Advertisement
ಸ್ಪೇನ್‌ನ 43 ವರ್ಷದ ವೆರೋನಿಕಾ ಡುಕ್, ಪ್ರೈಮರಿ ಶಾಲೆಯೊಂದರಲ್ಲಿ ಶಿಕ್ಷಕಿ. ಅವರು, ಆರ್ಟ್, ಇಂಗ್ಲಿಷ್, ಸ್ಪ್ಯಾನಿಷ್, ನ್ಯಾಚುರಲ್ ಸೈನ್ಸ್‌ನ ಪಾಠ ಮಾಡುತ್ತಾರೆ. ವಿನೂತನ ಐಡಿಯಾಗಳನ್ನು ಬಳಸಿ, ಮಕ್ಕಳಿಗೆ ಅರ್ಥವಾಗುವಂತೆ ಪಾಠ ಮಾಡುವುದು ವೆರೋನಿಕಾರ ಸ್ಪೆಷಾಲಿಟಿ. ಇತ್ತೀಚೆಗೆ ತರಗತಿಯಲ್ಲಿ ಅವರು ಪ್ರಯೋಗಿಸಿದ “ಹೊಸ ಐಡಿಯಾ’, ಎಲ್ಲೆಡೆ ಸದ್ದು ಮಾಡುತ್ತಿದೆ. ಮಾನವನ ದೇಹದಲ್ಲಿ ಯಾವ ಅಂಗಗಳು (ಹೃದಯ, ಕರುಳು, ಶ್ವಾಸನಾಳ) ಎಲ್ಲೆಲ್ಲಿವೆ ಅಂತ ತೋರಿಸಲು, ತರಗತಿಯಲ್ಲಿ ಮಾದರಿ ಚಿತ್ರಗಳನ್ನು ತೋರಿಸುವುದು ರೂಢಿ. ಆದರೆ, ವೆರೋನಿಕಾ, ದೇಹದ ಅಂಗಗಳ ಚಿತ್ರವಿರುವ ಬಾಡಿಸೂಟ್ ತೊಟ್ಟು, ಕ್ಲಾಸ್‌ಗೆ ಹೋಗಿದ್ದಾರೆ. ಆ ಬಾಡಿ ಸೂಟ್ ಮೇಲೆ ದೇಹದ ಪ್ರತಿ ಅಂಗವೂ ಎಲ್ಲೆಲ್ಲಿದೆ ಎಂಬುದನ್ನು ಯಥಾವತ್ತಾಗಿ ಚಿತ್ರಿಸಲಾಗಿತ್ತು. ಆ ಬಟ್ಟೆ ತೊಟ್ಟಾಗ, ದೇಹದ ಒಳಗೆ ಏನೇನಿದೆ, ಎಲ್ಲೆಲ್ಲಿದೆ ಎಂಬುದು ಸುಲಭವಾಗಿ ಅರ್ಥವಾಗುವಂತಿತ್ತು. ಈ ರೀತಿ ಮಾಡಲು, ಸ್ವಿಮ್‌ಸೂಟ್‌ನ ಜಾಹೀರಾತೊಂದು ಅವರಿಗೆ ಪ್ರೇರಣೆ ನೀಡಿತಂತೆ. ಅಷ್ಟೇ ಅಲ್ಲ, ರಂಗ ಪರಿಕರಣಗಳನ್ನು ಬಳಸುವುದು, ರಾಜ/ರಾಣಿಯರಂತೆ ವೇಷ ತೊಟ್ಟು ಇತಿಹಾಸದ ಪಾಠ ಮಾಡುವುದು, ಇವರ ವೈಖರಿಯಂತೆ. Advertisement
ಭಾಳ ಡಿಫರೆಂಟು ಈ ಮಿಸ್ಸು !
10:18 AM Jan 02, 2020 | mahesh |