Advertisement

Powder: ಆ.23ರಂದು ತೆರೆಗೆ ಬರುತ್ತಿದೆ ದಿಗಂತ್‌ ನಟನೆಯ ʼಪೌಡರ್‌ʼ

01:12 PM Aug 17, 2024 | Team Udayavani |

ದಿಗಂತ್‌ ನಾಯಕರಾಗಿರುವ “ಪೌಡರ್‌’ ಚಿತ್ರ ಆ.23ರಂದು ತೆರೆಕಾಣುತ್ತಿದೆ. ಇತ್ತೀಚೆಗೆ ಚಿತ್ರದ ಪ್ರೀ ರಿಲೀಸ್‌ ಇವೆಂಟ್‌ ಫೀನಿಕ್ಸ್‌ ಮಾಲ್‌ ಆಫ್ ಏಷಿಯಾದಲ್ಲಿ ನಡೆಯಿತು. ಕನ್ನಡ ಚಿತ್ರರಂಗದ ತಾರಾ ಸಮಾಗಮಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

Advertisement

ಕಾರ್ಯಕ್ರಮದಲ್ಲಿ ದುನಿಯಾ ವಿಜಯ್, ಶ್ರೀಮುರಳಿ, ದಾನಿಷ್‌ ಸೇಠ್, ನಟಿ ಐಂದ್ರಿತಾ ರೈ, ನಿರ್ದೇಶಕ ರೋಹಿತ್‌ ಪದಕಿ ಸೇರಿದಂತೆ ಪೌಡರ್‌ ತಾರಾಬಳಗ ದಿಗಂತ್‌ ಮಂಚಾಲೆ, ಧನ್ಯಾ ರಾಮ್‌ ಕುಮಾರ್‌, ಅನಿರುದ್ಧ್ ಆಚಾರ್ಯ, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ರವಿಶಂಕರ್‌ ಗೌಡ ಎಲ್ಲರೂ ಭಾಗವಹಿಸಿದ್ದರು. ವಾಸುಕಿ ವೈಭವ್‌ ಮತ್ತು ಎಂ ಸಿ ಬಿಜ್ಜುವಿನ ಸಂಗೀತ ಕಾರ್ಯಕ್ರಮ ಎಲ್ಲರನ್ನು ಆಕರ್ಷಿಸಿತು.

ಪೌಡರ್‌ ಒಂದು ಹಾಸ್ಯಭರಿತ ಚಿತ್ರವಾಗಿದ್ದು, ಇದನ್ನು ಜನಾರ್ದನ್‌ ಚಿಕ್ಕಣ್ಣ ನಿರ್ದೇಶಿಸಿರುತ್ತಾರೆ. ದಿಗಂತ್‌ ಮಂಚಾಲೆ, ಧನ್ಯ ರಾಮ್‌ ಕುಮಾರ್‌, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ನಾಗಭೂಷಣ್‌, ರವಿಶಂಕರ್‌ ಗೌಡ ಮುಂತಾದವರು ನಟಿಸಿರುತ್ತಾರೆ. ಈ ಚಿತ್ರಕ್ಕೆ ವಾಸುಕಿ ವೈಭವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರವನ್ನು ಕಾರ್ತಿಕ್‌ ಗೌಡ, ಯೋಗಿ ಜಿ ರಾಜ, ವಿಜಯ್‌ ಸುಬ್ರಹ್ಮಣ್ಯಂ ಕೆ.ಆರ್‌.ಜಿ. ಸ್ಟೂಡಿಯೋಸ್‌ ಬ್ಯಾನರ್‌ ಅಡಿಯಲ್ಲಿ ಹಾಗೂ ಅರುನಭ್‌ ಕುಮಾರ್‌ ಟಿ.ವಿ.ಎಫ್.ಮೋಷನ್‌ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಿಸಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next