Advertisement

2026ಕ್ಕೆ 775 ಲಕ್ಷ ಕೋಟಿ ಮುಟ್ಟಲಿರುವ ಡಿಜಿಟಲ್‌ ಪಾವತಿ

10:13 AM Jun 03, 2022 | Team Udayavani |

ನವದೆಹಲಿ: ದೇಶದಲ್ಲಿ ಡಿಜಿಟಲ್‌ ಪಾವತಿಗಳ ಪ್ರಮಾಣವು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಇನ್ನು ಕೆಲ ವರ್ಷಗಳಲ್ಲಿ ಈ ಪ್ರಮಾಣವು ಮೂರು ಪಟ್ಟು ಹೆಚ್ಚಳವಾಗಲಿದೆ. ನಗದು ವ್ಯವಹಾರಕ್ಕಿಂತ ಹೆಚ್ಚಿನದಾಗಿ ಡಿಜಿಟಲ್‌ ವ್ಯವಹಾರ ನಡೆಯಲಿದೆ. ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌(ಬಿಸಿಜಿ) ಮತ್ತು ಫೋನ್‌ಪೇ ಸಂಸ್ಥೆಯು ಜಂಟಿಯಾಗಿ ನಡೆಸಿದ ಸಮೀಕ್ಷೆಯಿಂದ ಈ ವರದಿ ಹೊರಬಿದ್ದಿದೆ.

Advertisement

ದೇಶದ ಎಲ್ಲ ಸಣ್ಣ ವ್ಯಾಪಾರಿಗಳೂ ಈಗ ಡಿಜಿಟಲ್‌ ಪಾವತಿಯ ಮೊರೆ ಹೋಗುತ್ತಿದ್ದಾರೆ. ಪ್ರತಿನಿತ್ಯ ಸಾವಿರಾರು ವ್ಯಾಪಾರಿಗಳು ಕ್ಯೂಆರ್‌ ಪಾವತಿಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈಗ 3 ಟ್ರಿಲಿಯನ್‌ ಡಾಲರ್‌ ವ್ಯವಹಾರ ಡಿಜಿಟಲ್‌ ವೇದಿಕೆಯಲ್ಲಿ ನಡೆಯುತ್ತಿದ್ದು, ಅದು 2026ರ ವೇಳೆಗೆ 10 ಟ್ರಿಲಿಯನ್‌ ಡಾಲರ್‌ಗೆ ಏರಿಕೆಯಾಗಲಿದೆ. ಹಾಗೆಯೇ ದೇಶದಲ್ಲಿ ಒಟ್ಟಾರೆ ವ್ಯವಹಾರದಲ್ಲಿ ಶೇ. 65 ಅಥವಾ ಮೂರರಲ್ಲಿ ನಾಲ್ಕು ವರ್ಗಾವಣೆಗಳು ಡಿಜಿಟಲ್‌ ರೂಪದಲ್ಲಿರಲಿವೆ ಎಂದು ವರದಿ ತಿಳಿಸಿದೆ.

ಈ ಪಾವತಿಯಲ್ಲಿ ಯುಪಿಐ ಪಾವತಿ ಅತಿ ದೊಡ್ಡ ಪಾತ್ರ ವಹಿಸಲಿದೆ. ಕಳೆದ ಮೂರು ವರ್ಷಗಳಲ್ಲಿ ಯುಪಿಐ ಮೂಲಕ ಹಣ ವರ್ಗಾವಣೆ ಪ್ರಮಾಣವು ಬರೋಬ್ಬರಿ 9 ಪಟ್ಟು ಹೆಚ್ಚಾಗಿದೆ. 2022ರಲ್ಲೇ 45 ಬಿಲಿಯನ್‌ ವರ್ಗಾವಣೆಗಳು ಯುಪಿಐ ಮೂಲಕ ನಡೆದಿವೆ. ಮುಂದಿನ ಐದು ವರ್ಷಗಳಲ್ಲಿ ನಡೆಯುವ ಡಿಜಿಟಲ್‌ ಪಾವತಿಗಳಲ್ಲಿ ನಾಲ್ಕನೇ ಮೂರು ಪಾಲನ್ನು ಯುಪಿಐ ತನ್ನದಾಗಿಸಿಕೊಳ್ಳಲಿದೆ ಎಂದು ಹೇಳಲಾಗಿದೆ.

ಅಂಕಿ- ಅಂಶ:

232 ಲಕ್ಷ ಕೋಟಿ ರೂ. :  

Advertisement

ದೇಶದಲ್ಲಿ ಪ್ರಸ್ತುತ ಇರುವ ಡಿಜಿಟಲ್‌ ಪಾವತಿ ಪ್ರಮಾಣ

775 ಲಕ್ಷ ಕೋಟಿ ರೂ. :

2026ರ ಹೊತ್ತಿಗೆ ಡಿಜಿಟಲ್‌ ಪಾವತಿ ಬೆಳೆಯಲಿರುವ ಮಟ್ಟ

ಶೇ. 63 :

ಮುಂದಿನ ನಾಲ್ಕು ವರ್ಷಗಳಲ್ಲಿ ಆಗುವ ಏರಿಕೆಯ ಪ್ರಮಾಣ

 

Advertisement

Udayavani is now on Telegram. Click here to join our channel and stay updated with the latest news.

Next