Advertisement

ಡಿಗೋ ಮ್ಯಾರಡೋನಾಗೆ ಅನಾರೋಗ್ಯ; ಆಸ್ಪತ್ರೆಗೆ ದಾಖಲು

12:50 AM Jan 06, 2019 | |

ಬ್ರುನೋಸ್‌ ಐರಿಸ್‌: ಫ‌ುಟ್ಬಾಲ್‌ ಲೋಕದ ದಂತಕತೆ ಡಿಗೋ ಮ್ಯಾರಡೋನಾ ಅವರು ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಗೆ ಶನಿವಾರ ದಾಖಲಾಗಿದ್ದಾರೆ. 

Advertisement

ಪ್ರಾಥಮಿಕ ಪರೀಕ್ಷೆಗಳಿಂದ ಅವರ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವ ಆಗಿರುವುದು ತಿಳಿದುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಹಲವಾರು ಬಾರಿ ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿರುವ ಮರಡೋನಾ ಅವರಿಗೆ ಇದು ಹೊಸ ಸಮಸ್ಯೆ ಎಂದು ಸ್ಥಳೀಯ ಕ್ರೀಡಾ ಪತ್ರಿಕೆ ಓಲೇ ತಿಳಿಸಿದೆ. ಆದರೆ, ಅನಾರೋಗ್ಯದ ಮಟ್ಟ ಎಷ್ಟಿದೆ ಎಂಬುದನ್ನು ವೈದ್ಯರು ಬಹಿರಂಗಗೊಳಿಸಿಲ್ಲ ಎಂದು ಪತ್ರಿಕೆ ಹೇಳಿದೆ.

ಮೆಕ್ಸಿಕೋದಲ್ಲಿ ಡಿವಿಷನ್‌ ಫ‌ುಟ್ಬಾಲ್‌ ತಂಡವಾದ ಡೊರಾಡೊಸ್‌ ಡಿ ಸಿನಲೊವಾಕ್ಕೆ ತರಬೇತುದಾರರಾಗಿರುವ ಅವರು, ಈ ಹುದ್ದೆಗಾಗಿ ಮೆಕ್ಸಿಕೋಕ್ಕೆ ಆಗಮಿಸುವ ಮೊದಲೇ ಅವರಿಗೆ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವದ ಸಮಸ್ಯೆ ಕಾಣಿಸಿಕೊಂಡಿತ್ತು. 

ಆದರೆ, ಚಿಕಿತ್ಸೆ ಪಡೆದು ತರಬೇತಿಗಾಗಿ ಆಗಮಿಸಿದ್ದ ಅವರು, ಇತ್ತೀಚೆಗೆ ಆಗಾಗ ಅದೇ ಸಮಸ್ಯೆಗೆ ತುತ್ತಾಗಿದ್ದರು ಎಂದು ಕೆಲ ಮಾಧ್ಯಮಗಳು ಹೇಳಿವೆ. ಆದರೆ, ಈ ಬಗ್ಗೆ ಮರಡೋನಾ ಅವರ ಕುಟುಂಬದ ಮೂಲಗಳಾಗಲೀ, ವೈದ್ಯರಾಗಲೀ ಯಾವುದೇ ಸ್ಪಷ್ಟನೆ ನೀಡಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next