Advertisement

ಹಳ್ಳಿ ಹಳ್ಳಿಯಲ್ಲೂ ಡಿಜಿಟಲ್‌ ಸಾಕ್ಷರತೆ: ನಳಿನ್‌ ಕುಮಾರ್‌ ಕಟೀಲು

12:27 AM May 19, 2022 | Team Udayavani |

ಮಂಗಳೂರು: ಡಿಜಿಟಲ್‌ ಸಾಕ್ಷರತೆ ಅಭಿಯಾನ ಮೂಲಕ ಹಳ್ಳಿ ಹಳ್ಳಿಗಳಲ್ಲೂ ಡಿಜಿಟಲ್‌ ಕ್ರಾಂತಿ ನಡೆಸುವ ಮಹ ತ್ವದ ಉದ್ದೇಶವನ್ನು ಕೇಂದ್ರ ಸರಕಾರ ಹೊಂದಿದೆ.

Advertisement

ಪೂರಕವಾಗಿ ಜನರಲ್ಲಿ ಡಿಜಿಟಲ್‌ ವ್ಯವಹಾರಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು “ಹಳ್ಳಿ ಮಟ್ಟದ ಉದ್ಯಮಿ’ (ವಿಎಲ್‌ಇ) ಸೇವಾಕೇಂದ್ರಗಳು ಕೈ ಗೊಳ್ಳಬೇಕು ಎಂದು ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದರು.

ಪ್ರಧಾನ ಮಂತ್ರಿ ಗ್ರಾಮೀಣ ಡಿಜಿಟಲ್‌ ಸಾಕ್ಷರತಾ ಅಭಿಯಾನದಡಿ ನಗರದ ಕೆಪಿಟಿ ಕಾಲೇಜು ಸಭಾಂಗ ಣದಲ್ಲಿ ಬುಧವಾರ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ವಿಎಲ್‌ಇ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಜನತೆಯ ಬಳಿಗೆ ಸೇವಾ ಕೇಂದ್ರಗಳು ತೆರಳಬೇಕು. ಸೇವಾ ಕೇಂದ್ರಗ ಳನ್ನು ನಡೆಸಲು ಅಗತ್ಯ ತರಬೇತಿ ಆಗಬೇಕು. ಹಳ್ಳಿಯ ಪ್ರತಿಯೊಬ್ಬರೂ ಡಿಜಿಟಲ್‌ ಸಾಕ್ಷರರಾಗಬೇಕು ಎಂಬುದೇ ಪ್ರಧಾನ ಮಂತ್ರಿಗಳ ಆಶಯ. ಜನರು ಅನಕ್ಷರಸ್ಥರಾದರೂ ಮೊಬೈಲ್‌ ಬಳಸಿ ವ್ಯವಹಾರ ಮಾಡು ವಲ್ಲಿ ಅವರಿಗೆ ಮಾಹಿತಿ ನೀಡುವ ಕೆಲಸವಾಗಬೇಕು. ಡಿಜಿಟಲ್‌ ಇಂಡಿಯಾ ಪರಿಕಲ್ಪನೆಯಲ್ಲಿ ಇದನ್ನು ಕೇಂದ್ರ ಸರಕಾರ ಸಾಕಾರಗೊಳಿಸು ತ್ತಿದೆ. ಮೇಕ್‌ ಇನ್‌ ಇಂಡಿಯಾ, ಸ್ಟಾರ್ಟ್‌ಅಪ್‌, ಸ್ಟಾಂಡ್‌ ಅಪ್‌, ಆತ್ಮನಿರ್ಭರ ಭಾರತ, ವೋಕಲ್‌ ಫಾರ್‌ ಲೋಕಲ್‌, ಸ್ಕಿಲ್‌ ಇಂಡಿಯಾ, ದೀನ್‌ದಯಾಳ್‌ ಕೌಶಲಾಭಿವೃದ್ಧಿ ಕೇಂದ್ರ, ಪ್ರಧಾನ ಮಂತ್ರಿಕೌಶಲಾಭಿವೃದ್ಧಿ, ಮುದ್ರಾಸಾಲ ವಿತರಣೆ ಹೀಗೆ ಹಲವಾರು ಯೋಜನೆಗಳನ್ನು ಕಾರ್ಯಗತಗೊ ಳಿಸಿದೆ ಎಂದು ವಿವರಿಸಿದರು.

ಡಿಜಿಟಲ್‌ ಇಂಡಿಯಾ ಜಾರಿ ಗೊಳಿಸಿದ ಬಳಿಕ ಫ‌ಲಾನುಭವಿಗಳಿಗೆ ಸರಕಾರದ ಅನುದಾನ ಪಾವತಿಯಾ ಗುವಲ್ಲಿ ಸೋರಿಕೆ ತಡೆಯಲಾಗಿದೆ. ಇಲ್ಲಿ ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ಸಾಧ್ಯ ವಾದಷ್ಟು ಮೊಬೈಲ್‌ ಮೂಲಕವೇ ಆರ್ಥಿಕ ವಹಿವಾಟು ನಡೆಸಲು ಉತ್ತೇಜನ ನೀಡಲಾಗುತ್ತಿದೆ ಎಂದರು.

Advertisement

ಅಕ್ರಮಗಳಿಗೆ ಕಡಿವಾಣ
ಮಂಗಳೂರು ಉತ್ತರ ಶಾಸಕ ಡಾ| ವೈ. ಭರತ್‌ ಶೆಟ್ಟಿ ಮಾತನಾಡಿ, ಡಿಜಿಟಲ್‌ ಪಾವತಿ ಮೂಲಕ ಅಕ್ರಮ ಗಳಿಗೆ ಕಡಿವಾಣ ಬಿದ್ದಿದೆ ಎಂದರು. ಕೆಪಿಟಿ ಪ್ರಾಂಶುಪಾಲ ಹರೀಶ್‌ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಇ-ಗವರ್ನನ್ಸ್‌ ಸರ್ವಿಸಸ್‌ ಇಂಡಿಯಾ ಲಿಮಿಟೆಡ್‌ನ‌ ಜಿಲ್ಲಾ ವ್ಯವಸ್ಥಾಪಕ ನಿಧಿನ್‌ ರಾಜ್‌ ಸ್ವಾಗತಿಸಿ, ಪ್ರಸ್ತಾವನೆಗೈದರು. ಪ್ರೀತೇಶ್‌ ವಂದಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next