Advertisement

ಡಿಕ್ಟೇಟರ್‌ ಹುಚ್ಚ ವೆಂಕಟ್‌ ಧ್ವನಿ ಸುರುಳಿ ಬಿಡುಗಡೆ

12:40 AM Apr 25, 2019 | Lakshmi GovindaRaju |

ಬೆಂಗಳೂರು: “ಡಿಕ್ಟೇಟರ್‌ ಹುಚ್ಚ ವೆಂಕಟ್‌’ ಚಿತ್ರದ ಧ್ವನಿಸುರುಳಿಯನ್ನು ತಮ್ಮ ಯುಟ್ಯೂಬ್ ಚಾನೆಲ್‍ನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ನಟ ಹುಚ್ಚ ವೆಂಕಟ್‌ ಹೇಳಿದರು.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಗ್‌ಬಾಸ್‌ ಸ್ಪರ್ಧೆಯಿಂದ ಹೊರ ಬಂದ ನಂತರ ಸುದ್ದಿ ಮಾಧ್ಯಮ ಮತ್ತು ಪತ್ರಕರ್ತರ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಸಾಧ್ಯವಾಯಿತು. ಹೀಗಾಗಿ ಪತ್ರಕರ್ತರ ಜವಾಬ್ದಾರಿ ಹಾಗೂ ಕಷ್ಟವನ್ನು ಕಥಾ ವಸ್ತುವಾಗಿಸಿಕೊಂಡು “ಡಿಕ್ಟೇಟರ್‌ ಹುಚ್ಚ ವೆಂಕಟ್‌’ ಚಿತ್ರ ನಿರ್ಮಿಸುತ್ತಿದ್ದೇನೆ ಎಂದರು.

ಧ್ವನಿಸುರುಳಿಯು ಹುಚ್ಚ ವೆಂಕಟ್‌ ಯುಟ್ಯೂಬ್‌ ಚಾನೆಲ್‍ನಲ್ಲಿ ಲಭ್ಯವಿದೆ. ಇದರಲ್ಲಿ ನಾನು ನಿರೂಪಕ ಹಾಗೂ ಪತ್ರಕರ್ತನ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು, ಎಲ್ಲಾ ಹಾಡುಗಳನ್ನು ನಾನೇ ಬರೆದಿದ್ದೇನೆ. ಆಕಾಂಕ್ಷಾ ಬಾದಾಮಿ ಹಾಗೂ ಅನನ್ಯ ಭಟ್‌ ಹಾಡಿಗೆ ಧ್ವನಿ ಗೂಡಿಸಿದ್ದು, ಸತೀಶ್‌ ಬಾಬು ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next