Advertisement
ಏನಿದು ಬಿ ಬುಕ್?ಪಿ.ಡಿ.ಎಫ್, ಟೆಕ್ಸ್ಟ್, ಇ- ಪಬ್ ಮಾದರಿಯ ಫೈಲ್‌ಗಳನ್ನು ಪೆನ್‌ಡ್ರೈವ್ ಮೂಲಕ ಈ ಬಿ- ಬುಕ್ ಉಪಕರಣಕ್ಕೆ ಸಿಕ್ಕಿಸಿದರೆ ಅದು ಅಕ್ಷರಗಳನ್ನು ಗುರುತು ಹಿಡಿದು, ಅವನ್ನು ಬ್ರೈಲ್ ಸಂಕೇತದಲ್ಲಿ ವ್ಯಕ್ತಪಡಿಸುತ್ತದೆ. ಈ ಉಪಕರಣ, ಬ್ರೈಲ್ ಸಂಕೇತವನ್ನು 6 ಪಿನ್‌ಗಳ ಮೂಲಕ ವ್ಯಕ್ತಪಡಿಸುತ್ತದೆ. ಪಿನ್ ಎಂದರೆ ಬಟನ್‌ನಂತೆ ಕಾರ್ಯ ನಿರ್ವಹಿಸುವ ಸ್ವಿಚ್ ಎಂದುಕೊಳ್ಳಬಹುದು. ಆದರೆ ಅದನ್ನು ಒತ್ತಲಾಗುವುದಿಲ್ಲ. ಅದನ್ನು ಯಂತ್ರವೇ ನಿಯಂತ್ರಿಸುತ್ತದೆ. 6 ಬಟನ್‌ಗಳಲ್ಲಿ ಆನ್ ಮತ್ತು ಆಫ್ ಎಂಬ ಎರಡು ಸ್ಥಿತಿಗಳಿರುತ್ತವೆ. ಪಿನ್ ಮೇಲಕ್ಕೆ ಎದ್ದಿದ್ದರೆ ಆಫ್ ಎಂದುಕೊಳ್ಳಬಹುದು, ಕೆಳಕ್ಕೆ ಹೋಗಿದ್ದರೆ ಆನ್ ಎಂದುಕೊಳ್ಳಬಹುದು. ಅಂಧರು ಈ ಪಿನ್‌ಗಳ ಮೇಲೆ ಬೆರಳಾಡಿಸುವ ಮೂಲಕ ಯಾವೆಲ್ಲ ಪಿನ್ ಆನ್ ಅಥವಾ ಆಫ್ ಆಗಿವೆ ಎಂಬುದನ್ನು ಕಂಡುಹಿಡಿದು ಅಕ್ಷರಗಳ ಗುರುತು ಹಿಡಿಯುತ್ತಾರೆ. ಆ ಮೂಲಕ ಅಂಧರು, ಕಾದಂಬರಿ ಪುಸ್ತಕ, ಇಂಟರ್‌ನೆಟ್‌ನ ಅಂಕಣಗಳನ್ನು ಪಿಡಿಎಫ್, ಟೆಕ್ಸ್ಟ್ ಅಥವಾ ಇ ಪಬ್ ಫಾಮ್ಯಾಟ್‌ಗೆ ಕನ್ವರ್ಟ್ ಮಾಡಿಕೊಂಡರೆ ಪೆನ್‌ಡ್ರೈವ್ ಮೂಲಕ ಬಿ-ಬುಕ್‌ಗೆ ಅಳವಡಿಸಿ ಅದನ್ನು ಬ್ರೈಲ್ ರೂಪದಲ್ಲಿ ಓದಬಹುದಾಗಿದೆ.
ಈ ಯಂತ್ರವನ್ನು ಆಭಿವೃದ್ಧಿಪಡಿಸುವ ಮುನ್ನ ವಿದ್ಯಾರ್ಥಿಗಳು ಅಂಧರ ಶಾಲೆಗೆ ಭೇಟಿ ನೀಡಿ, ಶಿಕ್ಷಕ ವೃಂದ ಹಾಗೂ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿ ಅವರ ಅಗತ್ಯತೆಗಳನ್ನು ಮನಗಂಡಿದ್ದಾರೆ. ಈ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುವ ಇರಾದೆಯೂ ಈ ವಿದ್ಯಾರ್ಥಿಗಳಿಗಿದೆ.