Advertisement

ಮಾ.5ಕ್ಕೆ ದಿಗಂತ್‌ ‘ಹುಟ್ಟುಹಬ್ಬದ ಶುಭಾಶಯ’ ಟೀಸರ್‌

02:38 PM Mar 04, 2021 | Team Udayavani |

ದಿಗಂತ್‌ ನಾಯಕ ನಟನಾಗಿ ಅಭಿನಯಿಸುತ್ತಿರುವ ಹೊಸಚಿತ್ರ “ಹುಟ್ಟುಹಬ್ಬದ ಶುಭಾಶಯ’ ತೆರೆಗೆ ಬರಲು ತಯಾರಾಗುತ್ತಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿ, ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ನಿರತರಾಗಿರುವ ಚಿತ್ರತಂಡ, ಇದೇ ಮಾರ್ಚ್‌. 5 ರಂದು ಚಿತ್ರದ ಟೀಸರ್‌ ಬಿಡುಗಡೆ ಮಾಡಲು ಪ್ಲಾನ್‌ ಮಾಡಿದೆ.

Advertisement

“ಕ್ರಿಸ್ಟಲ್‌ ಪಾರ್ಕ್‌ ಸಿನಿಮಾಸ್‌’ ಬ್ಯಾನರ್‌ನಲ್ಲಿ ಟಿ. ಆರ್‌ ಚಂದ್ರಶೇಖರ್‌ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗರಾಜ್‌ ನಿರ್ದೇಶನವಿದೆ. ಚಿತ್ರದಲ್ಲಿ ದಿಗಂತ್‌ಗೆ ನಾಯಕಿಯಾಗಿ ಕವಿತಾ ಗೌಡ ಜೋಡಿಯಾಗಿ ಅಭಿನಯಿಸಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಮಧ್ಯಭಾಗಕ್ಕೆ “ಹುಟ್ಟುಹಬ್ಬದ ಶುಭಾಶಯ’ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

ಇದರ ನಡುವೆಯೇ ನಟ ದಿಗಂತ್‌ ಸದ್ಯ ಯೋಗರಾಜ್‌ ಭಟ್‌ ನಿರ್ದೇಶನದ “ಗಾಳಿಪಟ-2′ ಚಿತ್ರದ ಚಿತ್ರೀಕರಣದಲ್ಲಿದ್ದು, ಕಜಕಿಸ್ಥಾನದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next