ಗುವಾಹಟಿ : ವಿಮಾನದ ಪೈಲಟ್ ವಿಮಾನದ ಇಂಜಿನ್ನಲ್ಲಿ ತೊಂದರೆಯಾಗಿದೆ ಎಂದು ಘೋಷಿಸಿದ ನಂತರ ದಿಬ್ರುಗಢ್ಗೆ ಹೊರಟಿದ್ದ ಇಂಡಿಗೋ ವಿಮಾನವನ್ನು ಗುವಾಹಟಿಯ ಲೋಕಪ್ರಿಯಾ ಗೋಪಿನಾಥ್ ಬೊರ್ಡೊಲೊಯ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಿರುಗಿಸಲಾಯಿತು.
ಕೇಂದ್ರ ಪೆಟ್ರೋಲಿಯಂ- ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ರಾಮೇಶ್ವರ್ ತೇಲಿ ಮತ್ತು ಇಬ್ಬರು ಬಿಜೆಪಿ ಶಾಸಕರಾದ ಪ್ರಶಾಂತ್ ಫುಕನ್ ಮತ್ತು ತೆರಾಶ್ ಗೋವಾಲಾ ಸೇರಿದಂತೆ 150 ಕ್ಕೂ ಹೆಚ್ಚು ಪ್ರಯಾಣಿಕರು ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
ರಾಮೇಶ್ವರ್ ತೇಲಿ “ನಾನು ಮತ್ತು ಬಿಜೆಪಿ ಶಾಸಕರಾದ ಪ್ರಶಾಂತ್ ಫುಕನ್ ಮತ್ತು ತೆರಾಶ್ ಗೋವಾಲಾ ಅವರೊಂದಿಗೆ ಇಂಡಿಗೋ ವಿಮಾನದಲ್ಲಿದ್ದೆ. ವಿಮಾನವು 15 ರಿಂದ 20 ನಿಮಿಷಗಳ ಕಾಲ ಗಾಳಿಯಲ್ಲಿದ್ದು ಗುವಾಹಟಿಯ ದಿಬ್ರುಗಢ ವಿಮಾನ ನಿಲ್ದಾಣಕ್ಕೆ ಬದಲಾಯಿಸಲಾಯಿತು. ನಾವೆಲ್ಲರೂ ಸುರಕ್ಷಿತವಾಗಿದ್ದೇವೆ” ಎಂದು ಹೇಳಿದ್ದಾರೆ.