Advertisement

ಕಾಂಕ್ರಿಟ್‌ ರಸ್ತೆ ಅಗೆಯಲು ಗುರುತು: ಸಾರ್ವಜನಿಕರ ಅಸಮಾಧಾನ

10:28 PM Feb 19, 2020 | Sriram |

ಮಡಿಕೇರಿ: ಒಳಚರಂಡಿ ವ್ಯವಸ್ಥೆ ಮೂಲಕ ಮಡಿಕೇರಿ ನಗರದ ತ್ಯಾಜ್ಯವನ್ನು ಹರಿಯಲು ಬಿಡುವ ಯುಜಿಡಿ ಯೋಜನೆಯ ಮುಂದುವರಿದ ಕಾಮಗಾರಿಯನ್ನು ಕೈಗಾರಿಕಾ ಬಡಾವಣೆ ಮೂಲಕ ಆರಂಭಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

Advertisement

ಮೂರು ವರ್ಷಗಳಿಂದ ನಗರದ ರಸ್ತೆಗಳೆಲ್ಲವನ್ನೂ ಅಗೆದು ಹಾಕಿ ವಾಹನ ಮತ್ತು ಪಾದಾಚಾರಿಗಳ ಓಡಾಟಕ್ಕೆ ಅಡಚಣೆ ಉಂಟು ಮಾಡಿದ್ದ ಯುಜಿಡಿ ಕಾಮಗಾರಿ ಇದೀಗ ಮತ್ತೆ ಮುಖ್ಯ ರಸ್ತೆಗಳನ್ನು ಹದಗೆಡಿಸಲು ಮುಂದಾಗಿದೆ. ನಗರದ ನೂತನ ಖಾಸಗಿ ಬಸ್‌ ನಿಲ್ದಾಣದ ಸಮೀಪದಿಂದ ಕೈಗಾರಿಕಾ ಬಡಾವಣೆ ಮೂಲಕ ಇಂದಿರಾಗಾಂಧಿ ವೃತ್ತದವರೆಗೆ ರಸ್ತೆಯನ್ನು ಅಗೆದು ಹಾಕಲು ಅಧಿಕಾರಿಗಳು ಕಾರ್ಯೋನ್ಮುಖರಾಗಿದ್ದಾರೆ. ಬಹುತೇಕ ಕಾಂಕ್ರಿಟ್‌ ರಸ್ತೆಗಳನ್ನೇ ಅಗೆಯಬೇಕಾಗಿದ್ದು, ಇಂದಿರಾ ಕ್ಯಾಂಟೀನ್‌ ಬಳಿಯಿಂದ ಕೈಗಾರಿಕಾ ಬಡಾವಣೆಯವರೆಗೆ ಗುರುತು ಮಾಡುವ ಕಾರ್ಯ ಇಂದು ನಡೆಯಿತು. ಇದರ ಪ್ರಕಾರ ಬೃಹತ್‌ ಚರಂಡಿಗಳು ಮತ್ತು ಚೇಂಬರ್‌ ನಿರ್ಮಾಣಕ್ಕಾಗಿ ಉತ್ತಮ ರೀತಿಯಲ್ಲಿರುವ ರಸ್ತೆಗಳು ಬಲಿಯಾಗುವುದು ಖಚಿತವಾಗಿದೆ.

ಸ್ಥಗಿತಕ್ಕೆ ಆಗ್ರಹ
ಸುಮಾರು ನಾಲ್ಕು ತಿಂಗಳ ಹಿಂದೆ ಖಾಸಗಿ ಬಸ್‌ ನಿಲ್ದಾಣದ ಸಮೀಪ ಇದೇ ರೀತಿ ಕಾಂಕ್ರಿಟ್‌ ರಸ್ತೆಯನ್ನು ಜೆಸಿಬಿ ಯಂತ್ರದ ಮೂಲಕ ಅಗೆದು ಹಾಕುವ ಕಾರ್ಯವನ್ನು ಆರಂಭಿಸಲಾಗಿತ್ತು. ಆದರೆ ಸಾರ್ವಜನಿಕರ ವಿರೋಧದ ಹಿನ್ನೆಲೆ ಸ್ಥಳಕ್ಕೆ ಆಗಮಿಸಿದ್ದ ಶಾಸಕ ಎಂ.ಪಿ.ಅಪ್ಪಚ್ಚುರಂಜನ್‌ ಅವರು ಕಾಮಗಾರಿಯನ್ನು ಸ್ಥಗಿತಗೊಳಿಸಲು ಮೌಖೀಕವಾಗಿ ಆದೇಶಿಸಿದ್ದರು. ಆದರೆ ಇದೀಗ ಮತ್ತೆ ಕಾಮಗಾರಿಗೆ ಚಾಲನೆ ನೀಡಲು ಮುಂದಾಗಿರುವುದರಿಂದ ಸಾರ್ವಜನಿಕರು ಹಾಗೂ ಕೈಗಾರಿಕಾ ಬಡಾವಣೆಯ ಉದ್ಯಮಿಗಳು ಮತ್ತೂಮ್ಮೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಗುರುತು ಮಾಡುವ ಪ್ರಕ್ರಿಯೆಯನ್ನು ತತ್‌ಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದರು. ಕ್ಷೇತ್ರದ ಶಾಸಕರು ಜಿಲ್ಲೆಯಿಂದ ಹೊರಗೆ ಇರುವುದರಿಂದ ಅವರು ಮರಳಿದ ನಂತರ ಚರ್ಚಿಸುವಂತೆ ಸಲಹೆ ನೀಡಿದರು.

ಯುಜಿಡಿ ಯೋಜನೆಯ ಉಸ್ತುವಾರಿ ವಹಿಸಿರುವ ಇಂಜಿನಿಯರ್‌ ಹಾಗೂ ಅಧಿಕಾರಿಗಳನ್ನು ಕಳೆದ ಬಾರಿ ಸಾರ್ವಜನಿಕರ ವಿರೋಧದ ಹಿನ್ನೆಲೆ ಶಾಸಕರು ಕಾಮಗಾರಿ ಸ್ಥಗಿತಗೊಳಿಸಲು ತಿಳಿಸಿದ್ದರು, ಆದರೆ ಇದೀಗ ಶಾಸಕರೇ ಕೆಲಸ ಮಾಡಲು ಅನುಮತಿ ನೀಡಿರುವುದರಿಂದ ರಸ್ತೆ ಗುರುತು ಮಾಡಲಾಗುತ್ತಿದೆ. ರಸ್ತೆಯನ್ನು ಅಗೆದರೆ ಅನಿವಾರ್ಯವಾಗಿ ಕೈಗಾರಿಕಾ ಬಡಾವಣೆ ಮೂಲಕ ವಾಹನ ಸಂಚಾರ ಸ್ಥಗಿತಗೊಳ್ಳುತ್ತದೆ ಎಂದು ಯುಜಿಡಿ ಅಧಿಕಾರಿ ತಿಳಿಸಿದರುಅಧಿಕಾರಿಗಳು ಸಾರ್ವಜನಿಕರ ಮನವೊಲಿಸುವ ಪ್ರಯತ್ನ ಮಾಡಿದರಾದರೂ ಒಪ್ಪದೇ ಇದ್ದ ಕಾರಣದಿಂದ ರಸ್ತೆ ಗುರುತು ಕಾರ್ಯವನ್ನು ಸ್ಥಗಿತಗೊಳಿಸಿದರು.

ನ್ಯಾಯಾಲಯದ ಆದೇಶ
ರಾಜ್ಯ ಹಾಗೂ ಹೊರ ರಾಜ್ಯದ ಜನ ಕೊಡಗಿನ ಮೂಲಕ ಹರಿಯುವ ಕಾವೇರಿ ನದಿ ನೀರನ್ನು ಕುಡಿಯಲು ಬಳಸುತ್ತಾರೆ. ಕೊಡಗು ಮತ್ತು ಮೈಸೂರು ಜಿಲ್ಲೆ ವ್ಯಾಪ್ತಿಯ ತ್ಯಾಜ್ಯಗಳು ನದಿಗೆ ಸೇರುತ್ತಿರುವುದರಿಂದ ಕಲುಷಿತ ನೀರು ನಮಗೆ ಸಿಗುತ್ತಿದೆ ಎಂದು ತಮಿಳುನಾಡು ದೂರಿಕೊಂಡ ಹಿನ್ನೆಲೆ ನ್ಯಾಯಾಲಯದ ಆದೇಶದಂತೆ ಕೇಂದ್ರ ಯುಜಿಡಿ ಯೋಜನೆಯನ್ನು ಚ. ಒಳಚರಂಡಿ ಮೂಲಕ ತ್ಯಾಜ್ಯ ಹರಿದು ನಿಗಧಿತ ಸ್ಥಳದಲ್ಲಿಶೇಖರಣೆಗೊಳ್ಳುವುದರಿಂದ ಕಾವೇರಿ ನದಿ ಕಲುಷಿತಗೊಳ್ಳುವುದು ತಪ್ಪುತ್ತದೆ. ಈ ಯೋಜನೆ ಮೈಸೂರಿನಲ್ಲಿ ಯಶಸ್ವಿಯಾಗಿದ್ದು, ಕೊಡಗಿನಲ್ಲೂ ಯಶಸ್ವಿಗೊಳಿ ಸುತ್ತೇವೆ, ಯೋಜನೆ ಪೂರ್ಣಗೊಂಡ ಅನಂತರ ನಿರ್ವಹಣೆ ಜವಾಬ್ದಾರಿ ನಗರಸಭೆ ಮೇಲಿರುತ್ತದೆ ಎಂದು ಯುಜಿಡಿ ಅಧಿಕಾರಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next