Advertisement

ಬಂಗಾಳದ ಮಮತಾ ಪ್ರಧಾನಿ ಆಗಲಿ:ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್

10:18 AM Jan 06, 2019 | Team Udayavani |

ಕೋಲ್ಕತಾ: ಬಂಗಾಳದ ಯಾರಿಗಾದರೂ ಪ್ರಧಾನಿ ಆಗುವ ಅವಕಾಶ ಸಿಕ್ಕಿದರೆ ಅದು ಮಮತಾ ಬ್ಯಾನರ್ಜಿ ಅವರಿಗೆ ಸಿಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್‌ ಘೋಷ್ ಅವರು ಹೇಳಿಕೆ ನೀಡಿ ಬಿಜೆಪಿ ವರಿಷ್ಠರು ಮತ್ತು ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Advertisement

ನಾನು ನಮ್ಮ ಮುಖ್ಯಮಂತ್ರಿಗಳಿಗೆ ಜನ್ಮ ದಿನಾಚರಣೆಯ ಶುಭ ಕೋರಲು ಬಯಸುತ್ತೇನೆ. ನಾನು ಅವರ ಆರೋಗ್ಯ ಮತ್ತು ಯಶಸ್ಸಿಗಾಗಿ ಪ್ರಾರ್ಥನೆ ಮಾಡುತ್ತೇನೆ ಯಾಕೆಂದರೆ ನಮ್ಮ ರಾಜ್ಯದ ಭವಿಷ್ಯ ಅವರ ಕೈಯಲ್ಲಿ ಇದೆ.ಬಂಗಾಳದಿಂದ ಯಾರಿಗಾದರೂ ಪ್ರಧಾನಿ ಆಗುವ ಅವಕಾಶ ದೊರೆತರೆ ಅದು ಮಮತಾ ಅವರಿಗೆ ಸಿಗಲಿ ಎಂದು ದಿಲೀಪ್‌ ಘೋಷ್ ಶನಿವಾರ ಹೇಳಿಕೆ ನೀಡಿದ್ದರು. 

ಘೋಷ್ ಹೇಳಿಕೆ ಭಾರಿ ಸುದ್ದಿಯಾಗಿ ಪಕ್ಷದಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ‘ನಾನು ಹೇಳಿರುವುದನ್ನು ಒಳ್ಳೆಯ ಹಾಸ್ಯ ಎಂದು ಭಾವಿಸಿ, ಅವರು ಪ್ರಧಾನಿಯಾಗುವುದು ಸಾಧ್ಯವಿಲ್ಲ‘ ಎಂದಿದ್ದಾರೆ.

2014ರ ಲೋಕಸಭಾ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಅವರ ನಾಯಕತ್ವದಲ್ಲಿ  42 ಸ್ಥಾನಗಳ ಪೈಕಿ 34 ಸ್ಥಾನಗಳನ್ನು ಟಿಎಂಸಿ ಗೆದ್ದುಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next