Advertisement

ದಿಲ್ ಪಸಂದ್ ನಿಂದ ಬಂತು ‘ರಾಮ ರಾಮ..’ ಹಾಡು

05:05 PM Oct 17, 2022 | Team Udayavani |

ಡಾರ್ಲಿಂಗ್‌ ಕೃಷ್ಣ ನಟನೆಯ “ದಿಲ್‌ ಪಸಂದ್‌’ ಚಿತ್ರ ನ.11ರಂದು ತೆರೆಕಾಣುತ್ತಿದೆ. ಈಗಾಗಲೇ ಪೋಸ್ಟರ್‌, ಟೀಸರ್‌ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈಗಾಗಲೇ ತಮ್ಮ ಗಾಯನದ ಮೂಲಕ ಮನೆಮಾತಾಗಿರುವ ಗಾಯಕಿ ಮಂಗ್ಲಿ ಹಾಡಿರುವ “ರಾಮ ರಾಮ…’ ಎಂಬ ಹಾಡು ಬಿಡುಗಡೆಯಾಗಿ ಹಿಟ್‌ಲಿಸ್ಟ್‌ ಸೇರಿದೆ. ಈ ಹಾಡನ್ನು ಚೇತನ್‌ ಕುಮಾರ್‌ ಬರೆದಿದ್ದು, ಅರ್ಜುನ್‌ ಜನ್ಯಾ ಸಂಗೀತವಿದೆ. ಆನಂದ್‌ ಆಡಿಯೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಈ ಹಾಡನ್ನು ಹರಿಬಿಡಲಾಗಿದೆ.

Advertisement

ಈ ಹಾಡಿನಲ್ಲಿ ನಾಯಕಿ ನಿಶ್ವಿ‌ಕಾ ನಾಯ್ಡು ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಲೆಯ ಮೇಲೆ ಕಿರೀಟ, ಮೂತಿಗೆ ಮೀಸೆ ಅಂಟಿಸಿಕೊಂಡು ವಿಭಿನ್ನವಾಗಿ ಕೃಷ್ಣನನ್ನು ಛೇಡಿಸುತ್ತಾ ಪ್ರೀತಿಯ ಆಹ್ವಾನ ನೀಡುವ ಹಾಡು ಇದಾಗಿದೆ.

“ನಾನು ಕಥೆ ಕೇಳಬೇಕಾದರೆ ಸಾಕಷ್ಟು ಖುಷಿ ಪಟ್ಟಿದ್ದೆ. ಸಾಕಷ್ಟು ಎಂಜಾಯ್‌ ಮಾಡಿಕೊಂಡು ಡಬ್ಬಿಂಗ್‌ ಮಾಡಿದ್ದೇನೆ. ಉತ್ತಮ ಮನೋರಂಜನೆಯಿರುವ ದಿಲ್‌ ಪಸಂದ್‌ ಎಲ್ಲರಿಗೂ ಪ್ರಿಯವಾಗಲಿದೆ. ಕಾಮಿಡಿ ಜೊತೆಗೆ ತಂದೆ-ಮಗನ ಭಾವನಾತ್ಮಕ ಸನ್ನಿವೇಶಗಳು ಜನರ ಮನಸ್ಸಿಗೆ ಹತ್ತಿರವಾಗಲಿದೆ’ ಎಂಬ ವಿಶ್ವಾಸ ನಾಯಕ ಕೃಷ್ಣ ಅವರದು.

“ನಿರ್ದೇಶಕರು ಕಥೆ ಹೇಳಿದ ರೀತಿಯಲ್ಲೇ ಸಿನಿಮಾ ಮಾಡಿಕೊಟ್ಟಿದ್ದಾರೆ. ಕೆಲವರು ಕಥೆ ಹೇಳುವುದೆ ಬೇರೆ. ಚಿತ್ರ ಮಾಡುವುದೇ ಬೇರೆ. ನಾನು ಇತ್ತೀಚೆಗೆ ಚಿತ್ರ ನೋಡಿದೆ. ಶಿವತೇಜಸ್‌ ಹೇಳಿದ ರೀತಿಯಲ್ಲೇ ಚಿತ್ರ ಮಾಡಿದ್ದಾರೆ’ ಎನ್ನುವುದು ನಿರ್ಮಾಪಕ ಸುಮಂತ್‌ ಕ್ರಾಂತಿ ಮಾತು.

ಶಿವ ತೇಜಸ್‌ ನಿರ್ದೇಶನವಿರುವ ಈ ಚಿತ್ರವನ್ನು “ರಶ್ಮಿ ಫಿಲಂಸ್‌’ ಬ್ಯಾನರ್‌ ಅಡಿಯಲ್ಲಿ ಸುಮಂತ್‌ ಕ್ರಾಂತಿ ನಿರ್ಮಿಸಿದ್ದಾರೆ. ಶೇಖರ್‌ ಚಂದ್ರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next