Advertisement
ಸುಳ್ಯ ತಾ|ನ ಕೊಲ್ಲಮೊಗ್ರುವಿನ ಬಂಗ್ಲೆಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಟ್ಟಡ ಸಮಸ್ಯೆ ಹಾಗೂ ಶಿಕ್ಷಕರ ಕೊರತೆ ಎದುರಾಗಿದ್ದು, ಇಲ್ಲಿನ ಸಮಸ್ಯೆ ಬಗ್ಗೆ ಸಂಬಂಧಿಸಿದವರ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ವಿವಿಧ ಸವಾಲುಗಳ ಮಧ್ಯೆ ಅಭಿವೃದ್ಧಿ ಹೊಂದುತ್ತಿರುವ ಕೊಲ್ಲಮೊಗ್ರುವಿನ ಬಂಗ್ಲೆ ಗುಡ್ಡೆ ಸರಕಾರಿ ಶಾಲೆಗೆ ಅಭಿವೃದ್ಧಿ ಭಾಗ್ಯ ಮಾತ್ರ ಇಂದಿಗೂ ಲಭಿಸಿಲ್ಲ. ಇಲ್ಲಿನ ಬಂಗ್ಲೆ ಗುಡ್ಡೆ ಶಾಲೆಗೆ ಸುಮಾರು 70 ವರ್ಷಗಳಾ ಗಿದ್ದು, ಇಲ್ಲಿ 1ನೇ ತರಗತಿಯಿಂದ 7ನೇ ತರಗತಿ ವರೆಗೆ ಶಿಕ್ಷಣ ನೀಡಲಾಗುತ್ತಿದೆ. ಸರಕಾರಿ ಶಾಲೆಗಳಲ್ಲಿ ಹಿಂದೆ ಮಕ್ಕಳ ಸಂಖ್ಯೆ ಹೆಚ್ಚಿದ್ದ ಸಮಯದಲ್ಲಿ ಇಲ್ಲೂ ಮಕ್ಕಳ ಸಂಖ್ಯೆ ಹೆಚ್ಚಿತ್ತು. ಬಳಿಕ ಮಕ್ಕಳ ಸಂಖ್ಯೆ ಕುಸಿಯತೊಡಗಿ ಒಮ್ಮೆ 40ಕ್ಕೆ ಇಳಿದಿತ್ತು. ಬಳಿಕ ಶಾಲೆ, ಎಸ್‌ಡಿಎಂಸಿ, ಪೋಷಕರ ಪ್ರಯತ್ನದಿಂದ ಮಕ್ಕಳ ಸಂಖ್ಯೆ ಹೆಚ್ಚಳಗೊಂಡಿದ್ದು, ಇದೀಗ 1ರಿಂದ 7ನೇ ತರಗತಿ ವರೆಗೆ 115 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ನಲಿ-ಕಲಿ ವಿಭಾಗದಲ್ಲೇ 50ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ.
Related Articles
70 ವರ್ಷಗಳ ಹಿಂದೆ ನಿರ್ಮಾಣ ಗೊಂಡ ಶಾಲಾ ಕಟ್ಟಡದಲ್ಲೇ 4 ರಿಂದ 7ನೇ ತರಗತಿಗಳು ನಡೆಯುತ್ತಿದೆ. ಸುಣ್ಣ-ಬಣ್ಣ ಬಳಿದು ಹೊಸತರಂತೆ ಕಟ್ಟಡವನ್ನು ಅಂದಗೊಳಿಸಿದರೂ ಕಟ್ಟಡ ಶಿಥಿಲಾವಸ್ಥೆ ತಲುಪಿದೆ. ಗೋಡೆ, ಮೇಲ್ಛಾವಣಿ, ಪೀಠೊಪಕರಣ ಶಿಥಿಲಗೊಂಡಿದೆ ಎನ್ನು ತ್ತಾರೆ ಪೋಷಕರು. ಇಲ್ಲಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಲಾದ ನಲಿ -ಕಲಿ ಕಟ್ಟಡವೂ ಶಿಥಿಲಾವಸ್ಥೆ ತಲುಪಿದ್ದು, ಮಳೆ ನೀರು ಸೋರುತ್ತಿದೆ. ಮುಂಜಾಗ್ರತೆ ದೃಷ್ಟಿಯಿಂದ ಪೋಷಕರು ಹಣ ಸಂಗ್ರ ಹಿಸಿ ಮೇಲ್ಛಾವಣಿಗೆ ಟಾರ್ಪಾಲು ಹಾಕಿಸಿ ದ್ದಾರೆ. ವಿದ್ಯುತ್ ಉಪಕರಣಗಳು ದುರಸ್ತಿ ಆಗಬೇಕಿದೆ.
Advertisement
ಶಿಕ್ಷಕರ ಕೊರತೆಕಟ್ಟಡ ಸಮಸ್ಯೆ ಜತೆಗೆ ಇಲ್ಲಿ ಶಿಕ್ಷಕರ ಕೊರತೆಯೂ ಇದೆ. ಮುಖ್ಯ ಶಿಕ್ಷಕರು ಸೇರಿದಂತೆ ಮೂವರು ಸರಕಾರಿ ಶಿಕ್ಷಕರಿ ದ್ದಾರೆ. ಒಬ್ಬರು ಅತಿಥಿ ಶಿಕ್ಷಕರಿದ್ದಾರೆ. 100ಕ್ಕೂ ಅಧಿಕ ಮಕ್ಕಳಿರುವ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಇರಬೇಕು ಎಂಬ ನಿಯಮವಿದ್ದರೂ ದೈಹಿಕ ಶಿಕ್ಷಣ ಶಿಕ್ಷಕರ ನೇಮಕ ಈವರೆಗೆ ಆಗಿಲ್ಲ. ಕಳೆದ ವರ್ಷ ಪೋಷಕರೇ ಹಣ ಸಂಗ್ರಹಿಸಿ ನಾಲ್ವರು ಶಿಕ್ಷಕರನ್ನು ನೇಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಿದ್ದರು. ಅನುದಾನ ಬಂದಿಲ್ಲ
ನಲಿ-ಕಲಿ ವಿಭಾಗದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಹಾಗೂ ಈಗಿರುವ ನಲಿ-ಕಲಿ ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವುದರಿಂದ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. ಆದರೆ ಸರಕಾರದಿಂದ ಅನುದಾನವೇ ಬಂದಿಲ್ಲ. ದಾನಿಗಳು, ಪೋಷಕರಿಂದ ಸಂಗ್ರಹಿಸಿದ 12 ಲಕ್ಷ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎನ್ನುತ್ತಾರೆ ಎಸ್‌ಡಿಎಂಸಿ ಅಧ್ಯಕ್ಷರು. ಈ ಮೊದಲು ರಂಗ ಮಂದಿರ ನಿರ್ಮಾಣದ ವೇಳೆಯೂ ಸರಕಾರದಿಂದ 3.95 ಲಕ್ಷ ರೂ. ಅನುದಾನ ಮಾತ್ರ ಬಂದಿತ್ತು. ಶಾಲೆಯವರ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಶಾಲೆಯ ಅಭಿವೃದ್ಧಿಗೆ ಸರಕಾರ ಅನುದಾನ ಒದಗಿಸಿ ಅಭಿ ವೃದ್ಧಿಗೆ ಸ್ಪಂದಿಸಲಿ ಹಾಗೂ ಹೆಚ್ಚುವರಿ ಶಿಕ್ಷಕರನ್ನು ನೇಮಿಸಲು ಕ್ರಮ ಕೈಗೊ ಳ್ಳುವಂತೆ ಪೋಷಕರು ಆಗ್ರಹಿಸಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಲಿ
ಬಂಗ್ಲೆಗುಡ್ಡೆ ಶಾಲೆಯ ಕಟ್ಟಡ ಶಿಥಿಲಗೊಂಡಿದ್ದು, ಹೊಸ ಕಟ್ಟ ಡದ ಆವಶ್ಯಕತೆ ಇದೆ. ಇಲ್ಲಿಗೆ ಇನ್ನೂ ಮೂವರು ಶಿಕ್ಷಕರ ಅಗತ್ಯ ವಿದ್ದು, ಇವುಗಳ ಬಗ್ಗೆ ಇಲಾಖೆ ಕೂಡಲೇ ಕ್ರಮಕೈಗೊಳ್ಳಲಿ.
-ಬಾಲಸುಬ್ರಹ್ಮಣ್ಯ ಕೊಲ್ಲಮೊಗ್ರು,
ಎಸ್‌ಡಿಎಂಸಿ ಅಧ್ಯಕ್ಷರು -ದಯಾನಂದ ಕಲ್ನಾರ್