ಈ ತಂಡ 6 ಆಟಗಾರರನ್ನು ಒಳ ಗೊಂಡಿದೆ. ಸುಮಿತ್ ನಾಗಲ್, ಶಶಿ ಕುಮಾರ್ ಮುಕುಂದ್, ಯುಕಿ ಭಾಂಬ್ರಿ, ರಾಮ್‌ಕುಮಾರ್ ರಾಮನಾಥನ್ ಮತ್ತು ರೋಹನ್ ಬೋಪಣ್ಣ ಉಳಿದ ಆಟಗಾರರು. ರೋಹಿತ್ ರಾಜ್‌ಪಾಲ್ ಈ ತಂಡದ ಆಡದ ನಾಯಕರಾಗಿದ್ದಾರೆ.
Advertisement
ವರ್ಲ್ಡ್ ಗ್ರೂಪ್ ಪ್ಲೇ-ಆಫ್ ಸುತ್ತಿನಲ್ಲಿ ಡೆನ್ಮಾರ್ಕ್‌ಗೆ ಶರಣಾದ ಬಳಿಕ ಭಾರತ ವಿಶ್ವ ಗ್ರೂಪ್ 2ಕ್ಕೆ ಇಳಿದಿದೆ. ಪಂದ್ಯಾವಳಿ ಸೆ. 16 ಮತ್ತು 17ರಂದು ಲಕ್ನೋದಲ್ಲಿ ನಡೆಯಲಿದೆ.
ಇದು ದೇಶದ ಅಗ್ರಮಾನ್ಯ ಡಬಲ್ಸ್ ಆಟಗಾರ, ಕರ್ನಾಟಕದ ರೋಹನ್ ಬೋಪಣ್ಣ ಪಾಲಿಗೆ ವಿದಾಯ ಸರಣಿಯೂ ಆಗಿದೆ. ತಾನು ಡೇವಿಸ್ ಕಪ್ ಪಂದ್ಯಾವಳಿಗೆ ವಿದಾಯ ಹೇಳುವುದಾಗಿ ಬೋಪಣ್ಣ ಕಳೆದ ತಿಂಗಳು ಘೋಷಿಸಿದ್ದರು.