Advertisement
ತೂಕ ಇಳಿಸುವಿಕೆ ನಿಧಾನಗತಿ ಹಾಗೂ ಆರೋಗ್ಯಕರವಾಗಿರಬೇಕು. ತ್ವರಿತಗತಿಯ ಡಯೆಟ್ ದೀರ್ಘಕಾಲದ ಪ್ರಯೋಜನಗಳನ್ನು ನೀಡಲು ಸಾಧ್ಯವಿಲ್ಲ. ಹೀಗಾಗಿ ಆರೋಗ್ಯಕರ ಡಯೆಟ್‌ಗೆ ಹೆಚ್ಚಿನ ಮಹತ್ವ ನೀಡಬೇಕು. ಇದಕ್ಕಾಗಿ ಪಾಲಿಸಬೇಕಾದ ಪ್ರಮುಖ 5 ಅಂಶಗಳು ಇಲ್ಲಿವೆ
Related Articles
Advertisement
ನಿತ್ಯದ ಆಹಾರದಲ್ಲಿರುವ ಸಕ್ಕರೆ ಹಾಗೂ ಉಪ್ಪಿನ ಪ್ರಮಾಣ ಕೂಡ ತೂಕ ಇಳಿಸುವಿಕೆಯ ಪ್ರಮುಖ ಅಂಶ. ಇದಕ್ಕಾಗಿ ತಾಜಾ ಪಾನೀಯ (ನಿಂಬೆ ರಸ, ಎಳ ನೀರು), ನೈಸರ್ಗಿಕವಾಗಿ ಸಿಹಿ ಅಂಶವುಳ್ಳ ಜೇನುತುಪ್ಪ ಹಾಗೂ ಬೆಲ್ಲವನ್ನು ಉಪಯೋಗಿಸಿ.
•5 ಬಾರಿ ಸಣ್ಣ ಆಹಾರವಿರಲಿ
ಎಲ್ಲರೂ ನಿತ್ಯ ಮೂರು ಹೊತ್ತು ಆಹಾರ ಸೇವಿಸುವುದು ಸಾಮಾನ್ಯ. ಇದರ ನಡುವೆ ಎರಡು ಬಾರಿ ಸ್ನಾಕ್ಸ್ ಗಳನ್ನು ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ಹಾಗೂ ದೇಹದಲ್ಲಿರುವ ಶಕ್ತಿಯನ್ನು ನಿಯಂತ್ರಣ ಮಾಡಬಹುದು. ಈ ಸ್ನಾಕ್ಸ್ ನೈಸರ್ಗಿಕವಾಗಿರಬೇಕು. ಇದಕ್ಕಾಗಿ ಹಣ್ಣುಹಂಪಲು, ಸಲಾಡ್ ಅಥವಾ ಒಣಹಣ್ಣುಗಳನ್ನು ಸೇವಿಸಬಹುದು.
• ಸಾಫ್ಟ್ ಡ್ರಿಂಕ್ಸ್, ಕಾಫಿ, ಟೀ ಬೇಡ
ಬಾಯರಿಕೆಯಾದಾಗ ದಾಹ ತೀರಿಸುವ ಸಲುವಾಗಿ ಎಲ್ಲರೂ ತಂಪು ಪಾನೀಯಗಳಿಗೆ ಮೊರೆ ಹೋಗುತ್ತಾರೆ. ಇನ್ನು ಅತಿಯಾಗಿ ಕಾಫಿ, ಟೀ ಸೇವನೆಯೂ ಒಳ್ಳೆಯದಲ್ಲ. ಇದರಲ್ಲಿ ಹೆಚ್ಚಿನ ಕ್ಯಾಲೋರಿ ಹಾಗೂ ಸಕ್ಕರೆ ಅಂಶಗಳಿರುತ್ತವೆ. ಹೀಗಾಗಿ ಇವುಗಳನ್ನು ಬಿಟ್ಟು ಬ್ಲ್ಯಾಕ್ ಟೀ, ಗ್ರೀನ್ ಟೀ, ನಿಂಬೆರಸ, ನೀರು ಕುಡಿಯುವುದು ಉತ್ತಮ. ಆರೋಗ್ಯಕರ ಡಯೆಟ್ ಎಂದರೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಸರಿಯಾದ ಆಯ್ಕೆಗಳನ್ನು ಮಾಡಿಕೊಳ್ಳುವುದು ಎಂಬುದು ನೆನಪಿರಲಿ
••ರಮ್ಯಾ ಕೆದಿಲಾಯ