Advertisement
– ಡಿಜಿಟಲ್ ತಂತ್ರಜ್ಞಾನ ಸ್ಪರ್ಶದಿಂದ ಇಂತಹ ಹತ್ತು ಹಲವು ಐತಿಹಾಸಿಕ ಮತ್ತು ಪಾರಂಪರಿಕ ತಾಣಗಳ ಮರುಸೃಷ್ಟಿಗೆ ತಂಡವೊಂದು ಮುಂದಾಗಿದೆ. ಶೀಘ್ರದಲ್ಲೇ ನಗರದ ಹೊರವಲಯದಲ್ಲಿರುವ ನಂದಿಬೆಟ್ಟದಲ್ಲಿ ಈ ತಾಣಗಳ ಯಥಾವತ್ ಅನುಭವ (ವರ್ಚುವಲ್ ರಿಯಾಲಿಟಿ) ನೀಡುವ ಮೆಟಾವರ್ಸ್ ಕೂಡ ತಲೆಯೆತ್ತಲಿದೆ.ಹೌದು, ಸಾಫ್ಟ್ವೇರ್ ಎಂಜಿನಿಯರ್‌ಗಳು, ಇತಿಹಾಸ ತಜ್ಞರು, ದೇವಾಲಯಗಳ ವಾಸ್ತುಶಿಲ್ಪಿಗಳು ಒಂದೇ ವೇದಿಕೆಯಲ್ಲಿ ಬಂದು “ಹು ವಿಆರ್’ ಎಂಬ ಕಂಪೆನಿಯ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ಗತಕಾಲದ ದೇವಾಲಯಗಳು, ಪಾರಂಪರಿಕ ತಾಣಗಳನ್ನು ಡಿಜಿಟಲ್ ತಂತ್ರಜ್ಞಾನದಿಂದ ಯಥಾವತ್ತಾಗಿ ಮರುಸೃಷ್ಟಿಸಿ ಈಗಿನ ಪೀಳಿಗೆಗೆ ಪರಿಚಯಿಸುತ್ತಿದ್ದಾರೆ. ಇಂಥ ಪ್ರಯತ್ನ ದೇಶದಲ್ಲಿ ಇದೇ ಮೊದಲುಎನ್ನಲಾಗಿದೆ. ದೇಶದಲ್ಲಿ ಸಾವಿರಾರು ದೇವಾಲಯಗಳು, ಪಾರಂಪರಿಕ ತಾಣಗಳಿವೆ.
ಈಚೆಗೆ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ಅನಾವರಣಗೊಂಡ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆ, ಆಂಧ್ರಪ್ರದೇಶದ 175 ದೇವಾಲಯಗಳು, ಹಂಪಿಯ ಮರುಸೃಷ್ಟಿ ಯೋಜನೆಗಳಿಗೆ ಸಂಬಂ ಧಿಸಿ ಸರಕಾರಗಳೊಂದಿಗೆ ಮಾತುಕತೆ ನಡೆದಿದೆ.
Related Articles
Advertisement
ಪ್ರವಾಸೋದ್ಯಮಕ್ಕೂ ಪೂರಕಇಂಗ್ಲೆಂಡ್, ಅಮೆರಿಕ ಸರಕಾರ ಗಳೊಂದಿಗೂ ಮಾತುಕತೆ ನಡೆದಿದೆ. ಇಲ್ಲಿನ ತಾಣಗಳನ್ನು ಡಿಜಿಟಲ್ ರೂಪದಲ್ಲಿ ತಯಾರಿಸಿ ಆ ದೇಶಗಳಿಗೆ ಕಳುಹಿಸಲಾಗುವುದು. ಅಲ್ಲಿನ ಪ್ರತಿನಿಧಿಗಳು ಸ್ಥಳೀಯವಾಗಿ ಪ್ರಚುರಪಡಿಸುತ್ತಾರೆ. ಆಗ ಅಲ್ಲಿನ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಬಹುದು. ಹೀಗೆ ಇದು ಪ್ರವಾ ಸೋದ್ಯಮ ಬೆಳವಣಿಗೆಗೂ ಪೂರಕ ವಾಗಲಿದೆ ಎಂದು ಹೇಳಿದರು. “ಬಹುತೇಕ ಹಿರಿಯ ನಾಗರಿಕರಿಗೆ ಈ ತಾಣಗಳಿಗೆ ತೆರಳಲು ಆಗುವು ದಿಲ್ಲ. ಅಂತಹವರು ತಾವಿದ್ದಲ್ಲಿಯೇ ಅದರ ಅನುಭವವನ್ನು ಪಡೆಯ ಬಹುದು. ನಿಗದಿತ ಶುಲ್ಕ ವಿಧಿಸ ಲಾಗುವುದು’ ಎಂದು ಅಜಿತ್ ಪದ್ಮನಾಭ್ ತಿಳಿಸಿದ್ದಾರೆ. - ವಿಜಯಕುಮಾರ ಚಂದರಗಿ