Advertisement
-ಪೌಷ್ಟಿಕಾಂಶದ ಬಗ್ಗೆ ಗಮನ ಕೊಡಿತಿನ್ನುವ ಆಹಾರದಲ್ಲಿ ಎಷ್ಟು ಕ್ಯಾಲೊರಿ ಇದೆ, ಅದರಿಂದ ನಾನು ಎಷ್ಟು ತೂಕ ಇಳಿಸಬಹುದು ಅಂತ ತಲೆ ಕೆಡಿಸಿಕೊಳ್ಳಬೇಡಿ. ಅದರಲ್ಲಿ ಎಷ್ಟು ಪೌಷ್ಟಿಕಾಂಶ ಇದೆ ಅಂತ ಗಮನ ಕೊಡಿ. ಪೌಷ್ಟಿಕಾಂಶಯುಕ್ತ, ಹೆಚ್ಚು ಕ್ಯಾಲೊರಿಯ ಪದಾರ್ಥಗಳನ್ನು ಬಿಟ್ಟು, ಅಂಗಡಿಗಳಲ್ಲಿ “ಲೆಸ್ ಕ್ಯಾಲೊರಿ’ ಎಂದು ನಮೂದಿಸಲ್ಪಟ್ಟ ಪ್ಯಾಕೆಟ್‌ಗಳ ಮೊರೆ ಹೋಗಬೇಡಿ. ರಾಗಿ, ಕೆಂಪು ಅಕ್ಕಿ, ಸಿರಿ ಧಾನ್ಯ, ಹಣ್ಣು-ತರಕಾರಿಯನ್ನು ಕ್ಯಾಲೋರಿ ಲೆಕ್ಕಾಚಾರ ಮಾಡದೆ, ತಿಂದು, ಆರೋಗ್ಯವಂತರಾಗಿರಿ.
ಡಯಟ್ ನೆಪದಲ್ಲಿ, ಊಟ ಬಿಡಬೇಡಿ. ಅದರಿಂದ ತೂಕ ಕಡಿಮೆಯಾಗುವುದಿಲ್ಲ. ಬೆಳಗ್ಗೆ ತಿಂಡಿ, ಮಧ್ಯಾಹ್ನ-ರಾತ್ರಿ ತಪ್ಪದೇ ಊಟ ಮಾಡಿ. ಪ್ರತಿನಿತ್ಯವೂ, ಒಂದೇ ಸಮಯದಲ್ಲಿ ಆಹಾರ ಸೇವಿಸುವುದು ಉತ್ತಮ. ನಿರ್ದಿಷ್ಟ ಸಮಯದಲ್ಲಿ ಆಹಾರ ಸಿಗಲಿದೆ ಅಂತ ಗೊತ್ತಾದಾಗ, ದೇಹದ ಪಚನಕ್ರಿಯೆ ಸರಾಗವಾಗಿ ನಡೆಯುತ್ತದೆ ಅಂತಾರೆ ತಜ್ಞರು. ಹಿತಮಿತವಾಗಿ, ಸಮಯಕ್ಕೆ ಸರಿಯಾಗಿ ಆಹಾರ ಸೇವಿಸುವುದು, ಊಟ ತ್ಯಜಿಸುವುದಕ್ಕಿಂತ ಉತ್ತಮ. -ಕುರುಕಲು ಬೇಡ
ಬಾಯಿ ಚಪಲವಾದಾಗ, ಮನೆಯಲ್ಲಿ ಏನು ಸಿಗುತ್ತದೋ ಅದನ್ನು ತಿನ್ನುವುದು ರೂಢಿ. ಹಾಗಾಗಿ, ದಿನಸಿ ಜೊತೆಗೆ ಬಿಸ್ಕೆಟ್, ಲೇಸ್, ಕುರುಕುರೆ, ಚಿಪ್ಸ್, ಚಾಕೋಲೇಟ್‌ಗಳನ್ನು ತಂದಿಟ್ಟುಕೊಳ್ಳಬೇಡಿ. ಯಾಕಂದ್ರೆ, ನಾಲಗೆ ಕೆಲವೊಮ್ಮೆ ಬುದ್ಧಿಯ ಮಾತು ಕೇಳುವುದಿಲ್ಲ.
Related Articles
ಮೊಬೈಲ್‌ನಲ್ಲಿ ಒಂದು ಬಟನ್ ಕ್ಲಿಕ್ಕಿಸಿದರೆ, ಥರಹೇವಾರಿ ಊಟ, ಕುಳಿತಲ್ಲಿಗೇ ಬರುತ್ತದೆ. ಮತ್ಯಾಕೆ ಲಂಚ್ ಬಾಕ್ಸ್ ಒಯ್ಯಬೇಕು ಅಂದಿರೋ, ಕೆಟ್ಟಿರಿ. ಎಷ್ಟೇ ಕಷ್ಟವಾದರೂ ಪರವಾಗಿಲ್ಲ, ಆಫೀಸ್‌ಗೆ ಲಂಚ್ ಮತ್ತು ಸ್ನ್ಯಾಕ್ಸ್ ಬಾಕ್ಸ್ ಕೊಂಡೊಯ್ಯುವ ಅಭ್ಯಾಸ ಮಾಡಿಕೊಳ್ಳಿ. ಇದು, ಡಯಟ್‌ಗೆ, ಬಜೆಟ್‌ಗೆ ಎರಡಕ್ಕೂ ಒಳ್ಳೆಯದು.
Advertisement