Advertisement
ತಾಲೂಕಿನ ಭಕ್ತರಹಳ್ಳಿಯಲ್ಲಿ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಹಲವು ಕಟ್ಟಡ, ವೃತ್ತಗಳೂ ಇವೆ. ಬ್ರಿಟಿಷರ ಬಂದೂಕಿನ ಗುಂಡಿಗೆ ಎದೆಕೊಟ್ಟು ಹುತಾತ್ಮರಾದವರ ಸ್ತೂಪವೂ ಇವೆ. ಇವೆಲ್ಲವೂ ಆಗಿನ ಬ್ರಿಟಿಷರ ವಿರುದ್ಧ ಹೋರಾಟ, ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳನ್ನು ತರುತ್ತವೆ. ಈ ಪೈಕಿ ಕೆಲವೊಂದು ಕಟ್ಟಡ ಪಾಳು ಬಿದ್ದಿದ್ದು, ಪಾಳು ಬಿದ್ದ ಕಟ್ಟಡ ಸಂರಕ್ಷಿಸಿ ಅವುಗಳಿಗೆ ಮರುಜೀವ ನೀಡುವ ಜೀರ್ಣೋದ್ಧಾರದ ಕೆಲಸ ಗ್ರಾಪಂ ನೇತೃತ್ವದಲ್ಲಿ ಜಿಪಂ, ತಾಪಂ ಹಾಗೂ ಸಂಘ- ಸಂಸ್ಥೆಗಳ ನೆರವಿನಿಂದ ನಡೆಯುತ್ತಿದೆ.
Related Articles
Advertisement
ಗ್ರಾಮದಲ್ಲಿ ಪ್ರಾಚೀನ ಕಾಲದ ಕಟ್ಟಡ ಸಂರಕ್ಷಿಸಿ ಡಿಜಿಟಲ್ ಗ್ರಂಥಾಲಯ ಮಾಡಿ ಜ್ಞಾನರ್ಜನೆ ಕೇಂದ್ರವಾಗಿ ಪರಿವರ್ತಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಸಕ್ತ ಸಾಲಿನಲ್ಲಿ ಗ್ರಾಪಂಗೆ ಪುರಸ್ಕಾರ ಬರಲಿದ್ದು, ಅದರ ಪ್ರೋತ್ಸಾಹಧನವನ್ನು ಗ್ರಂಥಾಲಯದ ಅಭಿವೃದ್ಧಿಗೆ ಬಳಸಿ ಮಾದರಿ ಗ್ರಂಥಾಲಯವನ್ನಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಓದುಗರು ಇದರ ಸದುಪಯೋಗ ಮಾಡಿಕೊಳ್ಳಬೇಕಾಗಿದೆ. –ಅಂಜನ್‌ಕುಮಾರ್, ಭಕ್ತರಹಳ್ಳಿ ಗ್ರಾಪಂ ಪಿಡಿಒ
ಪ್ರಾಚೀನ ಕಟ್ಟಡ ಸಂರಕ್ಷಣೆ ಮಾಡುವ ಕೆಲಸ ಗ್ರಾಪಂ ಮೂಲಕ ಮಾಡುತ್ತಿರುವುದು ಸಂತಸ ತಂದಿದೆ. ಗ್ರಂಥಾಲಯಕ್ಕೆ ಅಗತ್ಯ ಪುಸ್ತಕ, ಸೌಲಭ್ಯ ಒದಗಿಸಲು ಗ್ರಾಪಂ ಆಡಳಿತ ಮಂಡಳಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾರ್ಥಿಗಳಿಗೆ ಹಾಗೂ ಗ್ರಾಮಸ್ಥರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದೆ. –ಆನಂದ್ ಛಲವಾದಿ, ಭಕ್ತರಹಳ್ಳಿ ಗ್ರಾಮಸ್ಥ