Advertisement

ಗೌರವ ಕೊರತೆಯಿಂದಾಗಿ ಐಪಿಎಲ್‌-15ರಿಂದ ಹಿಂದೆ ಸರಿದಿದ್ದೇನೆ: ಕ್ರಿಸ್‌ ಗೇಲ್‌

08:42 AM May 09, 2022 | Team Udayavani |

ಲಂಡನ್: ಐಪಿಎಲ್‌ ಕೂಟದಲ್ಲಿ ಅದ್ಭುತ ನಿರ್ವಹಣೆ ನೀಡಿ ರಂಜಿಸಿದ್ದ ವೆಸ್ಟ್‌ಇಂಡೀಸ್‌ನ ದೈತ್ಯ ಕ್ರಿಸ್‌ ಗೇಲ್‌ ಅವರು ಐಪಿಎಲ್‌ 15ರಲ್ಲಿ ಆಡದಿರುವ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Advertisement

ಕಳೆದ ಕೆಲವು ವರ್ಷಗಳಿಂದ ನನ್ನನ್ನು ಸರಿಯಾಗಿ ನೋಡಿಕೊಳ್ಳಲಾಗಿಲ್ಲ ಮತ್ತು ಗೌರವದ ಕೊರತೆಯಿಂದಾಗಿ ಐಪಿಎಲ್‌ 15ರಿಂದ ಹಿಂದೆ ಸರಿದಿದ್ದೇನೆ ಎಂದು ಕ್ರಿಸ್‌ ಗೇಲ್‌ ಹೇಳಿದ್ದಾರೆ.

ಐಪಿಎಲ್‌ ಬಹಳಷ್ಟು ಜನಪ್ರಿಯಗೊಳ್ಳಲು ಕ್ರಿಸ್‌ ಗೇಲ್‌ ಅವರ ಸ್ಫೋಟಕ ಆಟವೇ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

ಐಪಿಎಲ್‌ ಆರಂಭವಾದ ಬಳಿಕ ಗೇಲ್‌ ಅದ್ಭುತ ನಿರ್ವಹಣೆ ನೀಡಿ ಗಮನ ಸೆಳೆದಿದ್ದಾರೆ. ಆರಂಭದಲ್ಲಿ ಕೋಲ್ಕತಾ ನೈಟ್‌ರೈಡರ್ ಮತ್ತು ಆರ್‌ಸಿಬಿ ಪರ ಆಡಿದ್ದ ಯೂನಿವರ್ಸಲ್‌ ಬಾಸ್‌ ಆಗಿರುವ ಗೇಲ್‌ ಆಬಳಿಕ ಪಂಜಾಬ್‌ ಕಿಂಗ್ಸ್‌ ತಂಡವನ್ನು ಸೇರಿದ್ದರು.

ಆದರೆ 2019ರ ಋತುವಿನಲ್ಲಿ ಅಮೋಘ ನಿರ್ವಹಣೆ ನೀಡಿದ್ದ ಅವರು ಆಬಳಿಕ 2020 ಮತ್ತು 2021ರಲ್ಲಿ ಪಂಜಾಬ್‌ ತಂಡದ ಆಟವಾಡುವ ಬಳಗದಲ್ಲಿ ಸ್ಥಾನ ಪಡೆಯಲು ಬಹಳಷ್ಟು ಒದ್ದಾಡಿದರು. ಕಳೆದ ವರ್ಷ ಗೇಲ್‌ 10 ಪಂದ್ಯಗಳನ್ನಾಡಿದ್ದು 193 ರನ್‌ ಗಳಿಸಿದ್ದರು. 2020ರಲ್ಲಿ ಅವರು ಆಡಿದ 7 ಪಂದ್ಯಗಳಿಂದ 288 ರನ್‌ ಪೇರಿಸಿದ್ದರು.

Advertisement

ಕಳೆದ ಕೆಲವು ವರ್ಷಗಳಲ್ಲಿ ಐಪಿಎಲ್‌ ಸಾಗಿದ ರೀತಿಯನ್ನು ಗಮನಿಸಿದರೆ ನನ್ನನ್ನು ಸರಿಯಾಗಿ ನೋಡಿಕೊಳ್ಳಲಾಗಿಲ್ಲ ಎಂಬುದು ನನ್ನ ಭಾವನೆ. ಹಾಗಾಗಿ ನಾನು ಈ ರೀತಿ ಅಲೋಚನೆ ಮಾಡಿದ್ದೇನೆ. ಐಪಿಎಲ್‌ ಮತ್ತು ಕ್ರಿಕೆಟ್‌ಗಾಗಿ ಅಷ್ಟೊಂದು ಸಾಧನೆ ಮಾಡಿದ್ದರೂ ನನ್ನ ಅರ್ಹತೆಗೆ ಸಿಗಬೇಕಾದ ಗೌರವ ನನಗೆ ಸಿಕ್ಕಿಲ್ಲ. ಆದರೂ ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಹಿಂದೆ ಸರಿದಿದ್ದೇನೆ ಎಂದು ಗೇಲ್‌ ತಿಳಿಸಿದ್ದಾರೆ.

ಮುಂದಿನ ವರ್ಷ ಬರುವೆ
ಮುಂದಿನ ವರ್ಷ ನಾನು ಮರಳಿ ಬರುವೆ. ಅವರಿಗೆ ನಾನು ಬೇಕಾಗಿದೆ. ನಾನು ಕೋಲ್ಕತಾ, ಆರ್‌ಸಿಬಿ ಮತ್ತು ಪಂಜಾಬ್‌ ತಂಡವನ್ನು ಪ್ರತಿನಿಧಿಸಿದ್ದೇನೆ ಎಂದು ಗೇಲ್‌ ತಿಳಿಸಿದರು.

ಆರ್‌ಸಿಬಿ ಮತ್ತು ಪಂಜಾಬ್‌ ತಂಡ ಪ್ರಶಸ್ತಿ ಗೆಲ್ಲುವುದನ್ನು ನಾನು ಇಷ್ಟಪಡುತ್ತೇನೆ. ಆರ್‌ಸಿಬಿ ಪರ ನನ್ನ ಸಾಧನೆ ಅತ್ಯಂತ ಅದ್ಭುತವಾಗಿತ್ತು ಪಂಜಾಬ್‌ ಕೂಡ ಉತ್ತಮ ತಂಡಗಳಲ್ಲಿ ಒಂದಾಗಿದೆ ಎಂದು ಗೇಲ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next