ಕ್ವಾಝುಲು ನಟಾಲ್ (ದ.ಆಫ್ರಿಕಾ): ಕಳೆದ ಶನಿವಾರದಿಂದ ದಕ್ಷಿಣ ಆಫ್ರಿಕಾದಲ್ಲಿ ಭಾರೀ ಗದ್ದಲವುಂಟಾಗಿದೆ. ಕಾರಣವೇನು ಗೊತ್ತಾ? ಕ್ವಾಝುಲು ನಟಾಲ್ ಎಂಬ ಪ್ರಾಂತ್ಯದ ಕ್ವಾಲ್ಹತ್ತಿ ಎಂಬ ಹಳ್ಳಿಯ ತೆರೆದ ಜಾಗವೊಂದರಲ್ಲಿ ವಜ್ರ ಸಿಗುತ್ತಿದೆ ಎಂದು ಸುದ್ದಿ ಹರಡಿರುವುದು.
ದನಗಾಹಿಯೊಬ್ಬ ನೆಲ ಅಗೆಯುವಾಗ ತನಗೆ ವಜ್ರ ಸಿಕ್ಕಿದೆ ಎಂದು ಸುದ್ದಿ ಹಬ್ಬಿಸಿದ್ದ. ಅದರ ಬೆನ್ನಲ್ಲೇ ದ.ಆಫ್ರಿಕಾದ ಮೂಲೆಮೂಲೆಯಿಂದ ಜನ ಗುದ್ದಲಿ ಹಿಡಿದುಕೊಂಡು, ಕ್ವಾಲ್ಹತ್ತಿಯ ನೆಲ ಅಗೆಯಲು ಶುರು ಮಾಡಿದ್ದಾರೆ! ಕೆಲವರು ಅದನ್ನು ಕ್ವಾರ್ಟ್ ಹರಳುಗಳಿರಬಹುದೆಂದು ಊಹಿಸಿದ್ದಾರೆ.
ಅಲ್ಲಿ ಹಲವರಿಗೆ ಹರಳುಗಳು ಸಿಕ್ಕಿವೆ. ಇದರಿಂದ ತಮ್ಮ ಜೀವನವೇ ಬದಲಾಗಬಹುದೆಂದು ಅಲ್ಲಿನ ಹಲವರ ಆಶಾಭಾವ. ಕೆಲಸವೇ ಇಲ್ಲದೇ ತಾವು ಪರದಾಡುತ್ತಿದ್ದೇವೆ, ಈ ಹರಳುಗಳನ್ನು ನೋಡಿದ ನನ್ನ ಕುಟುಂಬಸ್ಥರು ಖುಷಿಯಲ್ಲಿ ತೇಲಾಡಿದ್ದಾರೆ ಎಂದು ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ :ಕುಡಿದ ಅಮಲಿನಲ್ಲಿ ತಮ್ಮನನ್ನೇ ಕಲ್ಲಿನಿಂದ ಹೊಡೆದು ಕೊಂದ ಅಣ್ಣ
ಈ ನಡುವೆ ದ.ಆಫ್ರಿಕಾ ಸರ್ಕಾರ ಭೂಗೋಳ ಶಾಸ್ತ್ರಜ್ಞರು, ಗಣಿತಜ್ಞರ ಒಂದು ತಂಡವನ್ನು ಕಳುಹಿಸಿ, ಅಲ್ಲಿ ಸಿಗುತ್ತಿರುವ ಹರಳುಗಳ ಮೂಲವೇನು ಎಂದು ಪರಿಶೀಲಿಸುತ್ತಿದೆ. ಈ ಯಾವ ಬೆಳ ವ ಣಿ ಗೆಯೂ ಅಲ್ಲಿ ನೆಲ ಅಗೆಯುವವರನ್ನು ಎದೆಗುಂದಿಸಿಲ್ಲ. ಎಲ್ಲರೂ ಧೈರ್ಯವಾಗಿ ಅಗೆತ ಮುಂದುವರಿಸಿದ್ದಾರೆ.