Advertisement
ಯಾವುದೇ ಒಂದು ವಸ್ತುವನ್ನು ಜನರಿಗೆ ಪರಿಚಯಿಸುವ, ಅದರ ಕುರಿತು ತಿಳಿವಳಿಕೆ ನೀಡುವ, ಹೇಳಬೇಕೆಂದರೆ ಜಗತ್ತಿಗೇ ಜಾಹೀರು ಮಾಡುವ ಕ್ಷೇತ್ರ ಡಿಜಿಟಲ್ ಮಾರ್ಕೆಟಿಂಗ್.
Related Articles
Advertisement
ಸಾಮಾಜಿಕ ಜಾಲತಾಣ, ಇ-ಕಾಮರ್ಸ್, ಇ-ಮೇಲ್ ಮಾರ್ಕೆಟಿಂಗ್, ಮಾರ್ಕೆಟಿಂಗ್ ಆಟೋಮೇಷನ್, ಕಂಟೆಂಟ್ ಮ್ಯಾನೇಜ್‌ಮೆಂಟ್ ಆಂಡ್ ಕ್ಯುರೇಷನ್, ವೆಬ್ ಡಿಸೈನ್ ಮತ್ತು ಡೆವಲೆಪ್‌ಮೆಂಟ್, ಕಾಪಿರೈಟಿಂಗ್ ಮತ್ತು ಎಡಿಟಿಂಗ್, ಅನಾಲಿಟಿಕ್ಸ್ ಹಾಗೂ ಮಾರ್ಕೆಟಿಂಗ್ ಸ್ಟ್ರಾಟೆಜಿ ಇವೆಲ್ಲವೂ ಡಿಜಿಟಲ್ ಮಾರ್ಕೆಟಿಂಗ್‌ನ ಒಂದು ಬಾಗವೇ ಆಗಿದೆ. ಉದ್ಯಮಪತಿಯಾಗಬೇಕೆನ್ನುವ ಸೃಜನಶೀಲರಿಗೆ ಅತ್ಯಂತ ಸೂಕ್ತವಾದ ಕ್ಷೇತ್ರಗಳಿವು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ನ ಅಭಿವೃದ್ಧಿಯೊಂದಿಗೆ ಈ ಕ್ಷೇತ್ರ ಹೆಚ್ಚಿನ ಪ್ರಗತಿಯನ್ನು ಸಾಧಿಸಲಿದೆ.
ಯಾರು ಆಯ್ಕೆ ಮಾಡಿಕೊಳ್ಳಬಹುದು?: ಡಿಜಿಟಲ್ ಮಾರ್ಕೆಟಿಂಗ್ ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಮುಕ್ತಕ್ಷೇತ್ರ. ಆದುದರಿಂದ ಇಲ್ಲಿ ಟೆಕ್ಕಿಗಳಿಗೆ, ಸೃಜನಶೀಲರಿಗೆ ಮತ್ತು ಉದ್ಯಮಿಗಳಿಗೆ ವಿಪುಲವಾದ ಅವಕಾಶವಿದೆ. ಅಭ್ಯರ್ಥಿ ತನ್ನ ಆಸಕ್ತಿಯನುಸಾರ ಉಪವಿಭಾಗವನನ್ನು ಆರಿಸಿಕೊಂಡು ಆ ಕ್ಷೇತ್ರದಲ್ಲಿ ಪರಿಣತಿ ಸಾಧಿಸಿ ನಂತರ ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿಯೇ ಬೇರೆ ಉಪವಿಭಾಗಗಳಲ್ಲಿ ಕೆಲಸ ನಿರ್ವಹಿಸಬಹುದು.
ಇದರಿಂದ ಈ ಕ್ಷೇತ್ರದ ಒಳ- ಹೊರಗು ತಿಳಿಯುತ್ತದೆ. ವೃತ್ತಿಯಲ್ಲಿ ಇನ್ನೂ ಮೇಲಕ್ಕೇರುವುದು ಇದರಿಂದ ಸಾಧ್ಯ. ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ, ಸೃಜನಶೀಲತೆ, ನಾಯಕತ್ವದ ಗುಣ, ಹೊಂದಿಕೊಳ್ಳುವ ಸ್ವಭಾವ, ವ್ಯಾವಹಾರಿಕ ಜಾnನ, ಇವು ಕ್ಷೇತ್ರ ಅಭ್ಯರ್ಥಿಯಿಯಿಂದ ಬಯಸುವ ಅಂಶಗಳು.
ತರಬೇತಿ: ನಿಮಗೆ ಈಗಾಗಲೇ ಮಾರ್ಕೆಟಿಂಗ್ ಮ್ಯಾನೇಜ್‌ಮೆಂಟ್ ತರಬೇತಿಯಾಗಿದ್ದರೆ, ಕಾಪಿರೈಟಿಂಗ್, ವೆಬ್‌ಡಿಸೈನ್, ವೆಬ್ ಡೆವಲೆಪ್‌ಮೆಂಟ್ ತರಬೇತಿಯಾಗಿದ್ದರೆ, ನೀವು ಹೆಚ್ಚಾ ಕಡಿಮೆ ಈ ಕ್ಷೇತ್ರಕ್ಕೆ ಸಿದ್ಧರಾದಂತೆಯೇ. ನಿಮ್ಮ ಈ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್‌ನ ಅಂಶಗಳಿಗೆ ಹೊಂದಿಸಬೇಕು ಅಷ್ಟೇ! ನಿಮ್ಮದೇ ಬ್ಲಾಗ್ ಪ್ರಾರಂಭಿಸಿ, ಫೇಸ್‌ಬುಕ್ ಗ್ರೂಪ್‌ಗ್ಳ ಜೊತೆ ಸಂಪರ್ಕದಿಂದಿರಬೇಕು.
ಡಿಜಿಟಲ್ ಮಾರ್ಕೆಟಿಂಗ್ ಕುರಿತು ತರಬೇತಿ ನೀಡುವ ಹಲವಾರು ಸಂಸ್ಥೆಗಳೂ ಸಿಗುತ್ತವೆ. ಅಲ್ಲಿಗೆ ಸೇರುವ ಮುನ್ನ ಸಂಸ್ಥೆಯ ವಿಶ್ವಾಸಾರ್ಹತೆಯನ್ನು ಪರೀಕ್ಷಿಸತಕ್ಕದ್ದು. ಹೆಸರಿರುವ ಸಂಸ್ಥೆಗಳಿಂದ ಪಡೆದುಕೊಂಡ ತರಬೇತಿ ಪತ್ರ, ಡಿಪ್ಲೊಮಾ ಸರ್ಟಿಫಿಕೇಟ್‌ಗಳು ನಿಮ್ಮ ಅವಕಾಶದ ಬಲವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಪ್ರಯತ್ನ ಆರಂಭಿಸಿ. ಗುಡ್ ಲಕ್!
* ರಘು ವಿ., ಪ್ರಾಂಶುಪಾಲರು