Advertisement

ದಿಗಂತ್‌ ಈಗ ರಾಮ 

07:31 AM Jan 03, 2019 | |

ನಟ ದಿಗಂತ್‌ ಇತ್ತೀಚೆಗಷ್ಟೇ ನಟಿ ಐಂದ್ರಿತಾ ರೇ ಅವರನ್ನು ಮದುವೆಯಾಗಿದ್ದಾರೆ. ಅದೊಂದು ದೊಡ್ಡ ಸುದ್ದಿಯಂತೂ ಹೌದು. ಈಗ ಮತ್ತೂಂದು ಹೊಸ ಸುದ್ದಿಯನ್ನೂ ಹರಿಬಿಟ್ಟಿದ್ದಾರೆ. ವಿಷಯ ಏನೆಂದರೆ, ಅವರೀಗ ಸದ್ದಿಲ್ಲದೆಯೇ ಹಿಂದಿ ಸಿನಿಮಾ ಮುಗಿಸಿ ಬಂದಿದ್ದಾರೆ. ಹೌದು, “ರಾಮ್‌ ಯುಗ್‌’ ಎಂಬ ಸಿನಿಮಾದಲ್ಲಿ ದಿಗಂತ್‌ ಸದ್ದಿಲ್ಲದೆಯೇ ನಟಿಸಿ ಬಂದಿದ್ದಾರೆ.

Advertisement

ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಚಿತ್ರದ ಬಿಡುಗಡೆ ಕೆಲಸ ಜೋರಾಗಿ ನಡೆಯುತ್ತಿದೆ. ಅಂದಹಾಗೆ, “ರಾಮ್‌ ಯುಗ್‌’ ಚಿತ್ರಕ್ಕೆ ಕುನಾಲ್‌ ಕೋಹ್ಲಿ ನಿರ್ದೇಶಕರು. ಈ ಹಿಂದೆ “ಮುಜ್ಸೇ ದೋಸ್ತಿ ಕರೋಗೆ’, “ಹಮ್‌ ತುಮ್‌’, “ಫ‌ನ್ಹಾ’, “ತೋಡಾ ಪ್ಯಾರ್‌ ತೋಡಾ ಮ್ಯಾಜಿಕ್‌’, “ತೇರಿ ಮೇರಿ ಕಹಾನಿ’, “ಫಿರ್‌ ಸೇ..’, ಹೀಗೆ ಹಲವು ಸೂಪರ್‌ ಹಿಟ್‌ ಚಿತ್ರಗಳನ್ನು ನಿರ್ದೇಶಿಸಿದ್ದ ಕುನಾಲ್‌ ಕೋಹ್ಲಿ, “ರಾಮ್‌ ಯುಗ್‌’ ಚಿತ್ರ ನಿರ್ದೇಶಿಸಿ, ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಇನ್ನು, ಈ ಚಿತ್ರಕ್ಕೆ ಕಮಲೇಶ್‌ ಪಾಂಡೆ ಚಿತ್ರಕಥೆ ಬರೆದಿದ್ದಾರೆ. ಈ ಹಿಂದೆ ಇವರು “ತೇಜ್ಹಾಬ್‌’, “ಚಾಲ್‌ಬ್ಹಾಜ್‌’, “ರಂಗ್‌ ದೇ ಬಸಂತಿ’ ಮೊದಲಾದ ಚಿತ್ರಗಳಿಗೆ ಚಿತ್ರಕಥೆ ಬರೆದವರು. ಅಂದಹಾಗೆ, ಹಿಂದಿ ಚಿತ್ರದಲ್ಲಿ ನಟಿಸಿದ ಬಗ್ಗೆ “ಉದಯವಾಣಿ’ ಜೊತೆ ಮಾತನಾಡಿದ ದಿಗಂತ್‌, “ನಾನು ಈ ಚಿತ್ರದಲ್ಲಿ ರಾಮನ ಪಾತ್ರ ಮಾಡಿದ್ದೇನೆ.

“ರಾಮ್‌ ಯುಗ್‌’ ಚಿತ್ರ ರಾಮಾಯಣದಲ್ಲಿ ಬರುವ ರಾಮ, ಸೀತೆ, ಲಕ್ಷ್ಮಣ, ಹನುಮಂತ ಹೀಗೆ ಪ್ರಮುಖ ಪಾತ್ರಗಳು ಮತ್ತು ಪ್ರಮುಖ ಸಂಗತಿಗಳ ಸುತ್ತ ಸಾಗಲಿದೆ. ಇನ್ನೊಂದು ವಿಷಯವೆಂದರೆ ಈ ಚಿತ್ರ ಎರಡು ಭಾಗಗಳಲ್ಲಿ ಬರುತ್ತಿದ್ದು, ಹಿಂದಿ ಮಾತ್ರವಲ್ಲದೆ ಭಾರತದ ಬೇರೆ ಬೇರೆ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಸುಮಾರು ಮೂರು ತಿಂಗಳ ಕಾಲ ಚಿತ್ರೀಕರಣ ನಡೆಸಲಾಗಿದ್ದು, ಬಿಗ್‌ ಬಜೆಟ್‌ನಲ್ಲಿ ಈ ಚಿತ್ರ ತಯಾರಾಗಿದೆ. ಸದ್ಯಕ್ಕೆ ಕಂಪ್ಯೂಟರ್‌ ಗ್ರಾಫಿಕ್ಸ್‌ ಮತ್ತಿತರ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಿಗೆ ಹೆಚ್ಚಿನ ಸಮಯ ಹಿಡಿಯುತ್ತಿದೆ. ಎಲ್ಲವೂ ಮುಗಿದ ನಂತರ ಚಿತ್ರ ಬಿಡುಗಡೆ’ ಎನ್ನುತ್ತಾರೆ.

ಅಂದಹಾಗೆ, ದಿಗಂತ್‌ ಅವರಿಗೆ ಹಿಂದಿ ಚಿತ್ರರಂಗ ಹೊಸದೇನಲ್ಲ. 2015ರಲ್ಲಿ “ವೆಡ್ಡಿಂಗ್‌ ಪುಲಾವ್‌’ ಎನ್ನುವ ಚಿತ್ರವೊಂದರಲ್ಲಿ ದಿಗಂತ್‌ ಅಭಿನಯಿಸಿದ್ದರು. ಆದರೆ “ಹಿಂದಿನ ಚಿತ್ರಕ್ಕಿಂತ “ರಾಮ್‌ ಯುಗ್‌’ ಸಂಪೂರ್ಣ ವಿಭಿನ್ನ ಅನುಭವ ನೀಡಿದೆ’ ಎನ್ನುವುದು ದಿಗಂತ್‌ ಮಾತು. “ನಮಗೆಲ್ಲ ರಾಮಾಯಣ ಅಂದರೆ ಕಿರೀಟ ತೊಟ್ಟ, ಬಿಲ್ಲು-ಬಾಣ ಹಿಡಿದ ರಾಮನ ಛಾಯೆ ಮನದಲ್ಲಿ ಮೂಡುತ್ತದೆ.

ಆದರೆ ಈ ಚಿತ್ರದಲ್ಲಿ ರಾಮನ ನೋಟವೇ ಸಂಪೂರ್ಣ ವಿಭಿನ್ನವಾಗಿರಲಿದೆ. ಇನ್ನು ಚಿತ್ರದ ಸಂಭಾಷಣೆಗಳು ಕೂಡ ಮಾಮೂಲಿ ಹಿಂದಿಗಿಂತ ತುಂಬಾ ಭಿನ್ನವಾಗಿರಲಿವೆ. ಪಾಳಿ, ಸಂಸ್ಕೃತ ಮಿಶ್ರಿತ ಹಳೆಯ ಹಿಂದಿ ಸಂಭಾಷಣೆಗಳು ಚಿತ್ರದಲ್ಲಿದೆ. ಅಂತಹ ಸಂಭಾಷಣೆ ಹೇಳುವುದೇ ದೊಡ್ಡ ಸವಾಲಾಗಿತ್ತು’ ಎನ್ನುವ ದಿಗಂತ್‌, ಮುಂಬರುವ ಏಪ್ರಿಲ್‌ ಅಥವಾ ಮೇ ವೇಳೆಗೆ “ರಾಮ್‌ ಯುಗ್‌’ ಚಿತ್ರದ ಮೊದಲ ಭಾಗ ತೆರೆಗೆ ಬರಲಿದೆ. ಅದಾದ ಮೂರ್‍ನಾಲ್ಕು ತಿಂಗಳ ಬಳಿಕ ಅದರ ಎರಡನೇ ಭಾಗ ಕೂಡ ತೆರೆಗೆ ಬರಲಿದೆ. ಜನವರಿ ಅಂತ್ಯ ಅಥವಾ ಫೆಬ್ರವರಿ ವೇಳೆಗೆ ಚಿತ್ರದ ಟ್ರೇಲರ್‌ನ್ನು ಅಮೀರ್‌ ಖಾನ್‌ ಬಿಡುಗಡೆ ಮಾಡುವ ಸಾಧ್ಯತೆ ಇದೆ’ ಎನ್ನುತ್ತಾರೆ.

Advertisement

ಫಾರ್ಚೂನರ್‌ ತೆರೆಗೆ: ನಟ ದಿಗಂತ್‌ ಈ ವಾರ “ಫಾರ್ಚುನರ್‌’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮದುವೆ ಬಳಿಕ ಮೊದಲ ಚಿತ್ರ ತೆರೆ ಕಾಣುತ್ತಿರುವುದರಿಂದ, ದಿಗಂತ್‌ ಅವರಿಗೂ ತಮ್ಮ ಹಿಂದಿನ ಚಿತ್ರಗಳಿಗಿಂತ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗಿಯೇ ಇದೆ. ತಮ್ಮ ಹಿಂದಿನ ಚಿತ್ರಗಳಿಗಿಂತ “ಫಾರ್ಚೂನರ್‌’ ಚಿತ್ರದ ಬಗ್ಗೆ ದಿಗಂತ್‌ ಕೊಂಚ ಸೀರಿಯಸ್‌ ಆಗಿರುವಂತೆ ಕಾಣುತ್ತದೆ ಅದಕ್ಕೆ ಕಾರಣ ಅವರು ಚಿತ್ರದ ಬಗ್ಗೆ ಆಡಿರುವ ಮಾತುಗಳು.

ಇತ್ತೀಚೆಗೆ ಅವರು ಮದುವೆಯಾಗಿದ್ದಾರೆ. ಅದರ ಹಿಂದೆಯೇ ಹೊಸ ವರ್ಷವನ್ನು ಸಂಭ್ರಮದಿಂದ ಬರಮಾಡಿಕೊಂಡಿದ್ದಾರೆ. ಇನ್ನು ಹೊಸ ವರ್ಷದ ಆರಂಭದಲ್ಲೇ ಅವರ ಮೊದಲ ಚಿತ್ರ ಬಿಡುಗಡೆಯಾಗುತ್ತಿದೆ. ಇವೆಲ್ಲದರ ಜೊತೆಗೆ ಚಿತ್ರದ ಸಬೆjಕ್ಟ್ ಚೆನ್ನಾಗಿರುವುದರಿಂದ ಸಾಕಷ್ಟು ನಿರೀಕ್ಷೆ ಅವರಿಗಿದೆ. ಇಲ್ಲಿಯವರೆಗೆ ಅವರು ಲವರ್‌ ಬಾಯ್‌ ಥರದ ಪಾತ್ರಗಳನ್ನು ಮಾಡುತ್ತಿದ್ದರು. ಆದರೆ, “ಫಾರ್ಚೂನರ್‌’ನಲ್ಲಿ ಮದುವೆಯಾದ ಹುಡುಗನ ಪಾತ್ರ ಮಾಡಿದ್ದಾರೆ. ಮದುವೆಯಾದ ನಂತರ ಅಂಥದ್ದೆ ಪಾತ್ರ ಮಾಡುವ ಚಾನ್ಸ್‌ ಈ ಚಿತ್ರದಲ್ಲಿ ಸಿಕ್ಕಿರುವುದು ದಿಗಂತ್‌ ಅವರಿಗೆ ಖುಷಿ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next