Advertisement
ಏನಿದು ಷಡ್ಯಂತ್ರ?: ಇತ್ತೀಚೆಗೆ, ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಆರ್.ಎಸ್.ಪೋರಾ ಸೆಕ್ಟರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಯೋಧ ಸೀತಾರಾಮ್ ಯಾದವ್ (28) ಮೇ 18ರ ಮಧ್ಯರಾತ್ರಿ ಗುಂಡೇಟಿನಿಂದ ಸಾವನ್ನಪ್ಪಿದ್ದರು. ಇದು ಗಡಿಯಾಚೆಗಿನ ಪಾಕಿಸ್ತಾನ ಸೈನಿಕರು ನಡೆಸಿದ ಸ್ನೆ„ಪರ್ ದಾಳಿ ಪರಿ ಣಾಮ ಎಂದೇ ಭಾವಿಸಲಾಗಿತ್ತು. ಆದರೆ, ಗಡಿಯಲ್ಲಿನ ಯೋಧರಿಗೆ ನೀಡಲಾಗಿರುವ ಹ್ಯಾಂಡ್ ಹೆಲ್ಡ್ ಥರ್ಮಲ್ ಇಮೇಜರ್ (ಎಚ್‌ಎಚ್‌ಟಿಐ) ಪರಿಕರಗಳಲ್ಲಿ ಮನುಷ್ಯರ ಆಕಾರದ ನೆರಳುಗಳು ಯೋಧನ ಹತ್ತಿರಕ್ಕೆ ಬಂದು ಆತನ ಕಡೆಗೆ ಗುಂಡು ಹಾರಿಸಿರುವುದು ಗೊತ್ತಾಗಿದೆ. ಇದು ಹೇಗಾಯ್ತು ಎಂಬ ಪ್ರಶ್ನೆಗೆ ಉತ್ತರ “ಥರ್ಮಲ್ ಕೆಮೊಫ್ಲಾಜ್’ ಉಡುಪು. ಇದು ಹಸಿರಿಗೆ ಹೊಂದಿಕೊಂಡಂತೆ ಇರುವುದರಿಂದ ಪತ್ತೆ ಕಷ್ಟವಾಗಿದೆ ಎಂದೇ ಹೇಳಲಾಗುತ್ತಿದೆ.
ಸಾಮಾನ್ಯವಾಗಿ ನೈಟ್ ವಿಷನ್ ಪರಿಕರಗಳು ತಮ್ಮ ಎದುರಿಗಿರುವ ಮನುಷ್ಯರ, ಪ್ರಾಣಿಗಳ ದೇಹದ ಉಷ್ಣಾಂಶವನ್ನು ದೂರದಿಂದಲೇ ಗ್ರಹಿಸಿ ಅವುಗಳ ಚಲನ ವಲನವನ್ನು ಛಾಯೆಯ ರೂಪದಲ್ಲಿ ಇಲೆಕ್ಟ್ರಾನಿಕ್ ಪರದೆಯ ಮೇಲೆ ಮೂಡಿಸುತ್ತವೆ. ಕೆಮೊಫ್ಲಾಜ್ ಧರಿಸಿದ ಮನುಷ್ಯ ಅಥವಾ ಪ್ರಾಣಿಯ ದೇಹದ ಉಷ್ಣಾಂಶ ಹೊರಕ್ಕೆ ಬಾರದಂತೆ ಈ ಕೆಮೊಫ್ಲಾಜ್ ಸೂಟ್‌ಗಳು ತಡೆಯುವುದರಿಂದ ಇವನ್ನು ಧರಿಸಿದ ಮನುಷ್ಯರು, ನೈಟ್ ವಿಷನ್ ಪರಿಕರಗಳಿಗೆ ಕಾಣಿಸುವುದೇ ಇಲ್ಲ. “ಥರ್ಮಲ್ ಕೆಮೊಫ್ಲಾಜ್’ ಉಡುಪುಗಳಿಂದ ಮನುಷ್ಯರ ಬಿಂಬ ಗೊತ್ತಾಗದಿದ್ದರೂ ಅವರ ನೆರಳನ್ನೂ ಎಚ್‌ಎಚ್‌ಟಿಐ ಪರಿಕರಗಳು ನಿಖರವಾಗಿ ದಾಖಲಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಮತ್ತೆ ಪುಂಡಾಟ: ಐವರಿಗೆ ಗಾಯ
ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಯ ಅಖೂ°ರ್‌ನಿಂದ ಸಾಂಬಾ ಪ್ರಾಂತ್ಯಗಳ ಮೇಲೆ ಪಾಕಿಸ್ತಾನ ಸೇನೆಯು, ಮಂಗಳವಾರ ನಡೆಸಿರುವ ಶೆಲ್ ದಾಳಿಯಿಂದಾಗಿ 70 ವರ್ಷದ ವೃದ್ಧ ಸೇರಿ ಐವರು ನಾಗರಿಕರು ಗಾಯಗೊಂಡಿದ್ದಾರೆ. ಏತನ್ಮಧ್ಯೆ, ಅಂತಾರಾಷ್ಟ್ರೀಯ ಗಡಿ ಮತ್ತು ಎಲ್‌ಒಸಿ ಬಳಿ ಪಾಕಿಸ್ತಾನ ಕಳೆದೊಂದು ವಾರದಿಂದ ನಡೆಸುತ್ತಿರುವ ಅಪ್ರಚೋದಿತ ದಾಳಿ ವಿರೋಧಿಸಿ ಜಮ್ಮು ಕಾಶ್ಮೀರ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ವಕೀಲರು, ಮಂಗಳವಾರ ತಮ್ಮ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಪ್ರತಿಭಟಿಸಿದ್ದಾರೆ.