Advertisement

ಗೋವಾದ ಪ್ರಸಿದ್ಧ ಕೊಂಕಣಿ ಸಾಹಿತಿ ದಿಲೀಪ್ ಬೋರಕರ್ ಕಾಂಗ್ರೆಸ್ ಸೇರ್ಪಡೆ

04:32 PM Oct 13, 2021 | Team Udayavani |

ಪಣಜಿ: ರಾಜ್ಯದಲ್ಲಿ ಸದ್ಯ ಏನು ನಡೆಯುತ್ತಿದೆಯೋ ಅದನ್ನು ಜನತೆ ನೋಡುತ್ತಿದ್ದಾರೆ. ಇದರಿಂದಾಗಿ ಕೆಲ ಕಾಲ ನಾನು ರಾಜಕೀಯದಿಂದ ದೂರವುಳಿದಿದ್ದೆ. ಆದರೆ ಗೋವಾ ರಾಜ್ಯವನ್ನು ರಕ್ಷಿಸಲು ಒಂದು ವೇದಿಕೆ ಅಗತ್ಯವಿರುವುದರಿಂದ ನಿಸ್ವಾರ್ಥವಾಗಿ ಕೆಲಸ ನಿರ್ವಹಿಸಲು ನಾನು ಕಾಂಗ್ರೇಸ್ ಪಕ್ಷ ಪ್ರವೇಶಿಸಿದೆ. ನಾನು ಚುನಾವಣೆಗೆ ಸ್ಫರ್ಧಿಸುವುದಿಲ್ಲ, ರಾಜಕಾರಣ ಬೇಡ ಎಂದು ಗೋವಾದ ಪ್ರಸಿದ್ಧ ಕೊಂಕಣಿ ಸಾಹಿತಿ ದಿಲೀಪ್ ಬೋರಕರ್ ಹೇಳಿದರು.

Advertisement

ಪಣಜಿಯ ಕಾಂಗ್ರೇಸ್ ಕಛೇರಿಯಲ್ಲಿ ಬುಧವಾರ ದಿಲೀಪ್ ಬೋರಕರ್ ಕಾಂಗ್ರೇಸ್ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಗೋವಾದ ಕಾಂಗ್ರೆಸ್ ಚುನಾವಣಾ ನಿರೀಕ್ಷಕ ಪಿ.ಚಿದಂಬರಂ, ಗೋವಾ ಕಾಂಗ್ರೆಸ್ ಪ್ರಭಾರಿ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಪ್ರದೇಶಾಧ್ಯಕ್ಷ ಗಿರೀಶ್ ಚೋಡಣಕರ್, ಪ್ರತಿಪಕ್ಷದ ನಾಯಕ ದಿಗಂಬರ್ ಕಾಮತ್ ಉಪಸ್ಥಿತರಿದ್ದರು.

ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಅಗತ್ಯವಿದೆ, ಇದರಿಂದಾಗಿ ಗೋವಾ ರಾಜ್ಯದ ಜನತೆ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಮತಹಾಕುವ ಅಗತ್ಯವಿದೆ. ಗೋವಾ ರಾಜ್ಯವನ್ನು ರಕ್ಷಿಸುವ ಸಂದರ್ಭ ಬಂದಿದೆ ಎಂದು ದಿಲೀಪ್ ಬೋರಕರ್ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next