Advertisement

ಟ್ರಂಪ್‌ಗೆ ಮೋದಿ 3 ಕೋತಿ ತೋರಿಸಿ ಮಾಡಿದ್ದೇನು?

11:49 PM Feb 25, 2020 | Lakshmi GovindaRaj |

ಯಾದಗಿರಿ: ಸಬರಮತಿ ಆಶ್ರಮದಲ್ಲಿನ ಗಾಂಧೀಜಿ ಆದರ್ಶದ ಮೂರು ಕೋತಿಗಳನ್ನು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಅವರಿಗೆ ತೋರಿಸಿದ ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ಏನು ಮಾಡುತ್ತಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಡಾ| ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

Advertisement

ನಗರದಲ್ಲಿ ರಾಬ್ತಾ- ಇ-ಮಿಲ್ಲತ್‌ ಸಮಿತಿ ಮಂಗಳವಾರ ಆಯೋಜಿಸಿದ್ದ ಭಾರತ್‌ ಬಚಾವ್‌ ಆಂದೋಲನದಲ್ಲಿ ಸಿಎಎ, ಎನ್‌ಪಿಆರ್‌, ಎನ್‌ಆರ್‌ಸಿ ಕಾನೂನು ವಿರೋಧಿ ಸಮಾವೇಶದಲ್ಲಿ ಮಾತನಾಡಿದ ಅವರು, ಕೆಟ್ಟದ್ದನ್ನು ನೋಡಬಾರದು, ಕೇಳಬಾರದು ಹಾಗೂ ಮಾತನಾಡಬಾರದು ಎನ್ನುವ ಸನ್ನೆ ಮಾಡುವ ಕೋತಿಗಳನ್ನು ಪ್ರಧಾನಿ ಮೋದಿ ಟ್ರಂಪ್‌ಗೆ ತೋರಿಸಿ ಜನರಿಗೆ ಕೆಟ್ಟದ್ದನ್ನು ಮಾಡುತ್ತಿದ್ದಾರೆ ಎಂದರು.

ಎನ್‌ಪಿಆರ್‌, ಎನ್‌ಆರ್‌ಸಿ ಹಾಗೂ ಸಿಎಎ ವಿಷಯದಲ್ಲಿ ದೇಶದಲ್ಲಿ ದೊಡ್ಡ ಹೋರಾಟ ನಡೆಯುತ್ತಿದೆ. ಇದು ಒಂದು ಸಮಾಜಕ್ಕೆ ಸಂಬಂಧಪಟ್ಟ ಕಾನೂನು ಅಲ್ಲ. ಕೆಲವೊಬ್ಬರು ಇದು ಮುಸ್ಲಿಮರಿಗೆ ತೊಂದರೆಯಾಗುತ್ತದೆ. ಬೇರೆಯವರಿಗೆ ತೊಂದರೆ ಇಲ್ಲ ಎನ್ನುವ ಭಾವನೆ ಬಿತ್ತುತ್ತಿದ್ದಾರೆ. ಆದರೇ ಇದು ನೂರು ಕೋಟಿ ಜನರಿಗೆ ಅನ್ಯಾಯವಾಗುವ ಕಾನೂನು. ಸಂವಿಧಾನದ ಪ್ರಕಾರ ಸಿಎಎ ಇಲ್ಲ ಎಂದರು.ಸಂವಿಧಾನ ಎಲ್ಲರೂ ಸಮಾನರು ಎಂದು ಹೇಳುತ್ತದೆ. ಧರ್ಮದ ಹೆಸರಿನಲ್ಲಿರುವ ಕಾನೂನು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next