Advertisement
ಈ ಬಜೆಟ್ ಅಧಿವೇಶನದಲ್ಲೇ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಆರ್‌ಬಿಐ ವತಿಯಿಂದಲೇ ಕ್ರಿಪ್ಟೋ ಕರೆನ್ಸಿ ಜಾರಿಯಾದರೆ ಖಾಸಗಿ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಕಾರ್ಯಾಚರಿಸುವಂತಿಲ್ಲ. 2018ರಲ್ಲಿ ಆರ್‌ಬಿಐ ಕ್ರಿಪ್ಟೋ ಕರೆನ್ಸಿಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. 2020ರಲ್ಲಿ ಸು. ಕೋರ್ಟ್, ಆರ್‌ಬಿಐ ನಿರ್ಧಾರವನ್ನು ತೆಗೆದುಹಾಕಿತ್ತು.
ಇದು ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ರೂಪದಲ್ಲಿ ಮಾತ್ರ ಇರುತ್ತದೆ. ಇದನ್ನು ಎಲೆಕ್ಟ್ರಾನಿಕ್ ಮನಿ, ಎಲೆಕ್ಟ್ರಾನಿಕ್ ಕರೆನ್ಸಿ ಅಥವಾ ಸೈಬರ್ ಕ್ಯಾಶ್ ಎಂದೂ ಕರೆಯಲಾಗುತ್ತದೆ. ಇದನ್ನು ಕೇವಲ ಕಂಪ್ಯೂಟರ್ ಅಥವಾ ಮೊಬೈಲ್ ಮೂಲಕ ವಸ್ತು ಖರೀದಿಸಲು, ಸೇವೆಗಳಿಗೆ ಹಣ ಪಾವತಿ ಮಾಡಲು ಬಳಕೆ ಮಾಡಬಹುದು. ಗೇಮಿಂಗ್ ಸೈಟ್‌ಗಳು, ಜೂಜು ವೆಬ್‌ಸೈಟ್ಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿನ ಖರೀದಿಗೂ ಬಳಸಬಹುದು.