Advertisement
ಗ್ರಾಮಾಂತರ ಭಾಗದಲ್ಲಿ ನೀರಿನ ಬಿಲ್ ಅನ್ನು ಕೈಯಲ್ಲಿ ಬರೆದು ರಸೀದಿ ಮಾದರಿಯಲ್ಲಿ ನೀಡಲಾಗುತ್ತಿದೆ. ಇದರಿಂದಾಗಿ ಪಂಚಾಯತ್ ಮಟ್ಟದಲ್ಲಿ ನೀರಿನ ಸರಬರಾಜು ಮತ್ತು ನಿರ್ವಹಣೆ ಸರಿಯಾಗಿ ಆದರೂ ಕೂಡ, ಮಾಪನವನ್ನು ಸುಲಭವಾಗಿಸಲು ಯಾವುದೇ ನಿಖರ ತಂತ್ರಾಂಶವಿರಲಿಲ್ಲ.
Related Articles
ನೀರಿನ ಬಿಲ್-ಘನತ್ಯಾಜ್ಯ ಸುಂಕ ವಸೂಲಾತಿಯನ್ನು ಡಿಜಿಟಲೀಕರಣ ಮಾಡಬೇಕಾದರೆ ಒಂದೊಂದು ಗ್ರಾಮ ಪಂಚಾಯತ್‌ಗೆ ಸಿಂಪ್ಯೂಟರ್ ಸೇರಿದಂತೆ ಇತರ ಪರಿಕರಗಳು ಬೇಕು. ಇದಕ್ಕೆ ಸುಮಾರು 45,000 ರೂ. ವೆಚ್ಚವಾಗುತ್ತದೆ.
Advertisement
ಒಂದು ಗ್ರಾಮ ಪಂಚಾಯತ್‌ಗೆ ಇಂತಹ ಕನಿಷ್ಠ 3 ಸಿಂಪ್ಯೂಟರ್‌ಗಳ ಅಗತ್ಯವಿದೆ. ಆದರೆ ಗ್ರಾಮ ಪಂಚಾಯತ್‌ಗಳಿಗೆ ಇದನ್ನು ಭರಿಸುವಷ್ಟು ಅನುದಾನವಿಲ್ಲದ ಕಾರಣದಿಂದ ಇಷ್ಟು ಮೊತ್ತವನ್ನು ಸಿಂಪ್ಯೂಟರ್‌ಗಳಿಗೆ ನೀಡಲು ಗ್ರಾ.ಪಂ. ಮನಸ್ಸು ಮಾಡುತ್ತಿಲ್ಲ. ಜತೆಗೆ ಗ್ರಾಮೀಣ ಭಾಗದಲ್ಲಿ ಪಂಪ್ ಆಪರೇಟರ್‌ಗಳು ವಿದ್ಯಾಭ್ಯಾಸ ಇಲ್ಲದೆ ಅಥವಾ ವಯಸ್ಸಾದವರು ಇರುವುದರಿಂದ ಅದರ ನಿರ್ವಹಣೆ ಕೂಡ ಕಷ್ಟ ಎಂದು ನಿರಾಕರಿಸುತ್ತಿದ್ದಾರೆ.
ಜತೆಗೆ, ಗ್ರಾಮೀಣ ಭಾಗದಲ್ಲಿ ಇಂಟರ್‌ನೆಟ್ ಸಮಸ್ಯೆ ಇರುವುದರಿಂದ ಸಿಂಪ್ಯೂಟರ್‌ನಿಂದ ಕಂಪ್ಯೂಟರ್‌ಗೆ ಕಳುಹಿಸುವ ಹಂತದಲ್ಲಿಯೂ ಸಮಸ್ಯೆ ಎದುರಾಗುತ್ತಿದೆ ಎಂಬ ಭಾವನೆಯಿದೆ. ಇನ್ನೂ ಕೆಲವೆಡೆ ಪಂಚಾಯತ್ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಹೆಚ್ಚು ಆಸಕ್ತಿ ತೋರದ ಕಾರಣದಿಂದ ಡಿಜಿಟಲ್ ವ್ಯವಸ್ಥೆ ಪೂರ್ಣಮಟ್ಟದಲ್ಲಿ ಅನುಷ್ಠಾನಕ್ಕೆ ಬಂದಿಲ್ಲ.
“ಸರಕಾರದ ಅಭಿಪ್ರಾಯ ಪಡೆದು ಕ್ರಮ’ಸರಕಾರದ ವತಿಯಿಂದಲೇ ಎಲ್ಲಾ ಗ್ರಾ.ಪಂಗಳಲ್ಲಿ ಗಣಕೀಕೃತ ನೀರಿನ ಮಾಪನ ಹಾಗೂ ಬಿಲ್ ವಿತರಿಸುವ ಯೋಜನೆ ಪ್ರಾರಂಭಿಸುವ ಬಗ್ಗೆ ತಿಳಿಸಿತ್ತು. ಬಳಿಕ ಜಿಲ್ಲಾ ಪಂಚಾಯತ್ ಮುಖೇನ ಕೆಲವು ಗ್ರಾ.ಪಂ.ನಲ್ಲಿ ಈ ಯೋಜನೆ ಜಾರಿಗೆ ತರಲಾಗಿತ್ತು. ಇದೀಗ ಸರಕಾರದಿಂದ ಅಭಿಪ್ರಾಯ ಪಡೆದು ಮುಂದಿನ ಹಂತದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು.
– ಡಾ| ಸೆಲ್ವಮಣಿ, ದ.ಕ. ಜಿ.ಪಂ ಸಿಇಒ