Advertisement
ಕೋಲ್ಕತಾದಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆಯನ್ನು ಕಲ್ಪಿಸಿದ್ದು, ನಬದಿಗಂತ ಐಟಿ ಪೋಸ್ಟ್ ಆಫೀಸ್ ಹಾಗೂ ನ್ಯೂಟೌನ್ ಶಾಖೆಯಲ್ಲಿ ಡಿಜಿಟಲ್ ಲಾಕರ್ ಸೇವೆ ಸಿಗಲಿದೆ. ಗುರುವಾರ ಸೇವೆಗೆ ಚಾಲನೆ ನೀಡಿದ ಪಶ್ಚಿಮ ಬಂಗಾಳ ವೃತ್ತದ ಪ್ರಧಾನ ಅಂಚೆ ಮುಖ್ಯಸ್ಥ ಗೌತಮ್ ಭಟ್ಟಾಚಾರ್ಯ, ಯುರೋಪಿನಲ್ಲಿ ಈ ವ್ಯವಸ್ಥೆ ಖ್ಯಾತಿ ಪಡೆದಿದೆ. ಭಾರತದಲ್ಲಿ ಪ್ರಪ್ರಥಮ ಬಾರಿಗೆ ಈ ಸೇವೆಯನ್ನು ಪರಿಚಯಿಸುತ್ತಿದ್ದು, ನೌಕರರು ಹಾಗೂ ಸಾಮಾನ್ಯ ಜನತೆಗೆ ಇದು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರಿಗೆ ಅಂಚೆ ಕಚೇರಿಯ ಡಿಜಿಟಲ್ ಲಾಕರ್‌ನ ನಿರ್ದಿಷ್ಟ ಸಂಖ್ಯೆಯನ್ನು ಕಳುಹಿಸಲಾಗುತ್ತದೆ. ಗ್ರಾಹಕರಿಗೆ ತಲುಪಬೇಕಾದ ವಸ್ತು/ಸರಕು ಡಿಜಿಟಲ್ ಲಾಕರ್‌ನಲ್ಲಿ ಇರುತ್ತದೆ. ಬಳಿಕ ಮೊಬೈಲ್‌ಗೆ ಎಸ್‌ಎಂಎಸ್ ಮೂಲಕ ಒಟಿಪಿ ನಂಬರ್ ಕಳುಹಿಸಲಾಗುತ್ತದೆ. ಆ ವಸ್ತು ಏಳು ದಿನಗಳ ಕಾಲ ಕಚೇರಿಯಲ್ಲಿರುತ್ತದೆ. ಈ ಅವಧಿಯಲ್ಲಿ ಯಾವಾಗ ಬೇಕಾದರೂ ಹೋಗಿ ಪಡೆಯಬಹುದು.