Advertisement

ಉತ್ತರ ಕೊರಿಯ ನಾಯಕನ ಮಲ ಸಹೋದರ ಹಂತಕಿಯರಿಗೆ ಬಲಿ ?

12:20 PM Feb 15, 2017 | udayavani editorial |

ಸೋಲ್‌/ಕೌಲಾಲಂಪುರ : ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಮಲ ಸಹೋದರನನ್ನು ಮೊನ್ನೆ ಸೋಮವಾರ ಇಬ್ಬರ ಉತ್ತರ ಕೊರಿಯದ ಮಹಿಳಾ ಏಜಂಟರು ಮಲೇಶ್ಯದಲ್ಲಿ  ಹತ್ಯೆಗೈದಿರುವುದಾಗಿ ದಕ್ಷಿಣ ಕೊರಿಯದ ಗೂಢಚರ ಸಂಸ್ಥೆ ಶಂಕಿಸಿದೆ.

Advertisement

ಇಂದು ಬುಧವಾರ ಸೋಲ್‌ನಲ್ಲಿನ ದಕ್ಷಿಣ ಕೊರಿಯದ ಶಾಸಕರು ಹೇಳಿಕೆ ನೀಡಿ, “ಉತ್ತರ ಕೊರಿಯದ ನಾಯಕ ಕಿಮ್‌ ಜಾಂಗ್‌ ಉನ್‌ ಅವರ ಮಲ ಸಹೋದರ ಕಿಮ್‌ ಜಾಂಗ್‌ ನಾಮ್‌ ಅವರನ್ನು ಮಹಿಳಾ ಏಜಂಟರು ವಿಷ ಉಣಿಸಿ ಸಾಯಿಸಿರುವುದು ದಕ್ಷಿಣ ಕೊರಿಯ ಗೂಢಚರ ಸಂಸ್ಥೆಗೆ ವಿಶ್ವಸನೀಯವಾಗಿ ತಿಳಿದು ಬಂದಿದೆ’ ಎಂದು ಹೇಳಿದ್ದಾರೆ. 

“ಕಿಮ್‌ ಜಾಂಗ್‌ ನಾಮ್‌ ಅವರ ಹತ್ಯೆಗೆ 2012ರಿಂದಲೂ ವಿಫ‌ಲ ಯತ್ನಗಳು ನಡೆಯುತ್ತಲೇ ಬಂದಿವೆ. ಉತ್ತರ ಕೊರಿಯದ ಸರ್ವಾಧಿಕಾರಿ ನಾಯಕ ಕಿಮ್‌ ಜಾಂಗ್‌ ಉನ್‌ ಅವರು ನ್ಯಾಮ್‌ ಅವರ ಹತ್ಯೆಗೆ ಸ್ಥಾಯೀ ಆದೇಶ ನೀಡಿದ್ದರು ಎಂದು ಗುಪ್ತಚರ ಸಂಸ್ಥೆ ತಮಗೆ ತಿಳಿಸಿತ್ತು’ ಎಂದು ದ.ಕೊರಿಯದ ಶಾಸಕರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next