಕುರಿತು ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರನ್ನು ಆದಷ್ಟು ಬೇಗ ನೇಮಕ ಮಾಡಬೇಕು. ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರ ಪಕ್ಷದ ಸಂಘಟನೆಗೆ ಸೂಕ್ತವಾಗಿರಬೇಕು. ಕೇಂದ್ರ ಮತ್ತು ರಾಜ್ಯ ಸರಕಾರದ ಜನವಿರೋಧಿ ನೀತಿ, ಕಾರ್ಯವೈಖರಿ ವಿರುದ್ದ ಪಕ್ಷದ ವತಿಯಿಂದ ಹೋರಾಡಬೇಕಾಗುತ್ತದೆ. ಹೀಗಾಗಿ ಈ ಅನಿಶ್ಚಿತತೆ ಆದಷ್ಟು ಬೇಗ ಬಗೆಹರಿಯಬೇಕಿದೆ ಎಂದರು.