Advertisement

ಬಂಕ್‌ನಲ್ಲಿ  ಡೀಸೆಲ್‌-ಪೆಟ್ರೋಲ್‌ ಅದಲು-ಬದಲು

10:55 PM May 22, 2021 | Team Udayavani |

ಬ್ಯಾಡಗಿ: ಡೀಸೆಲ್‌ ಟ್ಯಾಂಕ್‌ನಲ್ಲಿ ಪೆಟ್ರೋಲ್‌ ಮತ್ತು ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಡೀಸೆಲ್‌ ಅನ್‌ಲೋಡ್‌ ಮಾಡುವ ಮೂಲಕ ಗ್ರಾಹಕರನ್ನು ಪೇಚಿಗೆ ಸಿಲುಕಿಸಿದ ಘಟನೆ ಪಟ್ಟಣದ ಹೊರವಲಯ(ಮೋಟೆಬೆನ್ನೂರ ರಸ್ತೆಯಲ್ಲಿ)ದಲ್ಲಿರುವ ನೇತ್ರಾವತಿ ಬಂಕ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

Advertisement

ಕಳೆದ ಮೂರು ದಿನಗಳ ಹಿಂದಷ್ಟೇ ತಮ್ಮದೇ ಸ್ವಂತ ಟ್ಯಾಂಕರ್‌ನ ಎರಡು ಕಂಪಾರ್ಟ್‌ಮೆಂಟ್‌ ನಲ್ಲಿ ಪೆಟ್ರೋಲ್‌, ಇನ್ನೆರಡು ಕಂಪಾರ್ಟ್‌ಮೆಂಟ್‌ ಗಳಲ್ಲಿ ಡೀಸೆಲ್‌ ಮತ್ತು ಪೆಟ್ರೋಲ್‌ ತುಂಬಿಕೊಂಡು ಬರಲಾಗಿತ್ತು. ಆದರೆ, ರಾತ್ರಿ ವೇಳೆ ಅನ್‌ಲೋಡ್‌ ಮಾಡುವ ಸಂದರ್ಭದಲ್ಲಿ ಡೀಸೆಲ್‌ ಟ್ಯಾಂಕ್‌ನಲ್ಲಿ ಪೆಟ್ರೋಲ್‌ ಮತ್ತು ಪೆಟ್ರೋಲ್‌ ಟ್ಯಾಂಕ್‌ನಲ್ಲಿ ಡೀಸೆಲ್‌ ಅನ್‌ಲೋಡ್‌ ಮಾಡಿದ್ದೇ ಘಟನೆಗೆ ಕಾರಣವೆಂದು ತಿಳಿದು ಬಂದಿದೆ. ನಲ್ವತ್ತಕ್ಕೂ ಅಧಿಕ ಬೈಕ್‌ಗಳ ಎಂಜಿನ್‌ ಸೀಜ್‌: ಡೀಸೆಲ್‌ ಮತ್ತು ಪೆಟ್ರೋಲ್‌ ಅದಲಿ ಬದಲಿಯಾದ ಘಟನೆ ಮಾಲೀಕರು ಗಮನಕ್ಕೂ ಸಹ ಬಂದಿರುವುದಿಲ್ಲ. ಆದರೆ, ಪೆಟ್ರೋಲ್‌ ಅಂತಾ ತಿಳಿದು ಡಿಸೇಲ್‌ ಹಾಕಿಸಿಕೊಂಡ ಬೈಕ್‌ ಸವಾರರು ಎರಡೂ¾ರು ಕಿ.ಮೀ.ಗಳಷ್ಟು ಓಡಿಸಿದ ಬಳಿಕ ಬಹಳಷ್ಟು ಬೈಕ್‌ ಗಳು ಇದ್ದಕ್ಕಿದ್ದಂತೆ ಸೀಜ್‌ ಆಗಿವೆ. ಸೀಜ್‌ ಆದ ಬೈಕ್‌ ಮಾಲಿಕರು ವಿಷಯವನ್ನು ಪೆಟ್ರೋಲ್‌ ಬಂಕ್‌ನವರ ಗಮನಕ್ಕೆ ತಂದಿದ್ದಾರೆ.

ಆಗ ಪರಿಶೀಲಿಸಿದಾಗ ಬೈಕ್‌ ನಲ್ಲಿ ಡೀಸೆಲ್‌ ಭರ್ತಿಯಾಗಿದ್ದು ದೃಢವಾಗಿದೆ. ಅಧಿಕಾರಿಗಳ ಭೇಟಿ: ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಆಹಾರ ಮತ್ತು ನಾಗರಿಕ, ಗ್ರಾಹಕರ ವ್ಯವಹಾರಗಳ ಇಲಾಖೆ ಜಿಲ್ಲಾ ಉಪನಿರ್ದೇಶಕ ವಿನೋದ್‌ ಕುಮಾರ್‌ ಹೆಗ್ಗಳಗಿ, ಬಿಪಿಸಿಎಲ್‌ ಅ ಧಿಕಾರಿಯೊಂದಿಗೆ ಸುಮಾರು 2 ಗಂಟೆಗೂ ಹೆಚ್ಚು ಕಾಲ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಎರಡೂ ಟ್ಯಾಂಕ್‌ ಗಳಲ್ಲಿ ತೈಲ ಅದಲಿ ಬದಲಿಯಾಗಿದ್ದು ದೃಢಪಟ್ಟಿದೆ. ತಪ್ಪೊಪ್ಪಿಕೊಂಡ ಬಂಕ್‌ ಮಾಲಿಕ: ಘಟನೆ ಕುರಿತು ನೇತ್ರಾವತಿ ಬಂಕ್‌ ಮಾಲಿಕ ತಪ್ಪೊಪ್ಪಿಕೊಂಡಿದ್ದಾರೆ. ಘಟನೆಯಿಂದ ನನ್ನ ಮನಸ್ಸಿಗೆ ನೋವಾಗಿದೆ. ಆದರೆ, ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ. ಘಟನೆಯಿಂದ ಹಾನಿಯಾದ ದ್ವಿಚಕ್ರ ವಾಹನಗಳ ದುರಸ್ತಿ ವೆಚ್ಚ ಭರಿಸುವುದಾಗಿ ಅ ಧಿಕಾರಿಗಳಿಗೆ ಭರವಸೆ ನೀಡಿದರು. ನೋಟಿಸ್‌ ಜಾರಿ: ಈ ವೇಳೆ ಬಂಕ್‌ ಮಾಲಿಕರಿಗೆ ಲಿಖೀತ ನೋಟಿಸ್‌ ನೀಡಿದ ಅಧಿಕಾರಿಗಳು, ಎರಡೂ ಟ್ಯಾಂಕ್‌ಗಳನ್ನು ಸ್ವತ್ಛಗೊಳಿಸುವವರೆಗೆ ಹಾಗೂ ತೈಲ ನಿಗಮದ ಅಧಿಕಾರಿಗಳು ಸೂಚನೆ ನೀಡುವವರೆಗೂ ಬಂಕ್‌ ಯಾವುದೇ ಕಾರಣಕ್ಕೆ ಆರಂಭಿಸಿದಂತೆ ಸೂಚನೆ ನೀಡಿ ತೆರಳಿದರು. ಸ್ಥಳೀಯ ಆಹಾರ ನಿಗಮದ ಅಧಿಕಾರಿ ದೊಡ್ಮನಿ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next