Advertisement

ತೆರಿಗೆ ಹಣದಲ್ಲಿ ಕಾಮನ್ವೆಲ್ತ್‌ಗೆ ಹೋಗೆವು

07:30 AM Mar 24, 2018 | Team Udayavani |

ಹೈದರಾಬಾದ್‌: ಮುಂಬರುವ ಕಾಮನ್ವೆಲ್ತ್‌ ಕ್ರೀಡಾಕೂಟದ ವೇಳೆ ಸ್ಪರ್ಧಿಗಳ ಜತೆ ಪೋಷಕರು  ಪ್ರಯಾಣಿಸುವಂತಿಲ್ಲ ಎಂದು ಕೇಂದ್ರ ಕ್ರೀಡಾ ಸಚಿವಾ ಲಯ ಖಡಕ್‌ ಸೂಚನೆ ನೀಡಿದೆ.  ಈ ಬೆನ್ನಲ್ಲೇ ವಿಶೇಷ ಅವಕಾಶದಡಿ ಒಲಿಂಪಿಯನ್‌ ಪದಕ ತಾರೆಗಳಾದ  ಸಿಂಧು, ಸೈನಾ ನೆಹ್ವಾಲ್‌ ಪೋಷಕರಿಗೂ ಅವಕಾಶ ನೀಡಲಾಗಿದೆ ಎನ್ನುವ ಸುದ್ದಿ ಕೇಳಿ ಬಂದಿದೆ. ಇದಕ್ಕೆ ಟೀಕೆ ಕೂಡ ವ್ಯಕ್ತವಾಗಿದೆ. ಆದರೆ ಸಿಂಧು, ಸೈನಾ ಪೋಷಕರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. 

Advertisement

ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿರುವ ಸಿಂಧು ತಂದೆ ರಮಣ, “ಈ ಹಿಂದೆ ನನ್ನ ಮಗಳ ಜತೆ ಅನೇಕ ಸ್ಪರ್ಧೆಗಳಿಗೆ ತೆರಳಿದ್ದೇನೆ. ಆಗ ನಾವೇ ಕೈಯಿಂದ ಹಣ ಹಾಕಿ ಹೋಗಿದ್ದೆವು. ಮುಂದಿನ ಕಾಮನ್ವೆಲ್ತ್‌ ಗೇಮ್ಸ್‌ಗೂ ನಮ್ಮ ಹಣದಲ್ಲೇ ಹೋಗಿ ಬರುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. 

ಸೈನಾ ತಂದೆ ಹರ್‌ವೀರ್‌ ಮಾತನಾಡಿ, “ಗೋಲ್ಡ್‌ ಕೋಸ್ಟ್‌ ನಲ್ಲಿ ನನಗೆ ಸ್ನೇಹಿತರಿದ್ದಾರೆ. ಅವರ ಮನೆಯಿಂದಲೇ ಕೂಟ ವೀಕ್ಷಿಸಲು ತೆರಳುತ್ತೇನೆ. ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡುತ್ತೇನೆ. ತಂಡದೊಂದಿಗೆ ಹೋಗುವುದಿಲ್ಲ. ರಿಯೋ ಒಲಿಂಪಿಕ್ಸ್‌ಗೂ ನಮ್ಮ ಕೈಯಿಂದಲೇ ಹಣ ಹಾಕಿ ಹೋಗಿದ್ದೆವು’ ಎಂದು ಸ್ಪಷ್ಟನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next