Advertisement

ದಿನೇಶ್‌ ಬಹಿರಂಗ ಕ್ಷಮೆಯಾಚಿಸಲಿ

06:25 AM Apr 16, 2018 | |

ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಬಗ್ಗೆ ಕಾಂಗ್ರೆಸ್‌ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ತೀರ ಅವಹೇಳನ ಕಾರಿ ಮತ್ತು ಅಸಭ್ಯವಾಗಿ ಮಾತನಾಡಿರುವುದು ಖಂಡನೀಯ. ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಆಗ್ರಹಿಸಿದ್ದಾರೆ.

Advertisement

ಬುದ್ಧಿ ಸ್ಥಿಮಿತದಲ್ಲಿರುವ ಯಾವ ವ್ಯಕ್ತಿಯೂ, ಸಾರ್ವಜನಿಕ ಜೀವನದಲ್ಲಿ ಹೀಗೆ ಮಾತನಾಡುವುದಿಲ್ಲ. ಕುಡಿತದ ಅಮಲಿನಲ್ಲಿ ಬಾಯಿಗೆ ಬಂದಂತೆ ಅನಾಗರಿಕರಂತೆ ದಿನೇಶ್‌ ಮಾತನಾಡಿ, ತಮ್ಮ ಯೋಗ್ಯತೆ ಸಾಬೀತುಪಡಿಸಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಥಪಂಥಕ್ಕೆ ದಿನೇಶ್‌ ಅಪಮಾನ ಮಾಡಿದ್ದಾರೆ. ನಾಥಪಂಥವನ್ನು ಕರ್ನಾಟಕದ ಒಕ್ಕಲಿ ಗರೂ ಅತ್ಯಂತ ಗೌರವದಿಂದ
ಪಾಲಿಸುತ್ತಾರೆ. ಕಾಂಗ್ರೆಸ್‌ ಕೂಡಲೇ ಸಮಸ್ತ ಒಕ್ಕಲಿಗರಿಗೆ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.

ಚುನಾವಣಾ ಆಯೋಗವು ದಿನೇಶ್‌ ಗುಂಡೂರಾವ್‌ ಅವರ ಪ್ರಚೋದನಕಾರಿ ಹೇಳಿಕೆ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಯಡಿಯೂರಪ್ಪ ಆಗ್ರಹಿಸಿದರು.

ಸುಸಂಸ್ಕೃತ ಮನೆತನದಿಂದ ಬಂದಿರುವ ದಿನೇಶ್‌ ಗುಂಡೂರಾವ್‌, ದೇಶದ ಸಾಧುಸಂತರ ಪ್ರಮುಖ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ ಕುರಿತಾಗಿ ಬಳಸಿರುವ ಪದ ನನ್ನ ಮನಸ್ಸಿಗೆ ನೋವುಂಟು ಮಾಡಿದೆ. ಅವಹೇಳನಕಾರಿ ಹೇಳಿಕೆ ನೀಡಿರುವುದಕ್ಕೆ ಗುಂಡೂರಾವ್‌ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು.
– ಕೆ.ಎಸ್‌. ಈಶ್ವರಪ್ಪ,
ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

ಕಾಂಗ್ರೆಸ್‌ ಮುಖಂಡರ ದರ್ಪ, ದೌರ್ಜನ್ಯ ಮಿತಿ ಮೀರಿದೆ. ದೇಶದಲ್ಲೇ ಕರ್ನಾಟಕದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಲಪಾಡ್‌ ವರ್ತನೆ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಕಾಂಗ್ರೆಸ್‌ ಶಾಸಕರ ಬೆಂಬಲಿಗ ಬಿಬಿಎಂಪಿಕಚೇರಿಗೆ ಪೆಟ್ರೋಲ್‌ ಸುರಿದಿದ್ದಾರೆ. ಇಂತಹ ಹತ್ತಾರು ಘಟನೆ ನಡೆದಿದೆ.
– ಶೋಭಾ ಕರಂದ್ಲಾಜೆ,
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next