Advertisement
ಕಿಂಡಿ ಆಣೆಕಟ್ಟಿನ ಕಳಪೆ ಕಾಮಗಾರಿ ಜತೆಗೆ ಆಣೆಕಟ್ಟುವಿಗೆ ಹಲಗೆ ಹಾಕಿಸಲು ಪಂಚಾಯತ್ ಆಡಳಿತ ದಿವ್ಯನಿರ್ಲಕ್ಷ್ಯದಿಂದಾಗಿ ಆಣೆಕಟ್ಟುವಿನ ತಡೆಗೋಡೆ ಹಾಗೂ ಅದರ ಬದಿಯು ಕುಸಿಯಲಾರಂಭಿಸಿತು. ಮತ್ತೆ ಮಳೆಗಾಲದ ನೆರೆಗೆ ಧಾರಣ ಶಕ್ತಿಯ ಕೊರತೆಯಿಂದ ಆಣೆಕಟ್ಟು ಶಿಥಿಲಗೊಂಡಿದೆ.
ಚಿಕ್ಕ ಹರಿಯವ ತೋರೆಗಳಿಗೆ ಗ್ರಾಮಸ್ಥರು ಸೇರಿಕೊಂಡು ಆಣೆಕಟ್ಟು ಕಟ್ಟಿ ಭತ್ತ ಬೇಸಾಯ ಹಾಗೂ ತರಕಾರಿ ತೆಂಗಿನ ಅಡಿಕೆ ಕೃಷಿ ಮಾಡುತ್ತಿದ್ದಾರೆ. ಆದರೇ ಈ ಆಣೆಕಟ್ಟುವಿನಿಂದ ಪರಿಸರದ ಹಲವಾರು ಬಾವಿಗಳು ತುಂಬಿ ಕುಡಿಯುವ ನೀರಿನ ಸಮಸ್ಯೆ ನೀಗಿಸುತಿತ್ತು. ಬೇಸಗೆ ಕಾಲದ ನೀರಿನ ಶೇಖರಣೆ ಮನಗಂಡು ಅಲ್ಲಿನ ಪುನರೂರು ಫ್ರೆಂಡ್ಸ್ ತಂಡದಿಂದ ಮಣ್ಣಿನ ತಡೆಗೋಡೆ ಕಟ್ಟ ರಚಿಸಲಾಯಿತು. ಆದರೆ ಈಗ ಕಿಂಡಿ ಆಣೆಕಟ್ಟು ಶಿಥಿಲಗೊಂಡಿದ್ದು ನೀರಿನ ಸಮಸ್ಯೆಗೆ ತಲೆದೋರುವ ಬಗ್ಗೆ ಸ್ಥಳೀಯರು ಚಿಂತಿಸುವಂತಾಗಿದೆ. ಈ ಪ್ರದೇಶವು ತೀರಾ ಗ್ರಾಮೀಣ ಪ್ರದೇಶವಾಗಿದ್ದು ಸರಿಯಾದ ರಸ್ತೆಯೂ ಇಲ್ಲ ಕೇವಲ ಮಣ್ಣಿನ ರಸ್ತೆಗಳು ಇದ್ದು ಬೇಸಗೆಯದಲ್ಲಿ ಮಾತ್ರ ಸಂಚಾರಕ್ಕೆ ಮತ್ತೆ ಮಳೆಗಾಲದಲ್ಲಿ ರಸ್ತೆ ಇರುವುದಿಲ್ಲ. ನೀರು ಹಾದು ಹೋಗುವ ಕಾಲುವೆಯಂತೆ ಆಗುತ್ತೆ, ಇಲ್ಲಿನ ಪರಿಸರದಲ್ಲಿ ನಳ್ಳಿ ನೀರಿನ ವ್ಯವಸ್ಥೆಯಾಗಿಲ್ಲ . ಅದನ್ನು ಮನಗಂಡು ಇಲ್ಲಿನ ಯುವ ಸಂಘಟನೆ ಮನಗಂಡು ಕೃಷಿಗೆ ಹಾಗೂ ಕುಡಿಯುವ ನೀರಿಗೆ ಪೂರಕವಾಗಲಿ ಎಂಬತೆ ಅಲ್ಲಿ ಹರಿಯು ಚಿಕ್ಕ ತೋರೆಗೆ ಆಣೆಕಟ್ಟು ಕಟ್ಟಿ ನೀರು ಉಳಿಸುವ ಯತ್ನ ಮಾಡಿದ್ದಾರೆ.
Related Articles
ಕಿನ್ನಿಗೋಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿನ್ನಿಗೋಳಿ ತಾಳಿಪಾಡಿ ಮೂಲಕ ಹರಿಯವ ಚಿಕ್ಕ ಕಾಲುವೆಗೆ ಸುಮಾರು 4 ಕಿಂಡಿ ಆಣೆಕಟ್ಟುಗಳು ಕೆಲವು ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆದರೇ ನಿರ್ವಹಣೆಯ ಕೊರತೆಯೂ ಅಲ್ಲ, ಕಳಪೆ ಕಾಮಗಾರಿಯೂ ಎಂಬತೆ ನೆನೆಗುದಿಗೆ ಬಿದ್ದದೆ.
Advertisement
ಪರಿಶೀಲಿಸಿ ಕ್ರಮಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎನ್‌ಆರ್‌ಇಜಿ ಯೋಜನೆಯಲ್ಲಿ ಅದ್ಯತೆಯ ಮೇರೆಗೆ ಮೂರು ಕಿಂಡಿ ಆಣೆಕಟ್ಟುಗಳು ಕಳೆದ ಎರಡು ವರ್ಷದಲ್ಲಿ ನಿರ್ಮಾಣವಾಗಿದೆ. ಪುನರೂರು ಕಿಂಡಿ ಅಣೆಕಟ್ಟುವಿನ ಬಗ್ಗೆ ಪರಿಶೀಲನೆ ನಡೆಸಿ ವ್ಯವಸ್ಥೆ ಮಾಡಲಾಗುವುದು.
– ಅರುಣ್ ಪ್ರದೀಪ್ ಡಿ’ಸೋಜಾ, ಪಿಡಿಒ,ಕಿನ್ನಿಗೋಳಿ ಗ್ರಾಮ ಪಂಚಾಯತ್ ಇಚ್ಛಾಶಕ್ತಿಯ ಕೊರತೆ
ಗ್ರಾಮ ಪಂಚಾಯತ್ ಇಲ್ಲಿನ ಪ್ರದೇಶದ ಬಗ್ಗೆ ಕೊಡುತ್ತಿಲ್ಲ, ಮೂರು ವರ್ಷದಿಂದ ಕಿಂಡಿ ಆಣೆಕಟ್ಟು ದುರಸ್ತಿ ಬಗ್ಗೆ ತಿಳಿಸಲಾಗಿದೆ. ಆದರೇ ಈ ಬಗ್ಗೆ ಪಂಚಾಯತ್ ಆಡಳಿತ ಗಮನ ಹರಿಸಿಲ್ಲ, ಇಚ್ಛಾ ಶಕ್ತಿಯ ಕೊರತೆಯಿಂದ ಈ ಭಾಗದ ಅಭಿವೃದ್ಧಿಗೆ ಕುಂಠಿತವಾಗಿದೆ.
- ಸಂತೋಷ್ ಶೆಟ್ಟಿ , ಸ್ಥಳೀಯ -ರಘುನಾಥ್ ಕಾಮತ್ ಕೆಂಚನಕೆರೆ